ಮೊಳಗಿದ ಕನ್ನಡದ ಶ್ರೇಷ್ಠತೆಯನ್ನು ಸಾರುವ ಗೀತೆಗಳ ಗಾಯನ*

240
Share

 

*ಜಿಲ್ಲೆಯಲ್ಲಿ ಮೊಳಗಿದ ಕನ್ನಡದ ಶ್ರೇಷ್ಠತೆಯನ್ನು ಸಾರುವ ಗೀತೆಗಳ ಗಾಯನ*
***************************

ಮಂಡ್ಯ, ಅ 28.:-
ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಆಶಯದಂತೆ ಇಂದು ರಾಜ್ಯೋತ್ಸವವನ್ನು “ಕನ್ನಡಕ್ಕಾಗಿ ನಾವು” ಎಂಬ ಶೀರ್ಷಿಕೆಯಡಿ ಅಭಿಯಾನವಾಗಿ ಅಚರಿಸುವ ನಿಟ್ಟಿನಲ್ಲಿ ಇಂದು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಗೀತೆಗಳ ಸಾಮೂಹಿಕಗಾಯನ ಏಕಕಾಲದಲ್ಲಿ ಮೊಳಗಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ‌ ಶಿಕ್ಷಣ ಇಲಾಖೆ,ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು.

ಕನ್ನಡದ ಶ್ರೇಷ್ಠತೆಯನ್ನು ಸಾರುವ ಕುವೆಂಪುರವರ “ಬಾರಿಸು ಕನ್ನಡ ಡಿಂಡಿಮವ”, ಡಾ.ಕೆ.ಎಸ್.ನಿಸಾರ್ ಅಹಮ್ಮದ್ ರವರ “ಜೋಗದ ಸಿರಿ ಬೆಳಕಿನಲ್ಲಿ”, ಹಾಗೂ ಹಂಸಲೇಖರವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಈ ಮೂರು ಹಾಡುಗಳನ್ನು ಜಿಲ್ಲೆಯ ವಿವಿಧ ಶಾಲೆ-ಕಾಲೇಜಿನ ಮಕ್ಕಳು, ಏಕಕಾಲದಲ್ಲಿ ಹಾಡಲು ವ್ಯವಸ್ಥೆಗೊಳಿಸಲಾಯಿತು.

ಸಾಮೂಹಿಕ ಗಾಯನದಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡದ ಶ್ರೇಷ್ಠ ಗೀತೆಗಳಿಗೆ ಧ್ವನಿಯಾಗಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಈ ಪೈಕಿ ನಗರದ ಕಾರ್ಮೆಲ್ ಶಾಲೆ, ಲಕ್ಷ್ಮೀಜನಾರ್ಧನ ಶಾಲೆ , ಪ್ರತಿಭಾಂಜಲಿ ಸ್ಕೂಲ್, ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆಗೆ


Share