ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ಶ್ರೀಪಾದ ವಲ್ಲಭರ ಚರಿತ್ರೆಯ ಪುಟ 109

636
Share

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 13
ವಿಶೇಷ ಸೂಚನೆ : ಭಜನೆ ಆರಿಸಿ ಚರಿತ್ರೆ ಪಠಣೆ ಮಾಡಿ
ಪುಟ – 109
ಗಾಯತ್ರಿ ಮಂತ್ರ ಸರ್ವಾಕ್ಷರ ಮಹಿಮೆಯ ವರ್ಣನೆ
ಆನಂದ ಶರ್ಮರು ಹೀಗೆ ವಿವರಿಸಿದರು. ” ಗಾಯತ್ರಿ ಶಕ್ತಿ ವಿಶ್ವವ್ಯಾಪಿ ಶಕ್ತಿ. ಆ ಶಕ್ತಿಯೊಡನೆ ಸಂಬಂಧವನ್ನು ಸ್ಥಾಪಿಸಿಕೊಂಡರೆ ಸೂಕ್ಷ್ಮ ಪ್ರಕೃತಿ ನಮ್ಮ ಸ್ವಾಧೀನವಾಗುತ್ತದೆ . ಅದರಿಂದ ಭೌತಿಕ, ಮಾನಸಿಕ, ಆತ್ಮಕ್ಕೆ ಸಂಬಂಧಿಸಿದ ಕ್ಷೇತ್ರದ ಎಲ್ಲಾ ಸಂಪತ್ತುಗಳನ್ನು ಹೊಂದಲು ಸಾಧ್ಯವಾಗುವುದು. ಶರೀರದಲ್ಲಿ ಬೇರೆಬೇರೆ ಅಂಗಗಳಿಂದ ನಾಡಿಗಳು ಶರೀರವನ್ನೆಲ್ಲಾ ವ್ಯಾಪಿಸಿರುತ್ತದೆ. ಕೆಲವು ನಾಡಿಗಳು ಸೇರಿದರೆ ಗ್ರಂಥಿ ಎಂದೂ ಕರೆಯುತ್ತಾರೆ. ಮಾನವ ಶರೀರದಲ್ಲಿ ವಿವಿಧ ಶಕ್ತಿಗಳು ಈ ಗ್ರಂಥಿಗಳಲ್ಲಿ ನಿಬಿಡೀಕೃತವಾಗಿರುತ್ತವೆ. ಜಪ ಯೋಗ ನಿಷ್ಠರು ಆಯಾ ಮಂತ್ರಗಳನ್ನು ಉಚ್ಚರಿಸಿ ಆಯಾ ಗ್ರಂಥಿಗಳಿಂದ ಆಯಾ ಶಕ್ತಿಗಳನ್ನು ಹೊರ ಬರುವಂತೆ ಮಾಡುತ್ತಾರೆ.
‘ ಓಂ ‘ : ಎಂದು ಉಚ್ಚರಿಸಿದಾಗ ಶಿರಸ್ಸಿನ ಮೇಲಿನ 6 ಅಂಗುಲ ಪ್ರದೇಶದಲ್ಲಿರುವ ಶಕ್ತಿಯು ಜಾಗೃತವಾಗುತ್ತದೆ .
‘ ಭೂಃ ‘ : ಎಂದು ಉಚ್ಚರಿಸಿದಾಗ ಮಾನವನ ಭ್ರೂಮಧ್ಯದ ಮೇಲೆ 3 ಅಂಗುಲ ಪ್ರದೇಶದಲ್ಲಿರುವ ಶಕ್ತಿಯು ಜಾಗೃತವಾಗುತ್ತದೆ .
‘ ಭುವ ‘ : ಎಂದು ಉಚ್ಚರಿಸಿದಾಗ ಮಾನವನ ಭ್ರೂಮಧ್ಯದ ಮೇಲೆ 3 ಅಂಗುಲ ಪ್ರದೇಶದಲ್ಲಿರುವ ಶಕ್ತಿಯ ಜಾಗೃತವಾಗುತ್ತದೆ.
