ಪ್ಲಾಸ್ಮಾದಾನ ಮಾಡಿದವರಿಗೆ ಅಭಿನಂದನಾ ಕಾರ್ಯಕ್ರಮ.

331
Share

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರಾ ರಕ್ತನಿಧಿ ಕೇಂದ್ರದಲ್ಲಿ “ಪ್ಲಾಸ್ಮಾ ಡೋನರ್ಸ್ ಲೈಫ್ ಸೇವರ್ಸ್” ಕೋರೋನಾ ಸೋಂಕಿನಿಂದ ಗುಣಮುಖರಾಗಿ ಸ್ವಯಂ ಪ್ರೇರಿತವಾಗಿ ಪ್ಲಾಸ್ಮಾದಾನ ಮಾಡಿದವರನ್ನು ಶಾಸಕರಾದ ಎಲ್. ನಾಗೇಂದ್ರ ರವರು ಅಭಿನಂದಿಸಿದರು,
ಕೂರೂನಾ ಸೋಂಕಿನಿಂದ ಗುಣಮುಖರಾದ ಪ್ಲಾಸ್ಮಾ ದಾನಿಗಳಾದ ಶಿವಶಂಕರ್,ರವಿಕುಮಾರ್, ನಿದೇಶ್ , ಶ್ರೇಯಸ್ ,ಅಭಿಲಾಷ್ ,ವಿಕ್ರಂ ಕುಮಾರ್ ,ಇವರುಗಳನ್ನು ಸನ್ಮಾನಿಸಲಾಯಿತು

ಇದೇ ಸಂಧರ್ಭದಲ್ಲಿ ಶಾಸಕರಾದ ಎಲ್. ನಾಗೇಂದ್ರ ರವರು ಮಾತನಾಡಿ ಕೊರೋನಾ ಸೋಂಕು ನಿಯಂತ್ರಣವಾಗುತ್ತಿದೆ ಎನ್ನುವುದಕ್ಕೆ ಕೊರೋನ ಸೊಂಕಿನಿಂದ ಗುಣಮುಖರಾಗಿ ಪ್ಲಾಸ್ಮಾ ರಕ್ತ ದಾನ ಮಾಡಿರುವ ಇವರೇ ಸಾಕ್ಷಿ, ಕೊರೋನ ಸೊಂಕಿತರು ಗುಣಮುಖರಾಗಲು ರೋಗನಿರೋಧಕ ಶಕ್ತಿ ಅವಶ್ಯಕ ಅಂತವರಿಗೆ ಪ್ಲಾಸ್ಮಾ ರಕ್ತಗುಣ ನೀಡಿದರೇ ಬೇಗ ಗುಣಮುಖರಾಗುತ್ತಾರೆ, ಪ್ಲಾಸ್ಮಾ ಡೋನರ್ಸ್ ಲೈಫ್ ಸೇವರ್ಸ್ ಕರೆಯ ಮೂಲಕ ಈಗಾಗಲೇ 30ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿರುವುದು ಶ್ಲಾಘನೀಯ ಈಗಾಗಲೇ ರಾಜ್ಯ ಸರ್ಕಾರ ಪ್ಲಾಸ್ಮಾ ರಕ್ತದಾನ ಮಾಡುವವರಿಗೆ 5000ರೂ ಗೌರವಧನ ನೀಡಲಾಗುತ್ತಿದೆ ರಕ್ತದಾನ ಇನ್ನೊಬ್ಬರಿಗೆ ಜೀವದಾನವಿದ್ದಂತೆ ಹಾಗಾಗಿ ಹೆಚ್ಚಾಗಿ ಕೊರೋನ ಗುಣಮುಖರು ಪ್ಲಾಸ್ಮಾ ದಾನ ಮಾಡಲು ಮುಂದಾಗಬೇಕು ಇದರಿಂದ ಮತ್ತೊಬ್ಬರ ಪ್ರಾಣ ಉಳಿಸಬಹುದು ಎಂದರು,
ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದ ಕೂರೋನಾ ಸೋಂಕಿನಿಂದ ಗುಣಮುಖರಗಿ ಬಂದಂತೆ ಎಲ್ಲರಿಗೂ ಪ್ಲಾಸ್ಮಾ ದಾನ ಮಾಡಲು ಹಾಗೂ ಅದರ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
ಒಬ್ಬರು ಮಾಡುವ ರಕ್ತದಾನದಿಂದ ಮೂರು ಜನರನ್ನು ಉಳಿಸಬಹುದು
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ನುಡಿದರು
ಒಬ್ಬ ದಾನಿಯ ರಕ್ತ ಕೇವಲ ಒಬ್ಬರಿಗೆ ಸೀಮಿತವಾಗುವುದಿಲ್ಲ
ರಕ್ತವನ್ನು ಪ್ಲಾಸ್ಮಾ .ಆರ್ ಬಿಸಿ ಮತ್ತು ಪ್ಲೇಟೆಟಾ ಆಗಿ ವಿಂಗಡಿಸಿ ಅಗತ್ಯ ಸಂದರ್ಭದಲ್ಲಿ ಮೂವರಿಗೆ ಕೊಡಲಾಗುತ್ತದೆ.ಒಬ್ಬ ವ್ಯಕ್ತಿಯ ರಕ್ತದಾನದಿಂದ ಮೂರು ಜೀವಗಳನ್ನು ರಕ್ಷಿಸಬಹುದು ಎಂದು ರಕ್ತದಾನದ ಮಹತ್ವ ತಿಳಿಸಿದರು.ಕೋರೋನಾ ಹಿನ್ನೆಲೆಯಲ್ಲಿ ಎಲ್ಲ ಸುರಕ್ಷಿತಾ ಕ್ರಮವನ್ನು ಅನುಸರಿಸಿ ಮಹಿಳೆ ಹಾಗೂ ಪುರುಷರು ಸೇರಿ ಎಲ್ಲರೂ ರಕ್ತದಾನ ಹಾಗೂ ಪ್ಲಾಸ್ಮಾ ಮಾಡುವದರಲ್ಲಿ ಮುಂದಾಗಬೇಕು ಎಂದು ಮನವಿ ಮಾಡಿದರು
ಜೀವಧಾರ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ಗಿರೀಶ್, ಮುತ್ತಣ್ಣ, ಸಂಜೆ ಸಮಯ ಪತ್ರಿಕೆ ಸಂಪಾದಕರಾದ ಅನಿಲ್ ಕುಮಾರ್, ಯುವಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ರಕ್ತದಾನ ಮಹಾದಾನ ಗೋಭಕ್ತ ಸಂಘ ಅಧ್ಯಕ್ಷರಾದ ದೇವೆಂದ್ರ,ಆನಂದ್ , ಕುಮಾರ್ ಕಶ್ಯಪ್ ಮುಂತಾದವರು ಇದ್ದರು


Share