ಮೈಸೂರು, ಭಗತ್ ಸಿಂಗ್ ಅವರ 113 ನೇಜಯಂತ್ಯೋತ್ಸವ

414
Share

ಮೈಸೂರು ಕ್ರಾಂತಿಕಾರಿ ಮಹಾನ್ ದೇಶಭಕ್ತ ಭಗತ್ ಸಿಂಗ್ ಅವರ 113 ನೇ ಜಯಂತ್ಯೋತ್ಸವ ಅಂಗವಾಗಿ ಜೈ ಹಿಂದ್ ಕಾರ್ಯಕ್ರಮವನ್ನು ಬೇರು ಫೌಂಡೇಷನ್ ವತಿಯಿಂದ ಮೆಟ್ರೋ ಪಾಲ್ ಬಳಿ ಇರುವ ಫೀಲ್ಡ್ ಮಾರ್ಷಲ್ ವೃತ್ತದಲ್ಲಿ ಆಚರಿಸಲಾಯಿತು

ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ ಮಹಾನ್ ದೇಶಭಕ್ತ ಸಿಂಗ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ L. ನಾಗೇಂದ್ರರವರು ತಿಳಿಸಿದರು.
ಅವರು ಬೇರು ಫೌಂಡೇಷನ್ ವತಿಯಿಂದ ಮೆಟ್ರೊ ಪಾಲ್ ಸರ್ಕಲ್ ಫೀಲ್ಡ್ ಮಾರ್ಷಲ್ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು
ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದು ಭಗತ್ ಸಿಂಗ್ ಯುವ ಜನತೆಗೆ ಪ್ರೇರಣೆಯಾಗಿದ್ದರು ತನ್ನ 23 ನೆೇ ವಯಸ್ಸಿನ ಅತಿ ಸಣ್ಣ ಪ್ರಾಯದಲ್ಲಿಯೇ ಅವರು ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಮಹಾನ್ ದೇಶಭಕ್ತರು ಮದುವೆ ಆಗಲು ನಿರಾಕರಿಸಿದ ಅವರು ದೇಶಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಚಿಕ್ಕ ವಯಸ್ಸಿನಲ್ಲಿಯೇ ಹೋರಾಟದ ಮನೋಭಾವ ಯಾವ ಪರಿಯ ಳಿದಿತ್ತು ಎಂದು ಅರ್ಥವಾಗುತ್ತದೆ
12 ನೆೇ ವಯಸ್ಸಿನಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರಕ್ತಸಿಕ್ತ ಭೂಮಿಯನ್ನು ಕಂಡು ಆಗಲೇ ಸ್ವಾತಂತ್ರ್ಯ ಹೋರಾಟದ ಸಂಗ್ರಾಮಕ್ಕೆ ಕಾಲಿಟ್ಟ ಭಗತ್ ಸಿಂಗ್ ಬ್ರಿಟಿಷರ ಗಮನ ಸೆಳೆಯಲು ಹಾಗೂ ಅವರಿಗೆ ಘೋರ ಎಚ್ಚರಿಕೆ ನೀಡಲು ಅವರು1929 ರಲ್ಲಿ ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆಯುವ ಮೂಲಕ ತಮ್ಮ ಎದೆಗಾರಿಕೆಯನ್ನು ಪ್ರದರ್ಶಿಸಿದ್ದರು ಆ ನಂತರ ಮಾತನಾಡಿದ ರಘುರಾಮ್ ವಾಜಪೇಯಿಯವರು ತನ್ನ ಸಾವಿನಿಂದ ದೇಶದ ಯುವಜನತೆ ರೋಷಾವೇಷದಿಂದ ಬ್ರಿಟಿಷರ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸುತ್ತೇನೆಂದು ಅರಿತಿದ್ದ ಭಗತ್ ಸಿಂಗ್ ತಮ್ಮ ಮಿತ್ರರಾದ ರಾಜಗುರು ಹಾಗೂ ಸುಖದೇವ ಅವರೊಂದಿಗೆ ಸಂತೋಷದಿಂದ ಬ್ರಿಟಿಷರ ನೇಣಿಗೆ ಕೊರಳೊಡ್ಡಿದ ಮಹಾನ್ ಚೇತನ ಭಗತ್ ಸಿಂಗ್ ಈ ಸಂದರ್ಭದಲ್ಲಿ ಇವತ್ತಿನ ಯುವಕರು ಭಗತ್ ಸಿಂಗ್ ಅವರ ಜೀವನ ಚರಿತ್ರೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಭಗತ್ ಸಿಂಗ್ ಅವರು ತಮ್ಮ ಪ್ರಾಣವನ್ನು ದೇಶಕ್ಕೋಸ್ಕರ ಮುಡಿಪಾಗಿಟ್ಟವರು ಆದರೆ ಇವತ್ತಿನ ಕಾಲದ ಯುವಕರು ತಮ್ಮ ಜೀವನವನ್ನು ಜೀವನಕ್ಕೆ ಒಂದು ಅರ್ಥವಿಲ್ಲದೆ ಜೀವನವನ್ನು ನಡೆಸುತ್ತಿದ್ದಾರೆ ಭಗತ್ ಸಿಂಗ್ ಅವರ ಬಲಿದಾನ ತ್ಯಾಗ ಇವೆಲ್ಲದಕ್ಕೂ ಒಂದು ಅರ್ಥ ಸಿಗಬೇಕಾದರೆ ಇವತ್ತಿನ ಯುವಕರು ಅವರ ಜೀವನದ ಚರಿತ್ರೆಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ DTS ಫೌಂಡೇಶನ್ ಅಧ್ಯಕ್ಷರಾದ ಡಿಟಿ ಪ್ರಕಾಶ್ , ಬೇರು ಫೌಂಡೇಷನ್ ಅಧ್ಯಕ್ಷ ಮಧು ಎನ್, ಮಹಾನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತೇಶ್ ,ಮಾಜಿ ನಗರ ಪಾಲಿಕಾ ಸದಸ್ಯರಾದ ಎಂಡಿ ಪಾರ್ಥಸಾರಥಿ ,
ಪ್ರಧಾನ ಕಾರ್ಯದರ್ಶಿಗಳಾದ ಜೈ ಅರ್ಜುನ್, ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್,
ಬಿಜೆಪಿ ಮುಖಂಡರಾದ ಜೋಗಿ ಮಂಜು, ಬಿಜೆಪಿ ಮಾಧ್ಯಮ ಸಂಚಾಲಕರಾದ ಪ್ರದೀಪ್ ಕುಮಾರ್ ,ರಾಕೇಶ್ ಭಟ್ ,ಅಜಯ್ ಶಾಸ್ತ್ರಿ ,
ಆನಂದ್ , ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್ , ಬಿಜೆಪಿ ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ,ನವೀನ್ ಶೆಟ್ಟಿ ,ಚಕ್ರಪಾಣಿ ಹಾಗೂ ಇನ್ನಿತರರು ಹಾಜರಿದ್ದರು


Share