ಮೈಸೂರಿನಲ್ಲಿ ಮತ್ತೆ ಕೊರೊನ ಆತಂಕ!: ಇಟ್ಟಿಗೆ ಗೂಡು ಸೀಲ್ ಡೌನ್! ಜಿಲ್ಲಾಧಿಕಾರಿ ಸ್ಪಷ್ಟನೆ

2519
Share

ಮೈಸೂರು ಇಟ್ಟಿಗೆಗೂಡು ಬಳಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ ರೋಗಿ ಇರುವ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ
ಇಟ್ಟಿಗೆ ಗೂಡಿನಲ್ಲಿ ಪತ್ತೆಯಾಗಿರುವ ರೊಗಿ ತಮಿಳುನಾಡಿಗೆ ಹೋಗಿ ಬಂದಿದ್ದರು ಎಂದು ಹೇಳಲಾಗಿದೆ. ಸದರಿ ರೋಗಿ ಇಟ್ಟಿಗೆಗೂಡು ಹಾಗೂ ಕೆಲವು ಸ್ಥಳದಲ್ಲಿ ಮಾಡಿರುವುದಾಗಿ ಹೇಳಲಾಗಿದೆ.

ಮೈಸೂರಿಗೆ ನಿನ್ನೆ ಸಂಜೆಯ ಮೇಲೆಯೇ ಎರಡು ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ ಬಂದಿದೆ. ಸ್ಟೇಟ್ ಕನ್ಪರ್ಮ್ ಮಾಡದೆ ಹೇಳಲಿಕ್ಕಾಗದು, ಎರಡು ರಿಸಲ್ಟ್ ಪಾಸಿಟಿವ್ ಬಂದಿರುವುದು ನಿಜ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಎರಡು ರಿಸಲ್ಟ್ ಪಾಸಿಟಿವ್ ಬಂದಿರುವುದು ನಿಜ. ನಿಮಗೆ ಈಗಾಗಲೇ ಹೇಳಲ್ಲ, ಆದರೆ ನಿಮಗೆ ಈಗಾಗಲೇ ಗೊತ್ತಾಗಿದೆ ಅಂತ ಕಾಣತ್ತೆ. ಎರಡು ಪ್ರಕರಣ ರಿಸಲ್ಟ್ ಪಾಸಿಟಿವ್ ಅಂತ ಲ್ಯಾಬ್ ಇಂದ ಬಂದಿರೋದು ನಿಜ. ಸ್ಟೇಟ್ ಯೂನಿಟ್ ಗೆ ವರದಿ ಕಳಿಸಿದ್ದೇವೆ. ಸ್ಟೇಟ್ ಯೂನಿಟ್ ಕನ್ಫರ್ಮ್ ಮಾಡಿ ಬಹುಶಃ ಇವತ್ತಿನ ಬುಲೆಟಿನ್ ನಲ್ಲಿ ಹಾಕ್ತಾರೆ ಎಂದರು.

