ಮೈಸೂರು ಪತ್ರಿಕೆ: ಆಧ್ಯಾತ್ಮಿಕ ಅಂಗಳ ಶ್ರೀಪಾದವಲ್ಲಭ ರ ಚರಿತ್ರೆ

1061
Share

ಓಂ
|| ಶ್ರೀಪಾದರಾಜಂ ಶರಣಂ ಪ್ರಪದ್ಧೇ ||
|| ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ||

ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ ಅಧ್ಯಾಯ – 1

ಪುಟ – 1

ಶ್ರೀಪಾದ ಶ್ರೀವಲ್ಲಭರ ಚರಿತ್ರೆ ರಚನಕಾರರಾದ ಶಂಕರಭಟ್ಟರು ಹಾಗೂ ವ್ಯಾಘ್ರೇಶ್ವರಶರ್ಮರ ವೃತ್ತಾಂತ
ಶ್ರೀ ಮಹಾಗಣಪತಿಗೆ ಶ್ರೀ ಮಹಾ ಸರಸ್ವತಿಗೆ , ನಮ್ಮ ಗುರುಪರಂಪರೆಗೆ ಶ್ರೀಕೃಷ್ಣ ಭಗವಾನನಿಗೆ , ಸಮಸ್ತ ದೇವಿದೇವತಾಗಣಕ್ಕೆ ಪ್ರಣಾಮಗಳನ್ನು ಸಮರ್ಪಿಸಿ , ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಾದ ಶ್ರೀದತ್ತಪ್ರಭುಗಳ ನವಾವತರಣ ( ಶ್ರೀಪಾದ ಶ್ರೀವಲ್ಲಭರ ) ವೈಭವವನ್ನು ವರ್ಣಿಸಲುಪಕ್ರಮಿಸಿದ್ದೇನೆ . ಶ್ರೀದತ್ತಾತ್ರೇಯರು ಸನಾತನನು , ನಿತ್ಯನೂತನನು. ಶ್ರೀದತ್ತಾತ್ರೇಯರು ಈ ಕಲಿಯುಗದಲ್ಲಿ ಆಂಧ್ರಪ್ರದೇಶದ ಗೋದಾವರಿ ಪ್ರಾಂತದಲ್ಲಿರುವ ಶ್ರೀಪೀಠಿಕಾಪುರದಲ್ಲಿ ಶ್ರೀಪಾದ ಶ್ರೀವಲ್ಲಭ ಎಂಬ ಹೆಸರಿನಿಂದ ಅವತರಿಸಿದರು. ಅವರ ದಿವ್ಯಚರಿತ್ರೆ ಹಾಗೂ ದಿವ್ಯಲೀಲಾ ವೈಭವಗಳನ್ನು ವರ್ಣಿಸಲು ಮಹಾ ಮಹಾ ಪಂಡಿತವರೇಣ್ಯರಿಗೆ ಕೂಡಾ ಅಸಾಧ್ಯ. ಹೀಗಿರುವಾಗ ವಿದ್ಯಾಗಂಧವೇ ಇಲ್ಲದಿರುವ ಅಲ್ಪಜ್ಞನಾದ ನಾನು ಅವರ ಚರಿತ್ರೆಯನ್ನು ವರ್ಣಿಸಲು ಹೊರಟಿರುವೆನೆಂದರೆ ಕೇವಲ ಅವರ ಸಂಕಲ್ಪ , ಆಜ್ಞೆ ಹಾಗೂ ಅನುಗ್ರಹ ಆಶೀರ್ವಾದಗಳಿಂದಲೇ ಎಂದು ಎಲ್ಲರಿಗೂ ಅತ್ಯಂತ ವಿನಯ ಪೂರ್ವಕವಾಗಿ ವಿಜ್ಞಾಪಿಸಿಕೊಳ್ಳುತ್ತಿದ್ದೇನೆ.
ನನ್ನ ಹೆಸರು ಶಂಕರಭಟ್ಟ ಎಂದು. ನಾನು ಕರ್ನಾಟಕ ದೇಶದವನು, ಸ್ಮಾರ್ತ ಬ್ರಾಹ್ಮಣನು, ಭಾರದ್ವಾಜ ಗೊತ್ರದವನು. ಶ್ರೀಕೃಷ್ಣ ಪರಮಾತ್ಮನ ದರ್ಶನಕ್ಕೆಂದು ನಾನು ಉಡುಪಿ ಕ್ಷೇತ್ರಕ್ಕೆ ಹೋದನು. ಅಲ್ಲಿ ನವಿಲುಗರಿಯಿಂದ ಅಲಂಕೃತನಾದ ಮುಗ್ಧ ಮನೋಹರನಾದ ಬಾಲಕೃಷ್ಣನು ನನಗೆ ದರ್ಶನವನ್ನು ಕೊಟ್ಟು, ಕನ್ಯಕಾಪರಮೇಶ್ವರಿದೇವಿಯ ದರ್ಶನಾರ್ಥವಾಗಿ ಕನ್ಯಾಕುಮಾರಿಗೆ ಹೊರಡುವಂತೆ ಆಜ್ಞಾಪಿಸಿದನು.