‘ ಸ್ವಃ ‘ : ಎಂದು ಉಚ್ಚರಿಸಿದಾಗ ಎಡ ಕಣ್ಣಿನ ಮೇಲಿನ 4ಬಅಂಗುಲ ಪ್ರದೇಶದಲ್ಲಿರುವ ಶಕ್ತಿಯು ಜಾಗೃತವಾಗುತ್ತದೆ.
‘ ತತ್ ‘ : ಎಂದು ಉಚ್ಚರಿಸಿದಾಗ ಆಜ್ಞಾ ಚಕ್ರ ಪ್ರದೇಶದಲ್ಲಿರುವ ‘ ಸ್ಥಾಪಿನಿ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿ ‘ ಸಾಫಲ್ಯ’ ಶಕ್ತಿಯು ಜಾಗ್ರತವಾಗುತ್ತದೆ .
‘ ಸಃ ‘ : ಎಂದು ಉಚ್ಚರಿಸಿದಾಗ ಎಡಕಣ್ಣು ಪ್ರದೇಶದಲ್ಲಿರುವ ‘ ಸಫಲತೆ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಪರಾಕ್ರಮ ‘ ಶಕ್ತಿಯು ಜಾಗೃತವಾಗುತ್ತದೆ.
‘ ವಿ ‘ : ಎಂದು ಉಚ್ಚರಿಸಿದಾಗ ಬಲಗಣ್ಣು ಪ್ರದೇಶದಲ್ಲಿರುವ ‘ ವಿಶ್ವ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಪಾಲನಾ ‘ ಶಕ್ತಿಯು ಜಾಗೃತವಾಗುತ್ತದೆ .
‘ ತುಃ ‘ : ಎಂದು ಉಚ್ಚರಿಸಿದಾಗ ಎಡಕಿವಿ ಪ್ರದೇಶದಲ್ಲಿರುವ ‘ ತುಷ್ಟಿ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಮಂಗಳಕರ ‘ ಶಕ್ತಿಯು ಜಾಗ್ರತವಾಗುತ್ತದೆ.
‘ ವ ‘ : ಎಂದು ಉಚ್ಚರಿಸಿದಾಗ ಬಲಕಿವಿ ಪ್ರದೇಶದಲ್ಲಿರುವ ‘ ವರದಾ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ಯೋಗ ಶಕ್ತಿಯು ಜಾಗೃತವಾಗುತ್ತದೆ.
‘ ರೇ ‘ : ಎಂದು ಉಚ್ಚರಿಸಿದಾಗ ನಾಸಿಕಾ ಮೂಲ ಪ್ರದೇಶದಲ್ಲಿರುವ ‘ ರೇವತಿ ‘ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಪ್ರೇಮ ‘ ಶಕ್ತಿಯು ಜಾಗೃತವಾಗುತ್ತದೆ .
‘ ಣಿ ‘ : ಎಂದು ಉಚ್ಚರಿಸಿದಾಗ ಮೇಲಿನ ತುಟಿ ಪ್ರದೇಶದಲ್ಲಿರುವ ‘ ಸೂಕ್ಷ್ಮ’ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಘನ ‘ ಶಕ್ತಿಯು ಜಾಗ್ರತವಾಗುತ್ತದೆ.
‘ ಯಂ ‘ : ಎಂದು ಉಚ್ಚರಿಸಿದಾಗ ಕೆಳತುಟಿ ಪ್ರದೇಶದಲ್ಲಿರುವ ‘ ಜ್ಞಾನ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ತೇಜಸ್ಸು ‘ ಶಕ್ತಿಯು ಜಾಗೃತವಾಗುತ್ತದೆ .
‘ ಭರ್ ‘ : ಎಂದು ಉಚ್ಚರಿಸಿದಾಗ ಕಂಠ ಪ್ರದೇಶದಲ್ಲಿರುವ ‘ ಭರ್ಗ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ರಕ್ಷಣೆ ‘ ಶಕ್ತಿಯು ಜಾಗೃತವಾಗುತ್ತದೆ.
‘ ಗೋ ‘ : ಎಂದು ಉಚ್ಚರಿಸಿದಾಗ ಕಂಠ ರೂಪ ಪ್ರದೇಶದಲ್ಲಿರುವ ‘ ಗೋಮತಿ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಬುದ್ಧಿ’ ಶಕ್ತಿಯು ಜಾಗೃತವಾಗುತ್ತದೆ.
