ಮೈಸೂರು: 7ನೇ ದಿನದ ಯೋಗಕ್ಷೇಮ ಯಾತ್ರೆ.

498
Share


ಮೈಸೂರು
ಕೃಷ್ಣರಾಜ ಕ್ಷೇತ್ರಾದ್ಯಂತ ಕೊರೊನಾ ಸಂಬಂಧಿತವಾಗಿ ಹಾಗೂ ಇನ್ನಿತರೆ ಕಾರ್ಯಗಳ ಬಗ್ಗೆ ಕ್ಷೇತ್ರದ ಜನರ ಯೋಗಕ್ಷೇಮ ವಿಚಾರಿಸಿ ಅವರುಗಳ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ದಿನಾಂಕ 05/10/2020 ರಿಂದ 11/10/2020 ರ ವರೆಗೆ ಒಂದು ವಾರಗಳ ಕಾಲ “ಯೋಗಕ್ಷೇಮ ಯಾತ್ರೆಯನ್ನು” ಸಪ್ತಾಹ ಕಾರ್ಯಕ್ರಮ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆಯಲ್ಲಿ ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್ ರವರು 7ನೇ ದಿನದ ಯೋಗಕ್ಷೇಮ ಯಾತ್ರೆಯು ಇಂದು ವಾರ್ಡ್ ನಂ. 43 ರ ಸಾಹುಕಾರ್ ಚೆನ್ನಯ್ಯ ರಸ್ತೆಯಲ್ಲಿರುವ ಬ್ರಹ್ಮಸ್ಥಾನ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಅನ್ನು ವಾರ್ಡ್ ನಂ 43 ರ ಟಿ.ಕೆ ಲೇ ಔಟ್ ನ ಕವಿತಾ ಬೇಕರಿ ಬಳಿಯಿಂದ ಪ್ರಾರಂಭವಾಯಿತು. ಕವಿತಾ ಲೇ ಔಟ್ ನ BSNL ಕಚೇರಿಯ ಬಳಿಯಲ್ಲಿ ಫುಟ್ ಪಾತ್ ಬಳಿಯಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು. ಟಿ.ಕೆ ಲೇ ಔಟ್ ನ. 4 ನೆ ಮೈನ್ ನಲ್ಲಿ ಓರ್ವ ವಿಶೇಷ ಚೇತನ ಬಾಲಕನನ್ನು ನೋಡಿ ಆತನನ್ನು ಮಾತನಾಡಿಸಿ ಅವನು ಎಲ್ಲಿಯ ತನಕ ಓದುವನೋ ಅಲ್ಲಿಯ ತನಕ ಓದಿಸುವುದಾಗಿ ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್ ಅವರು ಹೇಳಿದರು ಅಲ್ಲದೇ ಅಲ್ಲೇ ಇದ್ದ ಬೀದಿ ಬದಿ ವ್ಯಾಪರಿಯೋರ್ವರನ್ನು ಭೇಟಿ ಮಾಡಿ ಪ್ರಧಾನ ಮಂತ್ರಿ ಸ್ವನಿಧಿ ಬಗ್ಗೆ ತಿಳಿಸಿದರು.

ಬ್ರಹ್ಮಸ್ಥಾನಮ್ ಕಲ್ಯಾಣ ಮಂದಿರದಲ್ಲಿ ಯೋಗಕ್ಷೇಮ ಯಾತ್ರೆಯ ಕೊನೇ ದಿನದ ಸಮಾರೋಪ ಕಾರ್ಯಕ್ರಮ ಜರುಗಿತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಒಂದು ಪ್ರಯೋಗವನ್ನು ಪ್ರಾರಂಭಿಸಿದೆ, ಇದರಲ್ಲಿ ಜನನದ ನಂತರ ಶಿಶುಗಳಿಗೆ ನೀಡಲಾಗುವ ಕ್ಷಯರೋಗ ವಿರೋಧಿ ಬಿಸಿಜಿ ಲಸಿಕೆಯನ್ನು 60 ವರ್ಷ ದಾಟಿದ ಜನರಿಗೆ ನೀಡಲಾಗುತ್ತದೆ, ಲಸಿಕೆ ಕೋವಿಡ್ -19 ರಿಂದ ವೃದ್ಧರನ್ನು ರಕ್ಷಿಸುತ್ತದೆಯೇ ಎಂದು ಕಂಡುಹಿಡಿಯಲು ಈ ಪ್ರಯೋಗಗಳನ್ನು ಮಾಡುತ್ತಿದೆ. ಇದನ್ನು ಕೃಷ್ಣರಾಜ ಕ್ಷೇತ್ರದಲ್ಲಿ ಯೋಗ ಕ್ಷೇಮ ಯಾತ್ರೆಯಲ್ಲಿ 8 ಜನ ವೃದ್ಧರಿಗೆ ಸಾಂಕೇತಿಕವಾಗಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಭಾರತ ಮಾತೆಯ ಫೋಟೋ ಗೆ ಪುಷ್ಪಾರ್ಚನೆ ಮಾಡುವ ಮೂಲಕ ಯೋಗಕ್ಷೇಮ ಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಾಯಿತು. ಸದರಿ ಉದ್ಘಾಟನೆಯನ್ನು ಮಾನ್ಯ ಶಾಸಕರೊಂದಿಗೆ, ಮೈಸೂರು ಪೊಲೀಸ್ ಆಯುಕ್ತರಾದ ಶ್ರೀ ಡಾ. ಚಂದ್ರಗುಪ್ತ ರವರು, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಗುರುದತ್ತ್ ಹೆಗ್ಡೆ ರವರು ಹಾಗೂ ವೇದಿಕೆಯ ಮೇಲಿನ ಗಣ್ಯರು ಭಾಗವಹಿಸಿದರು.
ನಂತರ ಪ್ರಾಸ್ತಾವಿಕ ನುಡಿಯನ್ನು ಮಾತನಾಡಿದ ಶಾಸಕರಾದ ಎಸ್.ಎ. ರಾಮದಾಸ್ ಅವರು 270 ಜನ ಭೂತ್ ಅಧ್ಯಕ್ಷರು, 23 ಕ್ಕೂ ಅಧಿಕ ಇಲಾಖೆಗಳ ಅಧಿಕಾರಿಗಳು ಈ ಯೋಗಕ್ಷೇಮ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಅವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು, ಉದ್ಯೋಗ ಮೇಳವನ್ನು ಇನ್ನೇನು ಕೆಲವೇ ದಿನಗಳಲ್ಲಿ ಆಯೋಜನೆ ಮಾಡಲಾಗುವುದು, ಆಹಾರ ಕಾರ್ಡ್, ಆಯುಷ್ಮಾನ್ ಕಾರ್ಡ್, ಕೆ.ಆರ್.ಕ್ಷೇತ್ರದಲ್ಲಿ ಯಾವ ಮಕ್ಕಳು ಶಾಲೆಯಿಂದ ಹೋರಗುಳಿದಿದ್ದಾರೆ ಅವರನ್ನು ಶಾಲೆಗೆ ಸೇರಿಸುವ ಕೆಲಸವನ್ನು ನಾವೀಗಾಗಲೇ ಪ್ರಾರಂಭಿಸಿದ್ದೇವೆ, ಮುಂದಿನ 100 ದಿನಗಳು ಯೋಗಕ್ಷೇಮ ಯಾತ್ರೆಯನ್ನು ಸಫಲಗೊಳಿಸಲು ನಮಗೆ ಮಹತ್ವದ ದಿನ ಎಂದು ಈ ವೇಳೆ ಹೇಳಿದರು.

ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅವರು ಮಾತನಾಡಿ, ಪಕ್ಷಾತೀತವಾಗಿ ಆರಿಸಿದ ಪ್ರಜೆಗಳ ಕ್ಷೇಮಕ್ಕೆ ಈ ಕಾರ್ಯಕ್ರಮವನ್ನು ಮಾಡುತ್ತಿರುವ ಶಾಸಕರಾದ ಎಸ್.ಎ. ರಾಮದಾಸ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಮೈಸೂರು ನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ ಮಾತನಾಡಿ ನಮ್ಮ ಅಧಿಕಾರಿಗಳಿಗೆ ಯೋಗಕ್ಷೇಮ ಯಾತ್ರೆಯಿಂದ ಜನರ ಕಷ್ಟಗಳನ್ನು ಕಣ್ಣಿನಿಂದ ನೋಡುವ ಅವಕಾಶವಾಗಿದೆ ಹಾಗೂ ನಮಗೂ ಸಹ ಜನರೊಂದಿಗೆ ಮುಕ್ತವಾದ ಸಂವಾದ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಶಾಸಕರಿಗೆ ತಿಳಿಸಿದರು

