ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ಶ್ರೀಪಾದವಲ್ಲಭ ರ ಚರಿತ್ರೆ ಪುಟ -142

305
Share

 

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ – 16
ವಿಶೇಷ ಸೂಚನೆ ಬಜನೆ ಆಲಿಸಿ ಚರಿತ್ರೆ ಪಟನೆ ಮಾಡಿ
ಪುಟ 142

ಶ್ರೀಪಾದರ ನಾಮಸ್ಮರಣೆಯು ನಡೆಯುತ್ತಿದ್ದಾಗ ಮಾಂತ್ರಿಕನು ಕೂಡ ನೃತ್ಯವನ್ನು ಮಾಡುತ್ತಾ ಉಪಶಮನ ಹೊಂದುತ್ತಿದ್ದನು . ನೃತ್ಯವನ್ನು ನಿಲ್ಲಿಸಿದರೆ ಅವನ ಬಾಧೆ ಹೆಚ್ಚುತ್ತಿತ್ತು . ದಿಗಂಬರಾವಸ್ಥೆಯಲ್ಲಿ ನೃತ್ಯ ಮಾಡಲು ಅವನಿಗೆ ಬಾಧಕರವಾಗಿತ್ತು . ಇದೆಲ್ಲವೂ ಸ್ವಯಂ ಕೃತಾಪರಾಧವೆಂದು ಆ ಅಪರಾಧದ ಕರ್ಮಫಲವನ್ನು ಈ ವಿಧವಾಗಿ ಅನುಭವಿಸುತ್ತಿದ್ದೇನೆಂದು ಆತನಿಗೆ ಅರಿವಾಯಿತು . ಎಷ್ಟೋ ಸರ್ಪಗಳನ್ನು ತನ್ನ ಮಂತ್ರ ಶಕ್ತಿಯಿಂದ ಅಗ್ನಿಗೆ ಆಹುತಿ ಮಾಡಿದ ವಿಷಯವನ್ನು ಆತನು ಜ್ಞಾಪಿಸಿಕೊಂಡನು . ತನ್ನ ಅಜ್ಞಾನದಿಂದ ಮಹಾತ್ಮರನ್ನು , ದಿಗಂಬರ ಸನ್ಯಾಸಿಗಳನ್ನೂ ದೂಷಣೆ ಮಾಡಿದ ಫಲವಿದೆಂದು ಅವನಿಗೆ ತಿಳಿಯತೊಡಗಿತು . ಅವನಲ್ಲಿ ಪಶ್ಚಾತ್ತಾಪವು ಹೆಚ್ಚಾಗಿ ಶ್ರೀಪಾದರಲ್ಲಿ ಮನಃಪೂರ್ತಿಯಾಗಿ ಶರಣು ಬಂದನು .
ಅವನ ಮನಸ್ಸಿನಲ್ಲಿ ಈ ಪರಿಣಾಮವಾದ ಮೇಲೆ ಅಗ್ನಿ ಶಾಂತವಾಯಿತು . ನಾನು ನನ್ನ ಉತ್ತರೀಯವನ್ನು ಅವನಿಗೆ ಧರಿಸಿಕೊಳ್ಳಲು ಕೊಟ್ಟೆನು . ಅವನು ಮಹೋತ್ಸಾಹದಿಂದ ಸಂಕೀರ್ತನೆಯಲ್ಲಿ ಪಾಲ್ಗೊಂಡನು . ಸೂರ್ಯೋದಯವಾಗುವ ` ಹೊತ್ತಿಗೆ ಗ್ರಾಮದ ಹಿರಿಯನ ಎರಡನೆಯ ಮಗನಿಗೆ ದೃಷ್ಟಿ ಪೂರ್ತಿಯಾಗಿ ಬಂದಿತು . ಶ್ರೀಪಾದರಿಗೆ ನೈವೇದ್ಯಕ್ಕಿಟ್ಟಿದ್ದ ಹಾಲನ್ನು ದೊಡ್ಡ ಮಗನ ಬಾಯಲ್ಲಿ ಹಾಕಲು ಅವನಿಗೆ ಮತ್ತು ಇಳಿದು ಪ್ರಜ್ಞೆ ಬಂದಿತು . ಮಾಂತ್ರಿಕನು ಶ್ರೀಪಾದವಲ್ಲಭರ ನಾಮಸ್ಮರಣೆ ಮಾಡಿಕೊಂಡು ಸಾಧು ಮನುಷ್ಯನಾಗಿ ಜೀವಿಸುತ್ತೇನೆಂದು ಎಲ್ಲಿಯೋ ಹೊರಟು ಹೋದನು . ಗ್ರಾಮದ ಹಿರಿಯನು ವಿವಾದಾಸ್ಪದ ಭೂಮಿಯನ್ನು ವೃದ್ಧ ದಂಪತಿಗಳಿಗೆ ಸೇರಿದೆಯೆಂದು ತೀರ್ಪು ಕೊಟ್ಟನು .
