ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ಶ್ರೀಪಾದವಲ್ಲಭರ ಚರಿತ್ರೆ -71.

1114
Share

https://youtu.be/2mXQjrK1bwQ

ಶ್ರೀ ಪಾದ ಶ್ರೀ ವಲ್ಲಭರ ದಿವ್ಯ ಚರಿತಾಮೃತ

ಅಧ್ಯಾಯ – 8
ವಿ.ಸೂ. : ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ಪುಟ – 71

ಕರ್ಮಚಕ್ರ ಪರಿಣಾಮ
ಆಗ ತಿರುಮಲದಾಸನು, ” ನೀನು ಹೇಳುವುದು ಅಕ್ಷರಶಃ ಸತ್ಯ. ಒಬ್ಬನು ನಿಷ್ಕಾರಣವಾಗಿ ಹೆಂಡತಿಯನ್ನು ಹಿಂಸೆ ಪಡಿಸಿದರೆ ಏಳು ಜನ್ಮಗಳಲ್ಲಿ ಬಾಲ ವೈಧವ್ಯವನ್ನು ಅನುಭವಿಸುವನು ಎಂದು ಹೇಳಿದೆ. ಒಬ್ಬ ಗಂಡಸು ನಾಲ್ಕೈದು ಸ್ತ್ರೀಯರನ್ನು ವಿವಾಹವಾದರೆ ಮುಂದಿನ ಜನ್ಮದಲ್ಲಿ ಅವನು ಸ್ವೀಯಾಗಿ ಹುಟ್ಟುವನು. ಆ ನಾಲ್ಕೈದು ಸ್ತ್ರೀಯರು ಪುರುಷ ಜನ್ಮವನ್ನು ಎತ್ತಿ ಆ ಸ್ತ್ರೀಯನ್ನು ಅನುಭವಿಸುವರು. ಹೀಗೆ ಒಂದೇ ಜನ್ಮದಲ್ಲಿ ನಡೆದರೆ ವ್ಯಭಿಚಾರ ದೋಷವು ತಗುಲುವುದು. ಆ ಸ್ತ್ರೀಯನ್ನು ಬೇರೆ ಬೇರೆ ಜನ್ಮಗಳಲ್ಲಿ ಬೇರೆ ಬೇರೆಯಾಗಿ ಆ ಪುರುಷರು ಕೂಡಿಕೊಂಡರೆ ದೋಷವಲ್ಲ. ಇದು ಕಾಲಚಕ್ರ ಪ್ರವಾಹ. ಈ ಮಹಾಚಕ್ರದಲ್ಲಿ ಇಂತಹ ಅನೇಕ ಆಶ್ಚರ್ಯಗಳು ಜರುಗುತ್ತಿರುತ್ತವೆ. ಜನ್ಮವತ್ತಿದರೆ, ಆ ಜನಕ್ಕೆ ಸಂಬಂಧಿಸಿದ ಧರ್ಮವನ್ನು ಆಚರಿಸಬೇಕು. ಪುರುಷ ಜನ್ಮವನ್ನು ಎತ್ತಿದರೆ ಆ ಜನಕ್ಕೆ ಸಂಬಂಧಿಸಿದ ಧರ್ಮವನ್ನು ಆಚರಿಸಬೇಕು. ಗಂಡ ಹೆಂಡಿರನ್ನು ಬೇರ್ಪಡಿಸಿದ ಪಾತಕಿಗಳು ಮುಂದಿನ ಜನ್ಮದಲ್ಲಿ ನಪುಂಸಕ ಜನ್ಮವೆತ್ತಿ ಸಂಸಾರ ಸುಖವೆಂದರೆ ಏನೆಂಬುದೇ ತಿಳಿಯದೇ ದುಃಖವನ್ನು ಅನುಭವಿಸುತ್ತಾ ಬಹಳ ಮನೋವ್ಯಥೆಯನ್ನು ಅನುಭವಿಸುವರು. ಮಾಂಸ ಭೋಜನವು ನಿಷಿದ್ಧ. ಒಬ್ಬನು ಮೇಕೆಯನ್ನು ಕೊಂದು ಹತ್ತು ಜನರನ್ನು ಕೂಡಿ ಅದನ್ನು