ಮೈಸೂರು ಪತ್ರಿಕೆ, ಆಧ್ಯಾತ್ಮಿಕ ಅಂಗಳ ಗುರು ಗೀತಾ ಭಾಗ-8

897
Share

ಶ್ರೀ ಗುರು ಗೀತ – ಭಾಗ 8
ಗುರುವಿನ ದರ್ಶನ ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಆರಂಭವಾಗುತ್ತದೆ ಇಂದಿನ ಸಂಚಿಕೆ.
ಪಾದದಿಂದ ಶಿರಸ್ಸಿವ
ನವರೆಗೆ ಕ್ರಮವಾಗಿ ಗುರುವಿನ ಸಮಗ್ರ ರೂಪವನ್ನು ಸ್ಮರಿಸಿ ಧ್ಯಾನಿಸಬೇಕು. ಅದರಿಂದ ವಿಘ್ನಗಳು ನಾಶವಾಗುತ್ತದೆ. ಶಿಷ್ಯ ಮೊದಲು ಪಾದವನ್ನು ದರ್ಶನ ಮಾಡಬೇಕು, ಗುರುವಿನ ದೃಷ್ಟಿ ಶಿಷ್ಯನ ಶಿರಸ್ಸಿನ ಮೇಲೆ ಬೀಳಬೇಕು. ಗುರು ಗೀತೆಯು ಸಂಪೂರ್ಣ ಗುರುತತ್ವವನ್ನು ತಿಳಿಸುತ್ತದೆ.
ಶೌನಕಾದಿಗಳು ಮಹರ್ಷಿಗಳಿಗೆ ಗುರು ಗೀತೆಯ ಮಹತ್ವವನ್ನು ಈ ರೀತಿ ತಿಳಿಸಲು ಆರಂಭಿಸುತ್ತಾರೆ.
ಜಗನ್ಮಾತೆ ಪಾರ್ವತಿ ದೇವಿಯು ಗುರು ದೀಕ್ಷೆಯನ್ನು ಅನುಗ್ರಹಿಸಬೇಕೆಂದು ಜಗದೀಶ್ವರನನ್ನು ಕೋರುತ್ತಾಳೆ.
ಸಾತ್ವಿಕ ಆಹಾರ ಸೇವವೆಯಿಂದ ಸಾತ್ವಿಕ ಗುಣ ಬೆಳೆಯುತ್ತದೆ. ಸದ್ಗುರುವಿನ ಶಕ್ತಿಗಿಂತ ಉತ್ತಮವಾದ ಶಕ್ತಿ ಬೇರೊಂದಿಲ್ಲ. ಅಂತಹ ಶಕ್ತಿಯ ಬಗ್ಗೆ ಪಾರ್ವತಿ ದೇವಿಯು ಪರಮೇಶ್ವರನಲ್ಲಿ ಬೇಡಿಕೊಳ್ಳುತ್ತಾಳೆ. ಪಾರ್ವತಿ ದೇವಿಯ ಈ ಪ್ರಶ್ನೆಯ ಉದ್ದೇಶವನ್ನು ಪರಮೇಶ್ವರನ ಉತ್ತರವನ್ನು ಅತಿ ಸುಂದರವಾಗಿ ವರ್ಣಿಸಿದ್ದಾರೆ ಶ್ರೀ ಶ್ರೀ ಸ್ವಾಮೀಜಿಯವರು.
ಜೈಗುರುದತ್ತ


Share