ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅಂಗಳ ಶ್ರೀ ಶ್ರೀಪಾದವಲ್ಲಭರ ಚರಿತ್ರೆ ಪುಟ 114

321
Share

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 13
ವಿಶೇಷ ಸೂಚನೆ : ಭಜನೆ ಆಲಿಸಿ ಚರಿತ್ರೆ ಪಠನೆ ಮಾಡಿ
ಪುಟ – 114
ಮಂಡಲ ಕಾಲ ಅರ್ಚನೆ ಹಾಗೂ ಶ್ರೀಪಾದ ಶ್ರೀವಲ್ಲಭ ಚರಿತಾಮೃತ ಪಾರಾಯಣದ ಫಲ
ಶ್ರೀಪಾದರು ಗಣೇಶ ಚತುರ್ಥಿಯ ದಿನ ಅವತರಿಸಿರುವುದರಲ್ಲಿ 1 ದೊಡ್ಡ ವಿಶೇಷವಿದೆ. ಲಾಭನೂ ಗಣೇಶನ ಮಗನು . ಒಂದಾನೊಂದು ಕಾಲದಲ್ಲಿ, ಒಂದಾನೊಂದು ಯುಗದಲ್ಲಿ ಅವನೇ ಲಾಭಾದ ಮಹರ್ಷಿ ಎಂದು ಹೆಸರು ಹೊಂದಿದನು. ಅವನೇ ಶ್ರೀಕೃಷ್ಣಾವತಾರ ಸಮಯದಲ್ಲಿ ನಂದನಾಗಿ ಹುಟ್ಟಿದನು. ಲಾಭಾನೇ ಶ್ರೀಪಾದವಲ್ಲಭ ಅವತಾರದಲ್ಲಿ ಶ್ರೀಪಾದರಿಗೆ ಮಾತಾಮಗನಾಗಿ ಹುಟ್ಟಿದನು. ತನ್ನ ಭಕ್ತರ ಸಮಸ್ತ ವಿಘ್ನಗಳನ್ನು ಹೋಗಲಾಡಿಸಬೇಕೆಂದು ಬಯಸಿ, ತಮ್ಮ ಚೈತನ್ಯದಲ್ಲಿ ವಿಘ್ನೇಶ ತತ್ತ್ವವನ್ನು ಸ್ಥಿರವಾಗಿ ನಿಲ್ಲಿಸಿಕೊಂಡು ಶ್ರೀಪಾದರು ಅವತರಿಸಿದರು. ಇದಕ್ಕೆ ಇಪ್ಪತ್ತೇಳನೇ ನಕ್ಷತ್ರವಾದ ಹಸ್ತಾ ನಕ್ಷತ್ರದಲ್ಲಿ ಕುರುವಪುರದಲ್ಲಿ ಅವರು ಅದೃಶ್ಯರಾದರು. ಅವರ ಜಾತಕದ ಪ್ರಕಾರ 27 ನಕ್ಷತ್ರಗಳಲ್ಲಿ ಸಂಚರಿಸುವ ನವಗ್ರಹಗಳಿಂದ ಒದಗುವ ಅನಿಷ್ಠ ಫಲಗಳು ತೊಲಗಿ ಹೋಗಲು ಶ್ರೀಪಾದರ ಭಕ್ತರು ಮಂಡಲ ದೀಕ್ಷೆಯನ್ನು ವಹಿಸಬೇಕು . 1 ಮಂಡಲ ಶ್ರದ್ಧಾಭಕ್ತಿಯಿಂದ ಶ್ರೀಪಾದರನ್ನು ಅರ್ಚಿಸಿದರೆ ಅಥವ ದಿವ್ಯ ಚರಿತ್ರೆಯನ್ನು ಪಾರಾಯಣ ಮಾಡಿದರೆ ಸರ್ವಾಭೀಷ್ಟಗಳು ಸಿದ್ಧಿಸುತ್ತವೆ .