ಭಕ್ಷಿಸುತ್ತಾನೆಂದುಕೋ, ಆ ಮೇಕೆ ಪ್ರಾಣ ಬಿಡುವಾಗ ವಿಪರೀತವಾದ ದುಃಖವನ್ನು ಅನುಭವಿಸುತ್ತದೆ. ಆ ಬಾಧಮಯ ಸ್ಪಂದನಗಳು ವಾಯು ಮಂಡಲವನ್ನು ಸೇರಿ ಅಡಗಿಕೊಂಡಿರುತ್ತವೆ. ಮಗೂ ವಾಯು ಮಂಡಲದಲ್ಲಿ ಬಾಧಮಯ ಸ್ಪಂದನಗಳು, ಆನಂದಮಯ ಸ್ಪಂದನಗಳು ಎರಡೂ ಇರುತ್ತವೆ. ಸತ್ಕರ್ಮದಿಂದ ಆನಂದಮಯ ಸ್ಪಂದನಗಳೂ ದುಷ್ಕರ್ಮದಿಂದ ಬಾಧಮಯ ಸ್ಪಂದನಗಳೂ ಜನಿಸುತ್ತವೆ. ಸತ್ತು ಈ ಹೋದ ಮೇಕೆ ತನ್ನನ್ನು ತಿಂದ ಹತ್ತು ಜನಗಳನ್ನು ಹಿಂಸಿಸಬೇಕು ಅಂದುಕೊಳ್ಳತ್ತದೆ. ಮಾನವಧ್ಯಾಸ ಮರಣದಿಂದ ಅದು ಮಾನವನಾಗಿ ಹುಟ್ಟುತ್ತದೆ. ಆ ಮಾನವರು ಮೇಕೆ ಜನ್ಮವನ್ನು ಎತ್ತುತ್ತಾರೆ. ಈ ವಿಧವಾಗಿ ಕರ್ಮದ ಫಲಿತಗಳು ಪ್ರತಿಯೊಂದು ಕಾರ್ಯಕ್ಕೂ ಕಾರ್ಯದಲ್ಲಿಯೂ ಆಗುತ್ತಿರುತ್ತದೆ. ಆದುದರಿಂದ ಮಾನವನು ಕ್ಷಮಾಗುಣ ಸಂಪನ್ನನಾಗಬೇಕು. ಸಾತ್ವಿಕನು ಮೇಕೆಯನ್ನು ನೋಡಿದರೂ ಅದರ ಮಾಂಸವನ್ನು ತಿನ್ನುವುದಿಲ್ಲ. ಒಂದು ವೇಳೆ ಆ ಮೇಕೆ ಪೂರ್ವಜನ್ಮದಲ್ಲಿ ತನ್ನನ್ನು ತಿಂದಿದ್ದ ಮನುಷ್ಯನೇ ಆಗಿದ್ದರೂ ಸರಿ ಕ್ಷಮಿಸಿ ಅದಕ್ಕೆ ಪ್ರಾಣದಾನವನ್ನು ಮಾಡಿದರೆ ಇದರಿಂದ ಆ ಕರ್ಮಚಕ್ರವು ನಿಲ್ಲುತ್ತದೆ.
ಶ್ರೀ ಪೀಠಿಕಾಪುರದ ಜನರ ಒಟ್ಟು ಪುಣ್ಯವೂ, ಒಟ್ಟು ಪಾಪವೂ ಸೇರಿ ಅದರ ಫಲವಾಗಿ ಶ್ರೀಪಾದವಲ್ಲಭರು ಅಲ್ಲಿ ಹುಟ್ಟಿದರು. ಪುಣ್ಯವಂತರು ಅವರನ್ನು ದತ್ತನನ್ನಾಗಿ ಸ್ವೀಕರಿಸಿ ಶುಭಫಲಗಳನ್ನು ಹೊಂದಿದರು. ಪಾಪಿಗಳು ಅವರನ್ನು ದತ್ತನೆಂದು ತಿಳಿಯದೆ ಮತ್ತಷ್ಟು ಪಾಪಕರ್ಮಗಳನ್ನು ಮಾಡಿದರು. ಶ್ರೀದತ್ತನನ್ನು ಆರಾಧಿಸುತ್ತಾ ಶ್ರೀಪಾದರನ್ನು ನಿಂದಿಸುವವರು ರೈರವಾದಿ ನರಕಗಳನ್ನು ಹೊಂದುತ್ತಾರೆ. ವಿಷಯವು ಸರಿಯಾಗಿ ಅರ್ಥವಾಗದಿದ್ದ ಪಕ್ಷದಲ್ಲಿ ಮೌನವಾಗಿರುವುದು ಒಳ್ಳೆಯದು. ಅದನ್ನು ಬಿಟ್ಟು ದಿವ್ಯ ಭವ್ಯವಾದ ಆ ಮಹಾಮಂಗಳ ರೂಪವನ್ನು ದೂಷಿಸಬಾರದು. ಶ್ರೀಪಾದರ ಮುಖಕ್ಕೆ ಆರತಿಯನ್ನು ಬೆಳಗುತ್ತಾ ಕಾಲಿಗೆ ಮೊಳೆಯನ್ನು ಹೊಡೆಯುವವರು, ದತ್ತಾವತಾರವನ್ನು ನಿಂದಿಸುವವರು, ಸುಖವ್ಯಾಧಿಗಳ ಪಾಲಾಗುವರು. ಅಷ್ಟೇ ಅಲ್ಲದೆ ಶ್ರೀಪಾದರು ಒಂದು ವಿಚಿತ್ರವಾದ ಯೋಗ ಶಕ್ತಿಯನ್ನು ತಮ್ಮ ಅನುಗ್ರಹ ಲೀಲೆಗಳಲ್ಲಿ ಸೇರಿಸಿದರು. ಪುಣ್ಯ ಜನರಿಗೆ ದತ್ತನಾಮಸ್ಮರಣೆಯಿಂದ ಸರ್ವ ಮನೋರಥಗಳು ಅಯಾಚಿತವಾಗಿ ಅನಾಯಾಸವಾಗಿ ಸಿದ್ಧಿಸುವವು. ಶ್ರೀವಲ್ಲಭರನ್ನು ನಿಂದಿಸುವ ಪಾಪಿಗಳಿಗೆ ವಿಚಿತ್ರವಾದ ವಿಘ್ನಗಳು, ಅನಿಷ್ಟಗಳು ಯಥೇಚ್ಛವಾಗಿ ಸಂಭವಿಸುವವು. ಶ್ರೀಪಾದರು ಅಗಿಸ್ವರೂಪರು. ಅವರ ವಸ್ತ್ರವು ಅಗ್ನಿ ವಸ್ತ್ರವು. ಅವರು ಯೋಗಾಗ್ನಿ ಸ್ವರೂಪರೂ ಕೂಡ. ಅವರ ಪಾದುಕೆಗಳ ಮಹಿಮೆಯನ್ನು ವರ್ಣಿಸಲು ಯುಗಗಳು ಸಾಲುವುದಿಲ್ಲ. ವೇದೋಪನಿಷತ್ತುಗಳಿಗೂ ಕೂಡ ಅವರ ಮಹಿಮೆಯನ್ನು ಸಂಪೂರ್ಣವಾಗಿ ವರ್ಣಿಸಲು ಸಾಧ್ಯವಾಗುವುದಿಲ್ಲ. ಎಷ್ಟೋ ಯುಗಗಳು ಕಳೆದಿವೆ. ಎಷ್ಟೋ ಕಲ್ಪಗಳು ಕಳೆದಿವೆ. ಎಷ್ಟೋ ಸೃಷ್ಟಿ, ಸ್ಥಿತಿ, ಲಯಗಳು ಸಂಭವಿಸಿವೆ. ಆದರೂ ಶ್ರೀದತ್ತ ಪ್ರಭುಗಳು ದತ್ತರೆ ಅವರಿಗೆ ಸಾಟಿ ಬೇರೆ ಯಾರೂ ಇಲ್ಲ. ಅವರೇ ಸಾಕ್ಷಾತ್ ಶ್ರೀಪಾದವಲ್ಲಭರು. ಸೃಷ್ಟಿಯಲ್ಲಿನ ಪ್ರತಿ ಅಣುವೂ ಈ ಪರಮ ಸತ್ಯಕ್ಕೆ ಸಾಕ್ಷಿಯನ್ನು ಹೇಳುತ್ತದೆ.
( ಮುಂದುವರೆಯುವುದು )
ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 72
ಉತ್ತಮರು ಹೇಳುವುದನೆ ಅಧಮರು ಮಾಡುತ್ತಾರೆ.
ಅಧಮ ಬಿದ್ದಾಗ ಅವನನೆತ್ತದಿರುವುದಂ ನಿಂದೆ
ಎಂದು ಹೇಳುವುದುಂಟು.
ಇದು ಎಂಥ ನ್ಯಾಯ ?
ಗುರು – ಸಚ್ಚಿದಾನಂದ

  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share