ಭಾವನೆಗಳ ಬುಟ್ಟಿ : ಶನಿವಾರ ಬಂದರೆ ಖುಷಿ !!

194
Share

ಇಂದು ಶನಿವಾರ. ಶನಿವಾರ ಎಂದರೆ ಸಂತಸ. ಏಕೆಂದರೆ ಟಿವಿಯಲ್ಲಿ ವಿವಿಧ ರಿಯಾಲಿಟಿ ಶೋ ಗಳು ಪ್ರಸಾರವಾಗುತ್ತದೆ. ಸ್ವಲ್ಪ ಹಿಂದೆ ಶನಿವಾರ ಭಾನುವಾರ ಎಂದರೆ ನೀರಸವಾಗುತ್ತಿತ್ತು. ಕಾರಣ ಇದೇ ಟಿವಿ ಕಾರ್ಯಕ್ರಮಗಳು. ಮೆಗಾ ಧಾರವಾಹಿಗಳು ಶುಕ್ರವಾರ ಮುಖ್ಯ ತಿರುವಿನಲ್ಲಿ ನಿಲ್ಲಿಸಿಬಿಡುತ್ತಿದ್ದರು. ಮತ್ತೆ ಸೋಮವಾರದ ತನಕ ಕಾಯಬೇಕಲ್ಲ ಅನ್ನಿಸುತ್ತಿತ್ತು. ಆದರೆ ಈಗೀಗ ಧಾರವಾಹಿ ಅಂದರೆ ವಾಕರಿಕೆ ಬರುವಂತಾಗಿದೆ. ಹುರುಳಿಲ್ಲದ, ಮುಗಿಯದ, ಬರೀ ವಿಲ್ಲನ್ ಗಳನ್ನೇ ತೋರಿಸುವ ಕಥೆಗಳು. ಒಂದು ವಾರ ಇರಲಿ ಒಂದು ತಿಂಗಳು ಬಿಟ್ಟು ನೋಡಿದರೂ ಒಂದು ಇಂಚೂ ಕಥೆ ಮುಂದೆ ಹೋಗಿರುವುದಿಲ್ಲ.
ಇದಕ್ಕೆ ಹೋಲಿಸಿದರೆ ರಿಯಾಲಿಟಿ ಶೋ ಗಳೇ ಬೆಸ್ಟ್. ಬೇಗ ಬೇಗ ಸೀಸನ್ ಮುಗಿದು ಹೊಸ ಹೊಸದು ಬರುತ್ತದೆ. ಹಾಗಾಗಿ ಶನಿವಾರ ಬಂದರೆ ಖುಷಿ . ಟಿವಿ ನೋಡಬಹುದು ಎನ್ನುವ ಖುಷಿ .
ನಳಿನಿ
ಶಿವಮೊಗ್ಗ


Share