‘ ದೇ ‘ : ಎಂದು ಉಚ್ಚರಿಸಿದಾಗ ಎಡ ಎದೆಯ ಅಗ್ರಭಾಗ ಪ್ರದೇಶದಲ್ಲಿರುವ ‘ ದೇವಿಕಾ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ದಮನ ‘ ಶಕ್ತಿಯು ಜಾಗೃತವಾಗುತ್ತದೆ.
‘ ವ ‘ : ಎಂದು ಉಚ್ಚರಿಸಿದಾಗ ಬಲ ಎದೆಯ ಅಗ್ರಭಾಗ ಪ್ರದೇಶದಲ್ಲಿರುವ ‘ ವಾರಾಹಿ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ನಿಷ್ಠೆ ‘ ಶಕ್ತಿಯು ಜಾಗೃತವಾಗುತ್ತದೆ .
‘ ಸ್ಯ ‘ : ಎಂದು ಉಚ್ಚರಿಸಿದಾಗ ಹೊಟ್ಟೆಯಲ್ಲಿನ ಮೇಲ್ಭಾಗ ಮತ್ತು ಪಕ್ಕೆಲುಬಿನ ಕೆಳ ಭಾಗ ಸೇರುವ ಪ್ರದೇಶದಲ್ಲಿರುವ ‘ ಸಿಂಹಿಣಿ ‘ ಎನ್ನುವ ಗ್ರಂಥಿಯನ್ನು ನಿಬಿಡೀಕೃತವಾಗಿದ್ದ ‘ ಧಾರಣೆ ‘ ಶಕ್ತಿಯು ಜಾಗ್ರತವಾಗುತ್ತದೆ.
‘ ಧೀಃ ‘ : ಎಂದು ಉಚ್ಚರಿಸಿದಾಗ ಪಿತ್ತಜನಕಾಂಗ ಪ್ರದೇಶದಲ್ಲಿರುವ ‘ ಧ್ಯಾನ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಪ್ರಾಣ ‘ ಶಕ್ತಿಯು ಜಾಗ್ರತವಾಗುತ್ತದೆ .
‘ ಮ ‘ : ಎಂದು ಉಚ್ಚರಿಸಿದಾಗ ‘ ಗುಲ್ಮ’ ಪ್ರದೇಶದಲ್ಲಿರುವ ಮರ್ಯಾದೆ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಸಂಯಮ ‘ ಶಕ್ತಿಯು ಜಾಗೃತವಾಗುತ್ತದೆ.
‘ ಹಿ ‘ : ಎಂದು ಉಚ್ಚರಿಸಿದಾಗ ನಾಭಿ ಪ್ರದೇಶದಲ್ಲಿರುವ ‘ ಪುಟ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ತಪೋ ‘ ಶಕ್ತಿಯ ಜಾಗೃತವಾಗುತ್ತದೆ.
‘ ಧೀ ‘ : ಎಂದು ಉಚ್ಚರಿಸಿದಾಗ ಬೆನ್ನುಮೂಳೆಯ ಕೆಳತುದಿ ಪ್ರದೇಶದಲ್ಲಿರುವ ‘ ಮೇಧಾ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ದೂರದರ್ಶಿತ ‘ ಶಕ್ತಿಯು ಜಾಗೃತವಾಗುತ್ತದೆ.
‘ ಯೋ ‘ : ಎಂದು ಉಚ್ಚರಿಸಿದಾಗ ಎಡಬುಜ ಪ್ರದೇಶದಲ್ಲಿರುವ ‘ ಯೋಗಮಾಯ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಅಂತರ್ನಿಹಿತ ‘ ಶಕ್ತಿಯು ಜಾಗೃತವಾಗುತ್ತದೆ .
‘ ಯೋ ‘ : ಎಂದು ಉಚ್ಚರಿಸಿದಾಗ ಬಲಭುಜ ಪ್ರದೇಶದಲ್ಲಿರುವ ‘ ಯೋಗಿನಿ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಉತ್ಪಾದನೆ ‘ ಶಕ್ತಿಯು ಜಾಗೃತವಾಗುತ್ತದೆ .
