ಮೈಸೂರು- ಸಿ.ಸಿ.ಬಿ ಪೊಲೀಸರಿಂದ ಗಾಂಜಾ ಹೊಂದಿದ್ದ ಆರೋಪಿಯ ಬಂಧನ

128
Share

ಸಿ.ಸಿ.ಬಿ ಪೊಲೀಸರಿಂದ ಗಾಂಜಾ ಹೊಂದಿದ್ದ ಆರೋಪಿಯ ಬಂಧನ

. ಆತನ ವಶದಲ್ಲಿದ್ದ 1,10,000 / – ರೂ ಬೆಲೆ ಬಾಳುವ 1 ಕೆ.ಜಿ 100 ಗ್ರಾಂ ತೂಕದ ಗಾಂಜ ವಶ . ಪಡಿಸಿಕೊಂಡಿದ್ದಾರೆ ……… . 

ಮೈಸೂರು ನಗರದ ಸಿಸಿಬಿ ಪೊಲೀಸರು ದಿನಾಂಕ 19/01/2023 ರಂದು ಮೈಸೂರು ನಗರದ ಬೆಂಗಳೂರು ರಸ್ತೆಯ ಬನ್ನಿಮಂಟಪದ ದಂಡಿನ ಮಾರಮ್ಮ ದೇವಸ್ಥಾನದ ಬಳಿ ಫುಟ್‌ಬಾತ್‌ನಲ್ಲಿ ಸ್ಕೂಟರ್‌ನಲ್ಲಿ ನಿಂತಿದ್ದ ಒಬ್ಬ ಆರೋಪಿಯನ್ನು ಬಂಧಿಸಿ , ಆತನ ವಶದಲ್ಲಿದ್ದ 1,10,000 / – ರೂ ಬೆಲೆ ಬಾಳುವ 1 ಕೆ.ಜಿ 100 ಗ್ರಾಂ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ . ಈ ಸಂಬಂಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ , ಕೇಂದ್ರಸ್ಥಾನ ಅಪರಾಧ ಮತ್ತು ಸಂಚಾರ ವಿಭಾಗ ರವರಾದ ಶ್ರೀಮತಿ ಗೀತ ಎಂ.ಎಸ್ , ಐ.ಪಿ.ಎಸ್ ಹಾಗೂ ಸಿ.ಸಿ.ಬಿ ಘಟಕದ ಎ.ಸಿ.ಪಿ ರವರಾದ ಶ್ರೀ . ಸಿ.ಕೆ. ಅಶ್ವತ್ಥನಾರಾಯಣ ರವರುಗಳ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಹೆಚ್‌ & ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ . ಜಿ.ಶೇಖರ್ ಹಾಗೂ ಸಿಬ್ಬಂದಿಗಳಾದ ಸಂಪಾಷ , ರಾಮಸ್ವಾಮಿ , ಆನಂದ , ಎ.ಉಮಾಹೇಶ್ ಮತ್ತು ಮೋಹನಾರಾಧ್ಯ ರವರುಗಳು ಮಾಡಿರುತ್ತಾರೆ . ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಶ್ರೀ . ಬಿ . ರಮೇಶ್ ಐ.ಪಿ.ಎಸ್ . ರವರು ಪ್ರಶಂಸಿಸಿರುತ್ತಾರೆ

Share