ಮೈಸೂರು- ಸರಗಳ್ಳರ ಬಂದನ

318
Share

ಮೈಸೂರು : ಕುವೆಂಪುನಗರ ಪೊಲೀಸರಿಂದ ಇಬ್ಬರು ಸರಗಳ್ಳರ ಬಂಧನ . ರೂ 9,15,000 / – ಬೆಲೆಬಾಳುವ ಸುಮಾರು 183 ಗ್ರಾಂ ತೂಕದ 5 ಚಿನ್ನದ ಸರಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಎರಡು ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ .

ಮೈಸೂರು ನಗರದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ : 20-08-2022 ರಂದು ಇಬ್ಬರು ಸರಗಳ್ಳರನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಿದಾಗ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯ 5 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ . ಈ ಪ್ರಕರಣಗಳಲ್ಲಿ ರೂ . 9,15,000 / – ಬೆಲೆಬಾಳುವ ಸುಮಾರು 183 ಗ್ರಾಂ ತೂಕದ 5 ಚಿನ್ನದ ಸರಗಳು ಮತ್ತು ಕೃತ್ಯಕ್ಕೆ ಬಳಸಿದ್ದ ರೂ . 35,000 / – ಮೌಲ್ಯದ ಒಂದು ಬೈಕ್ ಹಾಗೂ ಆರೋಪಿಗಳ ವಶದಲ್ಲಿದ್ದ ರೂ . 20.000 / – ಮೌಲ್ಯದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡಿರುತ್ತಾರೆ . ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ ಕೇಂದ್ರಸ್ಥಾನ , ಅಪರಾಥ ಮತ್ತು ಸಂಚಾರ ರವರಾದ ಶ್ರೀಮತಿ ಗೀತ.ಎಂ.ಎಸ್ , ಐ.ಪಿ.ಎಸ್ ರವರ ಮಾರ್ಗದರ್ಶನಲ್ಲಿ ಕೃಷ್ಣರಾಜ ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ ಗಂಗಾಧರಸ್ವಾಮಿ.ಎಸ್.ಇ ರವರ ಉಸ್ತುವಾರಿಯಲ್ಲಿ ಕುವೆಂಪುನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಷಣ್ಮುಗ ವರ್ಮ.ಕೆ , ಪಿಎಸ್‌ಐ ರವರುಗಳಾದ ಕು.ರಾಧ.ಎಂ , ಗೋಪಾಲ್.ಎಸ್.ಪಿ ಹಾಗೂ ಎ.ಎಸ್.ಐ ಮಹದೇವ ಸಿಬ್ಬಂದಿಗಳಾದ ಮಂಜುನಾಥ.ಎಂ.ಪಿ . ಪುಟ್ಟಪ್ಪ.ಎನ್.ಕೆ . ನಾಗೇಶ , ಹಜರತ್ , ಸರ್ಜನ್ , ಮಹೇಶ , ಯೋಗೇಶ.ಎಂ.ಸಿ . ಶ್ರೀನಿವಾಸ.ಹೆಚ್.ಕೆ , ಮಾದೇಶರವರುಗಳು ಮಾಡಿರುತ್ತಾರೆ . ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ : ಚಂದ್ರಗುಪ್ತ  ರವರು ಪ್ರಶಂಸಿಸಿರುತ್ತಾರೆ 


Share