ಭಾವನೆಗಳ ಬುಟ್ಟಿ : ಅಮೃತಧಾರೆ – ಭೂಮಿಕ ಮೇಕಪ್ ಅತಿಯಾಯ್ತು

59
Share

ಜೀ ವಾಹಿನಿಯಲ್ಲಿ ಅಮೃತಧಾರೆ ಧಾರವಾಹಿ ಅತ್ಯದ್ಭುತವಾಗಿ ಮೂಡಿ ಬರುತ್ತಿದೆ. ಅದರ ನಾಯಕ ನಾಯಕಿ ಗೌತಮ್ ಭೂಮಿಕ ಜೋಡಿಯಂತು ಎಲ್ಲರನ್ನೂ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ನಾನು ಆರಂಭದಲ್ಲಿ ನೋಡುತ್ತಿದ್ದಾಗ ಭೂಮಿಕ ಮಧ್ಯಮ ವರ್ಗದಿಂದ ಬಂದವಳಾಗಿ ಸಾಧಾರಣ ಹಾಗೂ ಪ್ರಬುದ್ಧಳು ಎನ್ನುವಂತೆ ತೋರಿಸಲಾಗುತ್ತಿತ್ತು. ಅದೇ ಎಲ್ಲರ ಗಮನವನ್ನು ಸೆಳೆದಿತ್ತು. ಆ ಪಾತ್ರಕ್ಕೆ ಅದು ಅಚ್ಚುಕಟ್ಟಾಗಿ ಕಾಣುತ್ತಿತ್ತು
ಸ್ವಲ್ಪ ದಿನ ಧಾರವಾಹಿ ನೋಡಿರಲಿಲ್ಲ. ಆದರೆ ಈಗ ನೋಡುದರೆ ಮುಖಕ್ಕೆ ಅತಿಯಾದ ಮೇಕಪ್, ಆ ಕೃತಕ ಜೆಡೆ ಭೂಮಿಕಾಗೆ ಚೆನ್ನಾಗಿ ಕಾಣುತ್ತಿಲ್ಲ. ಮುಂಚೆ ಇದ್ದ ಆ ಮುಗ್ಧತೆ, ಪ್ರಬುದ್ಧತೆ ಈಗ ಕಂಡು ಬರುತ್ತಿಲ್ಲ. ಸಾಮಾನ್ಯವಾಗಿ ನಾಯಕಿ ಪಾತ್ರಕ್ಕೆ ಹೆಚ್ಚು ಮೇಕಪ್ ಮಾಡುವುದು ವಾಡಿಕೆ. ಆದರೆ ಅದು ಪಾತ್ರಕ್ಕೆ ತಕ್ಕಂತೆ ಇದ್ದರೆ ಚಂದ. ಭೂಮಿಕಾ ಪಾತ್ರಕ್ಕೆ ಈ ಕೃತಕ ಮೇಕಪ್ ಸೌಂದರ್ಯ ಸ್ವಲ್ಪವೂ ಚೆನ್ನಾಗಿ ಕಾಣುತ್ತಿಲ್ಲ. ನಿರ್ದೇಶಕರು ಇದರ ಕಡೆ ಗಮನ ಕೊಡುವುದು ವಾಸಿ.

ಸಹನ , ಕೋಲಾರ

 


Share