‘ ನಃ ‘ : ಎಂದು ಉಚ್ಚರಿಸಿದಾಗ ಬಲಮೊಣಕೈ ಪ್ರದೇಶದಲ್ಲಿರುವ ‘ ಧಾರಿಣಿ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಸರಸತಾ ‘ ಶಕ್ತಿಯು ಜಾಗೃತವಾಗುತ್ತದೆ .
‘ ಪ್ರ ‘ : ಎಂದು ಉಚ್ಚರಿಸಿದಾಗ ಎಡಮೊಣಕೈ ಪ್ರದೇಶದಲ್ಲಿರುವ ‘ ಪ್ರಭವ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಆದರ್ಶ ‘ ಶಕ್ತಿಯು ಜಾಗೃತವಾಗುತ್ತದೆ.
‘ ಚೋ ‘ : ಎಂದು ಉಚ್ಚರಿಸಿದಾಗ ಬಲ ಮಣಿಕಟ್ಟು ಪ್ರದೇಶದಲ್ಲಿರುವ ‘ಊಷ್ಮಾ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಸಾಹಸ ‘ ಶಕ್ತಿಯು ಜಾಗೃತವಾಗುತ್ತದೆ .
‘ ದ ‘ : ಎಂದು ಉಚ್ಚರಿಸಿದಾಗ ಬಲ ಅಂಗೈ ಪ್ರದೇಶದಲ್ಲಿರುವ ‘ ದೃಶ್ಯ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ವಿವೇಕ ‘ ಶಕ್ತಿಯು ಜಾಗೃತವಾಗುತ್ತದೆ.
‘ ಯಾತ್ ‘ : ಎಂದು ಉಚ್ಚರಿಸಿದಾಗ ಎಡ ಅಂಗೈ ಪ್ರದೇಶದಲ್ಲಿರುವ ‘ ನಿರಂಜನ ‘ ಎನ್ನುವ ಗ್ರಂಥಿಯಲ್ಲಿ ನಿಬಿಡೀಕೃತವಾಗಿದ್ದ ‘ ಸೇವೆ ‘ ಶಕ್ತಿಯು ಜಾಗೃತವಾಗುತ್ತದೆ.
ಈ ವಿಧವಾಗಿ ಗಾಯತ್ರೀಮಂತ್ರದ 24 ಅಕ್ಷರಗಳಿಗೂ ನಮ್ಮ ಶರೀರದ ವಿವಿಧ ಪ್ರದೇಶಗಳಲ್ಲಿರುವ 24 ಗ್ರಂಥಿಗಳಿಗೂ ಆ ಗ್ರಂಥಿಗಳಲ್ಲಿ ನಿಬಿಡೀಕೃತವಾಗಿ 24 ವಿಧವಾದ ಶಕ್ತಿಗಳಿಗೂ ಸನ್ನಿಹಿತ ಸಂಬಂಧವೂ ಇದೆ. 9 ಎನ್ನುವ ಸಂಖ್ಯೆ ಮಾರ್ಪಾಡಾಗದ ಬ್ರಹ್ಮತತ್ತ್ವವನ್ನು ಸೂಚಿಸುತ್ತದೆ. 8 ಎನ್ನುವ ಸಂಖ್ಯೆ ಮಾಯಾ ತತ್ವವನ್ನು ಸೂಚಿಸುತ್ತದೆ .
( ಮುಂದುವರೆಯುವುದು )
ಕೃಪೆ – ಶ್ರೀಕಣ್ವೇಶ್ವರ ಪ್ರಕಾಶನ
ಚುಟುಕು ಸಪ್ತಶತಿ – 110
ದೇವರೆಲ್ಲಿ ಹನು ? ಎಲ್ಲೆಲ್ಲೂ ಇಹನು.
ಹಾಲಿನಲ್ಲಿ ಅಡಗಿರುವ ಬೆಣ್ಣೆ ಹಾಗೆ.
ಮನದಲ್ಲೇ ಮಥಿಸಿದರೆ ಕಾಣದಿರ ದೇವರ ದೇವ –
ನೆನೆದವರ ಮನದಲ್ಲಿ
ಸಚ್ಚಿದಾನಂದ ಶ್ರೀ ಸ್ವಾಮೀಜಿ
( ಸಂಗ್ರಹ )
ಭಾಲರಾ
ಬೆಂಗಳೂರು
ಜೈ ಗುರುದತ್ತ .

Share