ಆದರೂ ಕೂಡ ಅದನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕಂಟೈನ್ ಮೆಂಟ್ ನ್ನು ಮಾಡಲು ಈಗಾಗಲೇ ಆದೇಶವನ್ನು ಕೊಟ್ಟಿದ್ದೇವೆ. ನಿನ್ನೆ ರಾತ್ರಿಯೇ ಆದೇಶಕೊಟ್ಟಿದ್ದೇವೆ. ಈಗಾಗಲೇ ಕಂಟೈನ್ ಮೆಂಟ್ ಆಗ್ತಾ ಇದೆ. ಒಬ್ಬರದ್ದು ದೆಹಲಿ ಟ್ರಾವೆಲ್ ಹಿಸ್ಟರಿ ಇದೆ, ಅವರು ಡೆಲ್ಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿ ಹತ್ತು ದಿನ ಇದ್ದು ತದನಂತರ ಮೈಸೂರಿಗೆ ಬಂದಿದ್ದಾರೆ. ಅವರ ಮೊದಲ ವರದಿ ನೆಗೆಟಿವ್ ಬಂದಿತ್ತು. ಆಮೇಲೆ ಒಂದು ವಾರ ಬಿಟ್ಟು ಮುನ್ನೆಚ್ಚರಿಕಾ ಕ್ರಮವಾಗಿ ಸೆಕೆಂಡ್ ಸ್ಯಾಂಪಲ್ ಕೂಡ ತೆಗೆದಿದ್ದಾರೆ. ಅದರಲ್ಲಿ ಪಾಸಿಟಿವ್ ಅಂತ ಬಂದಿದೆ. ಅವರು ವಿದ್ಯಾರ್ಥಿ ಯಾಗಿದ್ದಾರೆ. ಇನ್ನೊಂದು ತಮಿಳುನಾಡಿನಿಂದ ಬಂದಿದ್ದು ಅವರು ಬೇರೆ ವೈಯುಕ್ತಿಕ ಕೆಲಸಕ್ಕೆ ಬಂದಿದ್ದಾರೆ . ಅವರು ಕರೆಕ್ಟಾಗಿ ಮೈಸೂರಿಗೆ ಯಾವತ್ತು ಬಂದರು ಅಂತ ನಾವೀಗ ಚೆಕ್ ಮಾಡುತ್ತಿದ್ದೇವೆ. 6 ತಾರೀಖು ಬಂದರು ಅಂತ ಹೇಳ್ತಿದ್ದಾರೆ. ಬಂದಾಗಲೇನೆ ಅವರಿಗೆ ಸ್ವಲ್ಪ ಲಕ್ಷಣಗಳಿತ್ತು ಹಾಗಾಗಿ ಜೆಎಸ್ ಎಸ್ ಲ್ಲಿ ತೋರಿಸಿದ್ದಾರೆ. ಹಾಗಾಗಿ ಟೆಸ್ಟ್ ಮಾಡ್ಕೊಳ್ಳಿ ಅಂತ ಅಲ್ಲಿ ಅವರು ಹೇಳಿದ್ದಾರೆ. ಈವಾಗ ಕೋವಿಡ್ ಆಸ್ಪತ್ರೆಗೆ ಬಂದು ಸ್ವಾಬ್ ಕೊಟ್ಟು ಟೆಸ್ಟ್ ಮಾಡೋಕೆ ಹೇಳಿದ್ದಾರೆ. ಪಾಸಿಟಿವ್ ಬಂದಿದೆ. ಸ್ಟೇಟ್ ಯುನಿಟ್ ಕನ್ಫರ್ಮ್ ಮಾಡತ್ತೆ. ಈಗಾಗಲೇ ನಾವು ಇಬ್ಬರನ್ನೂ ಶಿಫ್ಟ್ ಮಾಡಿದ್ದೇವೆ. ಸ್ಟೇಬಲ್ ಇದ್ದಾರೆ. ಅದನ್ನು ಇಂಟರ್ ಸ್ಟೇಟ್ ಪ್ರಕರಣ ಅಂತ ಪರಿಗಣಿಸಬೇಕಾಗತ್ತೆ ಎಂದು ಸ್ಪಷ್ಟಪಡಿಸಿದರು.

ರಾಮಕೃಷ್ಣ ನಗರದ್ದು 28ದಿನ ಕಂಟೈನ್ ಮೆಂಟ್ ಝೋನ್ ನ್ನು ಇಟ್ಟುಕೊಳ್ಳಬೇಕಾಗತ್ತೆ. ಕಂಟೈನ್ ಮೆಂಟ್ ಜೋನ್ ನಲ್ಲಿ ಒಳಗಡೆ ಬರುವವರನ್ನು ಕೂಡ ನಾವು ತಪಾಸಣೆ ಮಾಡುತ್ತಾ ಇರುತ್ತೇವೆ. ಅದರಲ್ಲಿ ಯಾವುದಾದರೂ ಅಕಸ್ಮಾತ್ ಪಾಸಿಟಿವ್ ಬಂದರೆ ಮತ್ತೆ ಕಂಟೈನ್ ಮೆಂಟ್ ಝೋನ್ ಮುಂದುವರಿಯತ್ತೆ. ಅದಕ್ಕಾಗಿ ಅಲ್ಲಿ ಟೈಟಾಗಿ ಕಂಟೈನ್ ಮಾಡಿದ್ದೇವೆ ಎಂದರು. ಲಾಕಡ್ ಡೌನ್ ಸಡಿಲಿಕೆಯ ಬಳಿಕ ಅನ್ ಕಂಟ್ರೋಲ್ ಅಂತ ಹೇಳಲಿಕ್ಕಾಗದು. ಹಿಂದೆ ಎಲ್ಲ ಕಡೆ ಲಾಕ್ ಡೌನ್ ಇದ್ದ ಕಾರಣ ಹೆಚ್ಚು ಹರಡಲು ಸಾಧ್ಯವಿರಲಿಲ್ಲ. ಈಗ ನಾವು ಫೋಕಸ್ ಮಾಡಬೇಕು. ಸೋಂಕು ಬಂದಿದ್ದರೆ ಯಾರಲ್ಲಿ ಹೆಚ್ಚು ಪ್ರತಿರೋಧಕ ಶಕ್ತಿ ಇರತ್ತೆ, ಯಾರಲ್ಲಿ ಇರಲ್ಲ ಪ್ರಾಬ್ಲಂ ಆಗತ್ತೆ ಅವರನ್ನು ಗುರುತಿಸಿ ಸೇಫ್ ಆಗಿ ಇಟ್ಟುಕೊಳ್ಳೋದು ಉದ್ದೇಶ. ಪರ್ಮನೆಂಟ್ ಆಗಿ ಇದೇ ತರ ಲಾಕ್ ಡೌನ್ ಮಾಡಕಾಗಲ್ಲ. ಮತ್ತು ಜೀವನ ನಡೆಸಕ್ಕಾಗಲ್ಲ. ಈಗ ಅದು ನಡೆಯಬೇಕು. ಈಗ ಬಸ್ಸು, ಟ್ರೈನ್, ವಿಮಾನ ಎಲ್ಲ ಇದೆ. ವೈರಸ್ ಬೇಗ ಹರಡತ್ತೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವುವವರು ಯಾವುದೇ ಕಾರಣಕ್ಕೂ ಸೋಂಕಿತರಾಗಬಾರದು ಮತ್ತು ಮೃತಪಡುವವರ ಸಂದರ್ಭ ಕಡಿಮೆ ಆಗಬೇಕು ಎಂದು ತಿಳಿಸಿದರು.