ಮನೋಬುದ್ಧಿ ಚಿತ್ತ ಅಹಂಕಾರಗಳು ಪ್ರತಿಯೊಂದು ಹತ್ತು ದಿಕ್ಕುಗಳಲ್ಲಿ ತಮ್ಮ ಸ್ಪಂದನಗಳನ್ನು ಪ್ರಕಂಪನಗಳನ್ನು ಪ್ರಸರಿಸುತ್ತವೆ. ಆದರೆ ಅವುಗಳ ಪ್ರಕಂಪನಗಳು ಬೇರೆಬೇರೆಯಾಗಿ 40 ದಿಕ್ಕುಗಳಲ್ಲಿ ಪ್ರಸಾರವಾಗುತ್ತಿವೆ. ಈ 40 ದಿಶೆಗಳಲ್ಲಿನ ಪ್ರಕಂಪನಗಳನ್ನು ಒಟ್ಟು ಸೇರಿಸಿ ಶ್ರೀಪಾದರ ಕಡೆಗೆ ಮರಳಿಸಿದರೆ ಅವು ಶ್ರೀಪಾದರ ಚೈತನ್ಯವನ್ನು ಸೇರುವವು. ಅಲ್ಲಿ ತಕ್ಕ ರೀತಿಯಲ್ಲಿ ಸಂಸ್ಕಾರವನ್ನು ಹೊಂದಿ ಯೋಗ ಸ್ಪಂದನಗಳಾಗಿ ಮಾರ್ಪಾಟು ಹೊಂದಿ ಮತ್ತೆ ಸಾಧಕನನ್ನು ಸೇರುತ್ತವೆ . ಆಗ ಭಕ್ತನ ಧರ್ಮ ಬದ್ಧವಾದ ಎಲ್ಲ ಕೋರಿಕೆಗಳು ಸಿದ್ಧಿಸುತ್ತವೆ . ಮಗು ! ಶಂಕರಭಟ್ಟ ! ನೀನು ಶ್ರೀಪಾದರ ಚರಿತ್ರೆಯನ್ನು ಬರೆಯುವೆ ಎಂದು ಅಂತರ್ದೃಷ್ಟಿಯಿಂದ ತಿಳಿದುಕೊಂಡೆನು . ಲೋಕದಲ್ಲಿ ವ್ಯವಹಾರದಲ್ಲಿರುವ ಪಾರಾಯಣ ಗ್ರಂಥಗಳಲ್ಲಿ ರಚನಾಕಾರನ ವಂಶಾವಳಿ, ವಿವಿಧ ಸ್ತೋತ್ರಗಳು ಮೊದಲಾದವು ಇರುತ್ತವೆ. ನೀನು ಬರೆಯುವ ಪ್ರಭು ಚರಿತ್ರೆಯಲ್ಲಿ ನಿನ್ನ ವಂಶಾವಳಿಯ ವರ್ಣನೆ ಬೇಕಿಲ್ಲ . ಪ್ರಭುಗಳನ್ನು ಧ್ಯಾನಿಸಿ ನಿನ್ನ ಒಳ ಕಣ್ಣಿನಲ್ಲಿ ಶ್ರೀಪಾದರನ್ನು ನಿಲ್ಲಿಸಿಕೊಂಡು ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ರಚಿಸು. ಆಗ ಶ್ರೀಪಾದ ಚೈತನ್ಯವು ನಿನ್ನ ಲೇಖನಿಯಿಂದ ಯಾವುದು ಬೆಳಕಿಗೆ ಬರುವುದೊ ಅದು ಮಾತ್ರವೇ ಸತ್ಯವಾಗುವುದು. ಆ ವಿಧವಾದ ಸ್ಫೂರ್ತಿಯಲ್ಲಿ ಬರೆಯಲ್ಪಡುವ ಗ್ರಂಥಗಳಾಗಲೀ, ಉಚ್ಚರಿಸಲ್ಪಡುವ ಮಂತ್ರಗಳಾಗಲಿ ಛಂದೋಬದ್ಧತೆ ಇರಬೇಕು ಎನ್ನುವ ಅವಶ್ಯಕತೆ ಇಲ್ಲ . ಕೆಲವು ಮಹಾಭಕ್ತರು ತಮಗೆ ದೈವ ಸಾಕ್ಷಾತ್ಕಾರವಾದಾಗ ಅವರವರ ಪ್ರದೇಶ ಭಾಷೆಯಲ್ಲಿ ವ್ಯವಹಾರದಲ್ಲಿರುವ ಪದಗಳ ಮೂಲಕ ಸ್ತೋತ್ರ ಮಾಡಿದರು . ಅವರು ಸಾಧಾರಣ ವ್ಯಾಕರಣ ನಿಬಂಧನೆಗಳನ್ನು ಕೂಡ ಅತಿಕ್ರಮಿಸಿದರು . ಆದರೂ ಆ ಸ್ತೋತ್ರಗಳನ್ನು ಆ ರೀತಿಯಲ್ಲಿಯೇ ಪಠಿಸಬೇಕು . ಛಂದೋಬದ್ಧವಾಗಿ ಇರಬೇಕಲ್ಲ ಎಂದು ಮಾರ್ಪಾಟು ಮಾಡಿದರೆ ಬಯಸಿದ ಫಲವು ಲಭಿಸುವುದಿಲ್ಲ . ಭಕ್ತನ ಯಾವ ಪದ ಸಮೂಹದ ಮೂಲಕ ಭಗವಂತನು ಸಂತುಷ್ಟನಾದನೋ, ವರವನ್ನು ಕೊಟ್ಟನೋ ಆ ಪದಗಳಲ್ಲಿ ಭಗವಂತನ ಅನುಗ್ರಹ ಶಕ್ತಿ ಇರುತ್ತದೆ . ಆಯಾ ಪದಗಳಿಂದ ಕೂಡಿದ ಸ್ತೋತ್ರಗಳನ್ನು ನಾವು ಪಠಿಸಿದಾಗ ನಮ್ಮ ಚೈತನ್ಯವು ಶೀಘ್ರದಲ್ಲಿ ಭಗವತ್ ಚೈತನ್ಯದ ಸಮೀಪದಲ್ಲಿ ಇರುತ್ತದೆ . ಭಗವಂತನು ಭಾವ ಪ್ರಿಯನಲ್ಲದೇ ಬಾಹ್ಯ ಪ್ರಿಯನಲ್ಲ . ಭಾವನೆ ಅನ್ನುವುದು ಶಾಶ್ವತವಾದ ಶಕ್ತಿ. ಈ ವಿಷಯವನ್ನು ಗಮನದಲ್ಲಿಟ್ಟುಕೋ ” ಎಂದು ಹೇಳಿದರು.
( ಮುಂದುವರೆಯುವುದು )
ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ
ಚುಟುಕು ಸಪ್ತಶತಿ – 115
ಸೀಮೆ ಸಿಟಿಗಳಲ್ಲೆಲ್ಲ ಸಿಮೆಂಟಿನ ರಾಡಿ.
ವಿದ್ಯುತ್ ತಂತಿಯ ಬಳ್ಳಿ, ಬೆಳಕಿನ ಬಲ್ಬು.
ಬೆಳೆದ ಹಣ್ಣು, ಹೂವು, ಕಾಯಿ – ಎಲ್ಲ ಕೃತಕ .
ಅದನ್ನು ತಿಂದವ ಕೂಡ ಕೃತಕನಲ್ಲವೇ ಸ್ವಾಮಿ ?

  • ಸಚ್ಚಿದಾನಂದ ಶ್ರೀ ಸ್ವಾಮೀಜಿ
    ( ಸಂಗ್ರಹ )
  • ಭಾಲರಾ
    ಬೆಂಗಳೂರು

ಜೈ ಗುರುದತ್ತ .


Share