ಮೈಸೂರು- 8 ವರ್ಷಗಳಿಂದ ನಾಪತ್ತೆಯಾಗಿದ್ದ ವಾರೆಂಟ್ ಆಸಾಮಿಯ ಬಂಧನ . 

235
Share

ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 8 ವರ್ಷಗಳಿಂದ ನಾಪತ್ತೆಯಾಗಿದ್ದ ವಾರೆಂಟ್ ಆಸಾಮಿಯ ಬಂಧನ . 

ಮೈಸೂರು ನಗರ ಮಂಡಿ ಪೊಲೀಸ್ ಠಾಣೆಯಲ್ಲಿ 2013 ನೇ ಸಾಲಿನಲ್ಲಿ ದಾಖಲಾಗಿದ್ದ ಪೋಕ್ಲೋ ಕಾಯ್ದೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದು , ದಿನಾಂಕ 09/03/2015 ರಿಂದ ಆರೋಪಿಯು ಘನ ನ್ಯಾಯಾಲಯಕ್ಕೆ ಹಾಜರಾಗದೇ , ತಲೆಮರೆಸಿಕೊಂಡಿದ್ದು , ನ್ಯಾಯಾಲಯವು ಪ್ರಕರಣವನ್ನು ಎಲ್.ಪಿ.ಸಿ ಪ್ರಕರಣವೆಂದು ಆದೇಶ ಹೊರಡಿಸಿರುತ್ತದೆ .  ತಲೆಮರೆಸಿ ಕೊಂಡಿರುವ ವಾರೆಂಟ್ ಆಸಾಮಿಯ ಪತ್ತೆ ಸಲುವಾಗಿ ಮಂಡಿ ಠಾಣಾ ಪೊಲೀಸರು ಬಾತ್ಮೀದಾರರ ಮಾಹಿತಿಯನ್ನಾಧರಿಸಿ  10/01/2023 ರಂದು ಬೆಂಗಳೂರಿನ ಶಿವಾಜಿನಗರದ ಪ್ರಿನ್ಸ್ ರಸ್ತೆಯ ದರ್ಗಾದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಮುಂದಿನ ಕ್ರಮಕ್ಕಾಗಿ ದಿನಾಂಕ 11/01/2023 ರಂದು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ . ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ , ಕಾನೂನು ಮತ್ತು ಸುವ್ಯವಸ್ಥೆ ರವರಾದ ಶ್ರೀ . ಮುತ್ತುರಾಜು.ಎಂ , ಐ.ಪಿ.ಎಸ್ ಹಾಗೂ ನರಸಿಂಹರಾಜ ವಿಭಾಗದ ಎ.ಸಿ.ಪಿ ರವರಾದ ಶ್ರೀ ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ಮಂಡಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ನಾಗೇಶ್.ಎಸ್ ಸಿಬ್ಬಂದಿಗಳಾದ ಮಂಜು , ಮಹಬೂಬ್‌ಖಾನ್ ಮತ್ತು ಸಿದ್ದರಾಜು ರವರುಗಳು ಮಾಡಿರುತ್ತಾರೆ . ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಶ್ರೀ . ಬಿ . ರಮೇಶ್ , ಐ.ಪಿ.ಎಸ್ . ರವರು ಪ್ರಶಂಸಿಸಿರುತ್ತಾರೆ .

Share