ಮಾನ್ಯ ಶಾಸಕರಾದ ಎಸ್.ಎ. ರಾಮದಾಸ್ ಅವರು ಯೋಗಕ್ಷೇಮ ಯಾತ್ರೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಸ್ಥರದ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಅಭಿನಂದನಾಪೂರ್ವಕವಾಗಿ ಶಾಲು, ಹಾರವನ್ನು ಹಾಕಿ, ಸಿಹಿಯನ್ನು ಹಾಗೂ ಪ್ರಮಾಣ ಪತ್ರವನ್ನು ನೀಡಿ ಸನ್ಮಾನ ಮಾಡಿದರು.

ಸದರಿ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ. ರಾಮದಾಸ್ ರವರರೊಂದಿಗೆ ಮೈಸೂರು ನಗರದ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ, ಮೈಸೂರು ನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ, ಕೆ.ಆರ್.ಆಸ್ಪತ್ರೆಯ ವೈದ್ಯರಾದ ಡಾ. ಪ್ರಶಾಂತ್, ಡಾ.ಪ್ರೀತಿ, ಬಿಜೆಪಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು,ಉಪಾಧ್ಯಕ್ಷರಾದ ಓಂ ಶ್ರೀನಿವಾಸ್, ಜೆ.ರವಿ, ಬಾಲಕೃಷ್ಣ, ಬಿ.ಜೆ.ಪಿ‌ ಕೆ.ಆರ್. ಕ್ಷೇತ್ರದ ಪ್ರಧಾನಕಾರ್ಯದರ್ಶಿಗಳಾದ ಶ್ರೀಮತಿ ನೂರ್ ಫಾತಿಮಾ, ನಾಗೇಂದ್ರ(ಕೇಬಲ್), ಆಶ್ರಯ ಸಮಿತಿ ಸದಸ್ಯೆ ಶ್ರೀಮತಿ ವಿದ್ಯಾ ಕೆ.ಆರ್ ಕ್ಷೇತ್ರದ ಬಿಜೆಪಿ ಕೆ.ಆರ್ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಮಲ್ಲಿಕಾರ್ಜುನ್(ಮನು ಅಪ್ಪಿ), ಕಾರ್ಯದರ್ಶಿಗಳಾದ ಪ್ರಸಾದ್ ಬಾಬು, ಬಿಜೆಪಿ, ಬಿಜೆಪಿ ಯ ಹಿರಿಯರಾದ ಮೈ.ಪು. ರಾಜೇಶ್ ಬಿಜೆಪಿ ಕೃಷ್ಣರಾಜ ಕ್ಷೇತ್ರದ ವಿವಿಧ ಸ್ಥರದ ಪದಾಧಿಕಾರಿಗಳು ಹಾಗೂ ಆಯಾ ಭಾಗದ ಆರಕ್ಷಕ, ನಿರೀಕ್ಷಕರು, ವಲಯ ಆಯುಕ್ತರುಗಳು, ಪಾಲಿಕೆಯ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಆರೋಗ್ಯ ಪರಿವೀಕ್ಷಕರು, ಅಸಿಸ್ಟೆಂಟ್ ಲೇಬರ್ ಕಮಿಷನರ್, ವೈದ್ಯಾಧಿಕಾರಿಗಳು, ಸಂಚಾರಿ ಪೊಲೀಸರು, ಕೌಶಲ್ಯಅಭಿವೃದ್ಧಿ ಅಧಿಕಾರಿಗಳು, ಮೂಡಾ ಅಧಿಕಾರಿಗಳು. ಕೆ.ಇ. ಬಿ ಅಧಿಕಾರಿಗಳು, ತೋಟಗಾರಿಕೆ ಹಾಗೂ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.


Share