ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 35

986
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 35
ವೇಂಕಟೇಶ್ವರ ಪದ್ಮಾವತಿಯರ ಅದ್ಧೂರಿ ಕಲ್ಯಾಣ ನೋಡಿದೆವು. ಮುಂದೇನಾಯಿತು ನೋಡೋಣ.
ಕಲ್ಯಾಣಾನಂತರ ದೀಕ್ಷೆ ನಿಮಿತ್ತ ಶ್ರೀನಿವಾಸ ಪದ್ಮಾವತಿ ಯರು 6 ತಿಂಗಳ ಕಾಲ ಅದಸ್ತ್ಯಾಶ್ರಮದಲ್ಲಿ ಸಂತೋಷವಾಗಿ ಕಾಲ ಕಳೆಯುತ್ತಿದ್ದರು. ಒಮ್ಮೆ ಆಕಾಶರಾಜನು ಮರಣ ಶಯ್ಯೆಯಲ್ಲಿಕುವ ವಾರ್ತೆ ಬಂದಿತು. ತಕ್ಷಣ ಶ್ರೀನಿವಾಸ ಪದ್ಮಾವತಿ ಇಬ್ಬರೂ ನಾರಾಯಣ ಪುರದೆಡೆಗೆ ನಡೆದರು. ಆಕಾಶರಾಜನು ತನ್ನ ತಮ್ಮ ಮತ್ತು ಮದನ ಜವಾಬ್ದಾರಿಯನ್ನು ತನ್ನ ಅಳಿಯ ಶ್ರೀನಿವಾಸನಿಗೆ ವಹಿಸಿ ಕೊನೆಯುಸಿರೆಳೆದನು. ಈ ನೋವನ್ನು ಭರಿಸಲಾಗದೆ ಧರಣೀದೇವಿಯು ಪ್ರಾಣ ತ್ಯಾಗ ಮಾಡಿದಳು. ತನ್ನ ಪುಣ್ಯ ಫಲದಿಂದ ಆಕಾಶರಾಜನಿಗೆ ನಾರಯಣ ಪದವಿ ದೊರಕಿತು.
ಅಷ್ಟರಲ್ಲಿ ತೋಂಡಮಾನ ಮತ್ತು ವಸುಧಾನನ ಮದ್ಯೆ ರಾಜ್ಯಕ್ಕಾಗಿ ಜಗಳಗಳಾಗಿ ಯುದ್ಧ ಮಾಡುವ ಸ್ಥಿತಿ ಬಂದೊದಗಿತು. ಇಬ್ಬರೂ ಶ್ರೀನಿವಾಸ ಬಳಿ ತೆರಳಿ ಅವನ ಸಹಾಯ ಕೇಳಿದರೇ ವಿನಹ ಸಲಹೆ ಕೇಳಲಿಲ್ಲ. ವೇಂಕಟೇಶ್ವರನು ಪದ್ಮಾವತಿಯನ್ನು ತಾನು ಯಾರಿಗೆ ಸಹಾಯ ಮಾಡಬೇಕೆಂದು ಕೇಳಲು ಪದ್ಮಾವತಿಯು ನಿರ್ಧಾರ ವನ್ನು ವೆಂಕಟೇಶ್ವರ ನಿಗೆ ಬಿಡದೆ ತನ್ನ ಚಿಕ್ಕಪ್ಪನ ಬಳಿ ಸಾಕಷ್ಟು ರಾಜ್ಯವಿದೆ ವಸುಧನನು ತಂದೆತಾಯಿ ಇಲ್ಲದವನು ಹಾಗಾಗಿ ಅವನಿಗೆ ಸಹಾಯ ಮಾಡಬೇಕೆಂದು ಸೂಚಿಸುತ್ತಾಳೆ. ಸ್ವಾಮಿಯು ಇದಕ್ಕೆ ಒಪ್ಪುತ್ತಾನೆ. ಈ ನಿರ್ಧಾರದಿಂದ ತೋಂಡಮಾನನು ಬೇಸರಗೊಳ್ಳತ್ತಾನೆ. ಅದಕ್ಕೆ ಸ್ವಾಮಿಯು ತನದೆ ಭಕ್ತರ ನಡುವೆ ಯಾವುದೇ ಭೇದವಿಲ್ಲವೆಂದು ತನ್ನ ಶಂಖ ಚಕ್ರಗಳನ್ನು ತೋಂಡಮಾನನಿಗೆ ನೀಡುತ್ತಾನೆ. ಇದರಿಂದ ಬಹಳಷ್ಟು ಸಂತೋಷಗೊಳ್ಳುತ್ತಾನೆ ತೋಂಡಮಾನ. ಇಬ್ಬರ ನಡುವೆ ಯುದ್ಧ ಆರಂಭವಾಗುತ್ತದೆ. ತೋಂಡಮಾನನ ಸೈನ್ಯ ಕ್ಷೀಣಿಸುತ್ತಾ ಬರುತ್ತದೆ. ತೋಂಡಮಾನನು ಚಕ್ರವನ್ನು ಸ್ವಾಮಿಯ ಮೇಲೆ ಪ್ರಯೋಗ ಮಾಡುತ್ತಾನೆ. ಅದು ಸ್ವಾಮಿಯ ವಕ್ಷಸ್ಥಳಕ್ಕೆ ನಾಟಿ ಗಾಯಗೊಳ್ಳುತ್ತಾನೆ ಮತ್ತು ಮೂರ್ಚೆ ತಪ್ಪಪತ್ತಾನೆ. ಇದರಿಂದ ಕಂಗಾಲಾಗಿ ಪದ್ಮಾವತಿ ರಣರಂಗದತ್ತ ಧಾವಿಸುತ್ತಾಳೆ. ಅಗಸ್ತ್ಯನು ತೆರಳುತ್ತಾನೆ. ಇಬ್ಬರೂ ಯುದ್ಧ ನಿಲ್ಲಿಸುವಂತೆ ಕೋಕುತ್ತಾರೆ. ಸ್ವಾಮಿಯು ಒಪ್ಪದಿದ್ದಾಗ ಅಗಸ್ತ್ಯನು ಇಬ್ಬರೂ ರಾಜಿಯಾಗಬೇಕೆಂದು ಪಟ್ಟು ಹಿಡಿದು ರಣರಂಗದಲ್ಲೇ ಕುಳಿತುಹಿಡುತ್ತಾನೆ ಎಂದು ಶ್ರೀ ಸ್ವಾಮೀಜಿ ಯವರು ಇಂದಿನ ಕಥೆಯಲ್ಲಿ ವರ್ಣಿಸಿದ್ದಾರೆ. ಎಂದಿನಂತೆ ಎಲ್ಲರೂ ನೋಡಿ ಮತ್ತು ಶೇರ್ ಮಾಡಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share