ಭಕ್ತರ ಸ್ಪಂದನೆಯ ಆಧಾರದ ಮೇಲೆ ಆಷಾಢ ಶುಕ್ರವಾರ ನಿರ್ಧಾರ

ಆಷಾಢ ಶುಕ್ರವಾರದ ಕುರಿತು ಪ್ರತಿಕ್ರಿಯಿಸಿ ಆಷಾಢ ಶುಕ್ರವಾರಕ್ಕೆ ಪೂರ್ವಭಾವಿ ಚರ್ಚೆ ಒಂದು ಮಟ್ಟಕ್ಕೆ ಆಗಿದೆ. ಆದರೆ ಅದು ಸಾಮಾನ್ಯವಾಗಿ ಈ ಒಂದು ವಾರ ದೇವಸ್ಥಾನಕ್ಕೆ ಬರುವ ಜನರ ಸಂಖ್ಯೆ ಯಾವ ರೀತಿ ಇರತ್ತೆ, ಶಿಸ್ತನ್ನು ಯಾವ ರೀತಿ ಕಾಪಾಡುತ್ತಾರೆ. ಅದನ್ನು ನೋಡಿ ಸರ್ಕಾರದೊಂದಿಗೆ, ಧಾರ್ಮಿಕ ದತ್ತಿ ಇಲಾಖೆಯೊಂದಿಗೆ ಕೂಡ ಚರ್ಚಿಸಿ ಅದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆ ಸದ್ಯಕ್ಕೆ ಒಂದು ಅಂಡರ್ ಸ್ಟ್ಯಾಂಡಿಂಗ್ ಇದೆ. ತೀರ್ಮಾನ ಅಂತ ಹೇಳಕ್ಕಾಗಲ್ಲ. ಈ ಒಂದು ವಾರ. ಯಾಕೆಂದರೆ ನಿನ್ನೆ ತಾನೇ ದೇವಾಲಯ ಪ್ರಾರಂಭವಾಗಿದೆ. ಜನರು ಹೇಗೆ ವರ್ತಿಸ್ತಾರೆ. ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಾರೆ, ಹೇಗೆ ಅನ್ನೋದನ್ನು ನೋಡಬೇಕು. ಮಂಗಳವಾರ, ಶುಕ್ರವಾರ ದೇವಿ ದೇವಸ್ಥಾನಗಳಿಗೆ ಭಕ್ತರು ಬರೋದು ಜಾಸ್ತಿ. ಈ ಎರಡು ದಿನ ನೋಡಿದರೆ ಗೊತ್ತಾಗತ್ತೆ. ಹೇಗೆ ಸ್ಪಂದಿಸಿದ್ದಾರೆ ಅಂತ ಅದರ ಆಧಾರದ ಮೇಲೆ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.


Share