ಮೂರು ಸರ್ಪರಾಜರು ನಿವಾಸಿಸಿದ ಹುತ್ತದಲ್ಲಿ ಮೂರು ಔದುಂಬರ ವೃಕ್ಷಗಳು ಬೆಳೆದವು . ಕಾಲಾಂತರದಲ್ಲಿ ದತ್ತಾನಂದಾವಧೂತ ಎನ್ನುವ ಸನ್ಯಾಸಿ ಅಯಾಚಿತವಾಗಿ ನಮ್ಮ ಮನೆಗೆ ಬಂದನು . ಆತನು ಈ ಔದುಂಬರ ವೃಕ್ಷದ ಬುಡದಲ್ಲಿ ಧ್ಯಾನಾವಸ್ಥೆಯಲ್ಲಿರುತ್ತಿದ್ದನು . ಒಂದು ಶನಿವಾರ ಪ್ರದೋಷ ಸಮಯದಲ್ಲಿ ನಮ್ಮ ಕೈಯಲ್ಲಿ ತಯಾರು ಮಾಡಿಸಿದ ಹಲ್ವವನ್ನು ಶ್ರೀಪಾದರಿಗೆ ನೈವೇದ್ಯ ಮಾಡಿ ನಮಗೆ ಕೂಡ ಪ್ರಸಾದವಾಗಿ ಕೊಟ್ಟು ತಿನ್ನಲು ಹೇಳಿದನು . ಆತನು ಹೀಗೆ ನುಡಿದನು , ‘ ಶ್ರೀಪಾದರು ಪೀಠಿಕಾಪುರದಲ್ಲಿ ಅವರ ಮಾತಾಮಹರ ಗೃಹದಲ್ಲಿ ಒಂದು ಔದುಂಬರ ವೃಕ್ಷದ ಬುಡದಲ್ಲಿ ಕುಳಿತುಕೊಳ್ಳುತ್ತಿದ್ದರು . ಅವರ ಮಾತೃಶ್ರೀ ಸುಮತಿ ಮಹಾರಾಣಿ ಮಹಾವಾತ್ಸಲ್ಯದಿಂದ ಬೆಳ್ಳಿ ಬಟ್ಟಲಿನಲ್ಲಿ ಹಲ್ವವನ್ನು ತುಂಬಿಸಿ ಆ ವೃಕ್ಷ ಮೂಲದಲ್ಲಿದ್ದ ಶ್ರೀಪಾದರಿಗೆ ತಿನ್ನುಸುತ್ತಿದ್ದರು . ಶ್ರೀಪಾದ ಶ್ರೀವಲ್ಲಭ , ಶ್ರೀನರಸಿಂಹ ಸರಸ್ವತಿ, ಸ್ವಾಮಿ ಸಮರ್ಥ ನಾಮತ್ರಯಗಳ ಸಂಕೇತವೇ ಈ ಮೂರು ವೃಕ್ಷಗಳು , ಪೀಠಿಕಾಪುರದಲ್ಲಿನ ಔದುಂಬರ ವೃಕ್ಷ ಬೀಜಗಳ ಪರಂಪರೆಯಲ್ಲಿನವೇ ಈ ಮೂರು ವೃಕ್ಷಗಳು . ಕಾಲಾಂತರದಲ್ಲಿ ಪೀಠಿಕಾಪುರದಲ್ಲಿದ್ದ ಆ ವೃಕ್ಷಗಳ ಬೀಜಗಳ ಪರಂಪರೆಯಲ್ಲಿನ ಬೀಜವೇ ಶ್ರೀಪಾದರ ಜನ್ಮ ಸ್ಥಳದಲ್ಲಿ ಔದುಂಬರವಾಗಿ ಬೆಳೆಯುತ್ತದೆ . ಅಲ್ಲಿಯೇ ಅವರ ದಿವ್ಯ ಮೂರ್ತಿಯನ್ನು ಪ್ರತಿಷ್ಟಿಸಲಾಗುತ್ತದೆ . ಭವಿಷ್ಯತ್ತಿನಲ್ಲಿ ಆ ಔದುಂಬರ ವೃಕ್ಷ ಮೂಲದಲ್ಲಿರುವ ಶ್ರೀಪಾದರಿಗೆ ಶನಿಪ್ರದೋಷ ಸಮಯದಲ್ಲಿ ಹಲ್ವ ನೈವೇದ್ಯ ಮಾಡುವವರಿಗೆ ಶ್ರೀಪಾದರ ಅನುಗ್ರಹವು ಸೆರಗಿನಂಚಿನಲ್ಲಿರುವ ಬಂಗಾರದಂತಿರುತ್ತದೆ ” ಎಂದರು . ಈ ವಿಚಿತ್ರ ಕಥೆಗಳನ್ನು ಕೇಳಿದ ಬಳಿಕ ನನ್ನ ಭಕ್ತಿಯು ದೃಢವಾಯಿತು . ಆ ಮರುದಿನ ಕುರುಗಡ್ಡೆಗೆ ನಾನು ಪ್ರಯಾಣ ಬೆಳೆಸಿದೆನು .
I I ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ I I
(ಮುಂದುವರೆಯುವುದು)
ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ
ಚುಟುಕು ಸಪ್ತಶತಿ 143
ಮಂಗಳಾರತಿ ಉಷ್ಣ ತೀರ್ಥ ಕುಡಿದರೆ ಶೀತ.
ಕೇಳುವ ಭಜನೆ ಬರಿ ಶಬ್ದ.
ಭಕ್ತಿಯ ಸುಖವೇ ಕಾಣೆ !
ಏನು ಚೋದ್ಯವೋ ದೇವ
– ಸಚ್ಚಿದಾನಂದ ಶ್ರೀ ಸ್ವಾಮೀಜಿ
( ಸಂಗ್ರಹ )
ಭಾಲರಾ
ಬೆಂಗಳೂರು

ಜೈ ಗುರುದತ್ತ


Share