ನಾನು ಕನ್ಯಾಕುಮಾರಿಯಲ್ಲಿರುವ ಕನ್ಯಕಾಪರಮೇಶ್ವರಿದೇವಿಯನ್ನು ದರ್ಶನ ಮಾಡಿದೆನು. ಸಾಗರತ್ರಯ ಸಂಗಮದಲ್ಲಿ ಪುಣ್ಯಸ್ನಾನವನ್ನು ಮಾಡಿದೆನು. ಒಂದು ಮಂಗಳವಾರ, ದೇವದರ್ಶನಾರ್ಥವಾಗಿ ಗುಡಿಯನ್ನು ಪ್ರವೇಶಿಸಿದನು. ಅರ್ಚಕರು ನಿಷ್ಠೆಯಿಂದ ದೇವೀಪೂಜೆಯನ್ನು ಮಾಡುತ್ತಿದ್ದರು. ಅವರು ನನ್ನ ಕೈಯಿಂದ ಕೆಂಪುಬಣ್ಣದ ಪುಷ್ಪಗಳನ್ನು ತೆಗೆದುಕೊಂಡು ದೇವಿಗೆ ಪೂಜೆ ಮಾಡುತ್ತಿರುವಾಗ ದೇವಿಯು ನನ್ನ ಮೇಲೆ ಕರುಣಾಪೂರ್ಣ ದೃಷ್ಟಿಯನ್ನು ಬೀರುತ್ತಾ ” ಶಂಕರಾ ! ನಿನ್ನ ಭಕ್ತಿಗೆ ನಾನು ಮೆಚ್ಚಿದ್ದೇನೆ. ನೀನು ಕುರುವಪುರಕ್ಕೆ ಹೋಗಿ ಅಲ್ಲಿರುವ ಶ್ರೀಪಾದ ಶ್ರೀವಲ್ಲಭರನ್ನು ದರ್ಶನ ಮಾಡಿ ನಿನ್ನ ಜನ್ಮವನ್ನು ಸಾರ್ಥಕಮಾಡಿಕೊ. ಅವರ ದರ್ಶನ ಮಾತ್ರದಿಂದಲೇ ನಿನ್ನ ಮನಸ್ಸಿಗೆ, ಆತ್ಮಕ್ಕೆ ಹಾಗೂ ಸರ್ವೇಂದ್ರಿಯಗಳಿಗೆ ಅನಿರ್ವಚನೀಯವಾದ ಅನುಭವವು ಪ್ರಾಪ್ತವಾಗುವುದು” ಎಂದು ಹೇಳಿದಳು.
ನಾನು ಅಂಬೆಯ ಅನುಗ್ರಹವನ್ನು ಹೊಂದಿ ಆ ಪುಣ್ಯಕ್ಷೇತ್ರದಿಂದ ಹೊರಟು ಸ್ವಲ್ಪ ದೂರದಲ್ಲೇ ಇರುವ ಮರುದಮಲೈ ಎಂಬ ಗ್ರಾಮವನ್ನು ತಲುಪಿದನು. ಹನುಮಂತದೇವರು ಸಂಜೀವಿನಿ ಪರ್ವತವನ್ನು ಹಿಮಾಲಯಕ್ಕೆ ವಾಪಸ್ಸು ತೆಗೆದುಕೊಂಡು ಹೋಗುತ್ತಿರುವಾಗ ದಾರಿಯಲ್ಲಿ ಒಂದು ತುಂಡು ಜಾರಿ ಕೆಳಕ್ರೆ ಬಿದ್ದು, ಅದನ್ನೆ ಮರುದಮಲೈ ಎಂದು ಕರೆಯುತ್ತಿರುವರು.
(ಮುಂದುವರೆಯುವುದು)

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ.

ಚುಟುಕು ಸಪ್ತಶತಿ – 2

ಇವು ಆಧ್ಯಾತ್ಮ ಚುಟುಕುಗಳು
ನಿಮ್ಮ ದೂರದ ದಾರಿಗೆ ಬಿಸಿಬಟಾಣಿಗಳು
ಕೆಲವರಿಗೆ ತಲೆಯ ಮೇಲೆ ಮಟುಕುಗಳು
ಏಟು ಇದ್ದಂಗೆ – ಕ್ಷಮಿಸಿ
ನನ್ನ ಮೇಲೆ ನೆಟ್ಗೆ ತೆಗೆಯಬೇಡಿ ಸಚ್ಚಿದಾನಂದ

  • ಶ್ರೀ ಸ್ವಾಮೀಜಿ.

(ಸಂಗ್ರಹ)

  • ಭಾಲರಾ
    ಬೆಂಗಳೂರು.

ಜೈಗುರುದತ್ತ.


Share