ಮೈಸೂರು-ಮಟ್ಕಾ ದಂಧೆ- ಮೂವರ

313
Share

ಮೈಸೂರು, ನಗರದ ಸಿ.ಸಿ.ಬಿ. ಪೊಲೀಸರು ಮಟ್ಕಾ ದಂಧೆಯಲ್ಲಿ ತೊಡಗಿದ್ದ ಮೂವರ ಬಂಧಿಸಿದ್ದಾರೆ . ಬಂಧಿತರಿಂದ ಒಟ್ಟು 20,010 / – ರೂ ಮತ್ತು ಮಟ್ಕಾ ಜೂಜಾಟಕ್ಕೆ ಬಳಸಿದ್ದ ವಸ್ತುಗಳು  ವಶಪಡಿಸಿಕೊಂಡಿದ್ದಾರೆ. ಮೈಸೂರು ನಗರ ಸಿ.ಸಿ.ಟಿ. ಘಟಕದ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಿನಾಂಕ : 14/03/2022 ರಂದು ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣಾ ಸರಹದ್ದು ಕ್ಯಾತಮಾರನ ಹಳ್ಳಿಯ ಹರಿಶ್ಚಂದ್ರ ಘಾಟ್ ರಸ್ತೆಯಲ್ಲಿರುವ ಎ.ಟು.ಜೆಡ್ ಮೆಡಿಕಲ್ ಹತ್ತಿರ ಧಾಳಿ ಮಾಡಿ ಮಟ್ಕಾ ಜೂಜು ದಂಧೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದು , ಮಟ್ಕಾ ಜೂಜಾಟದಲ್ಲಿ ಸಂಪಾದಿಸಿದ 20,010 / -ರೂ ನಗದು ಹಣ ಮತ್ತು ಜೂಜಾಟಕ್ಕೆ ಬಳಸಿದ್ದ ಇತರೆ ಪರಿಕರಗಳನ್ನು ವಶಕ್ಕೆ ಪಡೆದಿರುತ್ತಾರೆ . ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ.ರವರಾದ ಶ್ರೀಮತಿ ಗೀತಪ್ರಸನ್ನ , ಐ.ಪಿ.ಎಸ್.ರವರ ಮಾರ್ಗದರ್ಶನದಲ್ಲಿ ಸಿ.ಸಿ.ಟಿ.ಯ ಎ.ಸಿ.ಪಿ.ರವರಾದ ಶ್ರೀ.ಸಿ.ಕೆ.ಅಶ್ವಥನಾರಾಯಣ ಉಸ್ತುವಾರಿಯಲ್ಲಿ ಸಿ.ಸಿ.ಟಿ.ಯ ಇನ್ಸ್ಪೆಕ್ಟರ್ ಶ್ರೀ.ಎ.ಮಲ್ಲೇಶ್ , ಸಿಬ್ಬಂದಿಗಳಾದ ಜೋಸೆಫ್ ನೋರೋನ , ರಘು , ವಿ , ಸುಭಾನಲ್ಲಾ ರವರು ಮಾಡಿರುತ್ತಾರೆ . ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ : ಚಂದ್ರಗುಪ್ತ , ಐ.ಪಿ.ಎಸ್ ರವರು ಪ್ರಶಂಸಿಸಿರುತ್ತಾರೆ .


Share