ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 30

888
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 30
ನಿನ್ನೆ ಗರುಕಮಂತನು ಸತ್ಯ ಲೋಕದಲ್ಲಿ ಮತ್ತು ಕೈಲಾಸದಲ್ಲಿ ವೆಂಕಟೇಶ್ವರ ಕಲ್ಯಾಣ ಆಹ್ವಾನ ಪತ್ರಿಕೆ ನೀಡಿದ್ದನ್ನು ಕೇಳಿದೆವು.
” ಮುರಹರ ಮುಕುಂದ ಮಾಧವ
ಹಾಡುವೆ ನಿನ್ನಯ ನಾಮವನು “
ಎಂಬ ಸುಂದರ ಭಜನೆಯೊಂದಿಗೆ ಇಂದಿನ ಸಂಚಿಕೆಯನ್ನು ಆರಂಭಿಸಿದರು ಶ್ರೀ ಸ್ವಾಮೀಜಿ ಯವರು.
ಕಲ್ಯಾಣದ ಸಡಗರ ಸಂಭ್ರಮ ಮುಗಿಲು ಮುಟ್ಟಿತ್ತು. ದೇವಾನುದೇವತೆಗಳೆಲ್ಲಾ ವೇಂಕಟಗಿರಿಗೆ ಹಂದು ತಲುಪುತ್ತಿದ್ದರು. ಪಾರ್ವತಿ ದೇವಿಯು ಸ್ತ್ರೀ ಗಳೊಂದಿಗೆ ಸೇರಿ ಉಸ್ತುವಾರಿ ತೆಗೆದುಕೊಂಡಿದ್ದಳು. ಇಂದ್ರನು ಪ್ರಮುಖ ಪಾತ್ರ ತೆಗೆದುಕೊಂಡಿದ್ದನು. ಇಂದ್ರನು ವಿಶ್ವಕರ್ಮನಿಗೆ ಹೇಳಿ ದಿವ್ಯವಾದ ಮಂದಿರವನ್ನು ನಿರ್ಮಿಸಲು ಹೇಳುವನು. ವೆಂಕಟೇಶ್ವರನು ಎಲ್ಲಾ ದೇವಾನುದೇವತೆಗಳನ್ನೆಲ್ಲ ಸಮಾವೇಶಿಸಿ ತನ್ನ ಕಲ್ಯಾಣಕ್ಕೆ ಅನುಮತಿ ಕೋರುತ್ತಾನೆ. ದೇವಾನುದೇವತೆಗಳು ತಾವು ಏನು ಮಾಡಬೇಕೆಂದು ಆಜ್ಞಾಪಿಸಬೇಕೆಂದು ಕೋರುತ್ತಾರೆ ಎಲ್ಲರೂ ಸಂಭ್ರಮದಿಂದ ಓಡಾಡುತ್ತಿದ್ದಾರೆ ಆದರೆ ಯಾರಿಗೂ ಏನು ಮಾಡಬೇಕೆಂದು ತೋಚುತ್ತಿಲ್ಲ. ಶ್ರೀನಿವಾಸ ನೇ ಯಾರ್ಯಾರು ಏನೇನು ಮಾಡಬೇಕೆಂದು ಮಾರ್ಗದರ್ಶನ ನೀಡಲು ತೊಡಗುತ್ತಾನೆ.
ಶಂಕರನು ಮೇಲುಸ್ತುವಾರಿ ತೆಗೆದುಕೊಳ್ಳುತ್ತಾನೆ. ದೇವಸೇನಾಪತಿ ಸುಬ್ರಮಣ್ಯ ನನ್ನು ಎಲ್ಲರನ್ನು ಆಹ್ವಾನಿಸಲು ನಿಯೋಜಿಸಲಾಗುತ್ತದೆ. ತಾಂಬೂಲ ಕೊಡುವುದು ಮನ್ಮಥನ ಜವಾಬ್ದಾರಿಯಾಗುತ್ತದೆ. ಬಹು ಮುಖ್ಯವಾಗಿ ಅಡುಗೆ ಮಾಡುವ ಜವಾಬ್ದಾರಿ ಅಗ್ನಿ ದೇವನದು. ಸುಗಂಧ ದ್ರವ್ಯ ಸಿಂಪಡಿಸುವುದು ವಾಯುದೇವನ ಕೆಲಸವಾಗುತ್ತದೆ.
ಇನ್ನು ಬಂದವರಿಗೆಲ್ಲಾ ಬಂಗಾರದ ಉಡುಗೊರೆ ನೀಡಬೇಕೆನಿಸುತ್ತದೆ. ಇದಕ್ಕೆ ತಯಾರಾಗಿಯೆ ಬಂದಿದ್ದ ಧನಾಧಿಪತಿ ಕುಬೇಕನು ಈ ಕೆಲಸವನ್ನು ವಹಿಸಿಕೊಳ್ಳುತ್ತಾನೆ.
ಕೇಳಲು ಹಾಸ್ಯಮಯವಾಗಿರಬಹುದು ಆದರೆ ಆಧ್ಯಾತ್ಮಿಕ ವಾಗಿ ಇದನ್ನು ಕೇಳುವುದರಿಂದ ಒಂದೊಂದು ನಾಡಿಗಳಲ್ಲು ಪ್ರಯಾಣಿಸುತ್ತೇವೆ ಎಂದು ಎಂಬುದನ್ನು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ ಶ್ರೀ ಸ್ವಾಮೀಜಿ ಯವರು.
ಅಬ್ಬ ಎಷ್ಟೊಂದು ವೈವೈಭವದಿಂದ ಕೂಡಿದೆ ವೆಂಕಟೇಶ್ವರ ಕಲ್ಯಾಣ. ಮತ್ತೆ ಇದನ್ನು ಶ್ರೀ ಸ್ವಾಮೀಜಿ ಯವರ ಬಾಯಿಂದಲೇ ಕೇಳುವ ಅವಕಾಶ ತಪ್ಪಿಸಿಕೊಳ್ಳಲು ಸಾಧ್ಯವೇ? ಇಲ್ಲತಾನೆ ಮತ್ತೆ ತಡವೇಕೆ ಬನ್ನಿ ಎಂದಿನಂತೆ ನೋಡಿ ಸಂಭ್ರಮಿಸೋಣ. ಅಷ್ಟು ಮಾತ್ರ ಸಾಲದು ಎಲ್ಲರೊಂದಿಗೂ ಹಂಚಿಕೊಳ್ಳೋಣ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share