MP ಕವನ ಸಂಗ್ರಹ : ಕವಿತೆಯ ಹುಟ್ಟು – ಶ್ರೀಮತಿ . ಆಶಾಲತ

269
Share

ಕವಿತೆಯ ಹುಟ್ಟು
ನಾನೊಂದು ಕವಿತೆಯರಚಿಸಲೊರಟೆ
ನನ್ನ ಭಾವಗಳೆಲ್ಲವ ಅದರಲ್ಲಿ ತುಂಬಲೊರಟೆ
ಸುಮ್ಮನಿರಲು ಬೇಸರ
ಏನನ್ನಾದರೂ ಬರೆವ ಕಾತರ
ಏನೂ ತೋಚುತ್ತಿಲ್ಲ, ಏನೂ ಹೊಳೆಯುತ್ತಿಲ್ಲ ||1||

ಕವಿತೆ ಹುಟ್ಟವುದು ನಶೆಯಿಂದಲೇ
ಎಂಬುದು ವಿದೇಶಿ ಕವಿಯೊಬ್ಬರ ಅನಿಸಿಕೆ
ಆದರೆ ಕವಿತೆ ಹುಟ್ಟುವುದು ನಶೆಯಿಂದಲ್ಲ, ಯಾವುದೇ ಆಸೆ –
ಆಮಿಷಗಳಿಂದಲ್ಲ
ಕವಿತೆಹುಟ್ಟುವುದು ಕವಿಯಾದವನ
ಜೀವನಾನುಭಾವದಿಂದ
ಅವನ ಮನದಾಳದ ನೋವಿನಿಂದ ||2||

ರವಿ ಕಾಣದ್ದನ್ನು ಕವಿಕಂಡ
ಕವಿಯಾದವನು ತಾನು ಬಾಳಿನುದ್ದಕ್ಕೂ ಕಂಡುಂಡ ನೈಜ ಘಟನಾವಳಿಗಳ ಮೂರ್ತರೂಪವೇ
ಕವನ
ತಾನನುಭವಿಸಿದ ನೋವು -ನಲಿವುಗಳ ಸಮ್ಮಿಶ್ರ ಭಾವವೇ ಕವನ ||3||

ಕವನವೆಂಬುದು ಕವಿ ಹೃದಯದ ಭಾವಗಳ ಸಂಗಮ
ಭಾವಗಳ ಮಿಲನದ ಸುಂದರ ರೂಪವೇ ಕವನ
ಕವಿಯಾದವನ ಅನುಭವದ ಮೂಸೆಯಲ್ಲಿ ಸೃಷ್ಟಿಯಾದುದೇ ಕವನ
ಸಹೃದಯನಾದವನಿಗೆ ನಲಿವಿನ ರಸದೌತಣನೀಡುವುದೇ ಕವನ ||4||

ನೊಂದ ಮನಕ್ಕೆ ಸಾಂತ್ವನ ನೀಡುವ ಮಮತಾಮಯಿಯಂತೆ ಕವನ
ಬದುಕಿನ ಏಕತಾನತೆಯನ್ನು ನೀಗಿ ಸದಾ ಜೊತೆಯಿರುವ ಆತ್ಮೀಯ ಗೆಳೆಯನಂತೆ ಕವನ
ಬದುಕಿನ ಆರೋಗ್ಯಕ್ಕೆ ಪೂರಕವಾಗಿರುವುದೇ ಕವನ ||5||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ ಬ್ಯಾಂಕ್, ಕೆ. ಹೊನ್ನಲಗೆರೆ, ಮದ್ದೂರು ( ಚನ್ನಪಟ್ಟಣ )


Share