MP ಕವನ ಸಂಗ್ರಹ : ಅಮ್ಮನಿಲ್ಲದ ಮನೆ – ಕವಿಯಿತ್ರಿ ಆಶಾಲತ

176
Share

ಅಮ್ಮ ನಿಲ್ಲದ ಮನೆ

ಅಮ್ಮನಿಲ್ಲದ ಮನೆ ಬಣ ಗುಟ್ಟುತ್ತಿದೆಯಲ್ಲ
ಪ್ರೀತಿಯಸವಿಮಾತಿನ ಮಾಧುರ್ಯ
ವಿಲ್ಲ
ಬಳೆಗಳ ನಿನಾದದ ಇನಿದನಿ ಇಲ್ಲ
ಒಡಲ ಕುಡಿಯ ಕಾಳಜಿ ಮಾಡುವವರು ಇಲ್ಲವೇ ಇಲ್ಲ
ಅಂತರಾಳದ ಮಮತೆಯ ಸಿಂಚನ ಕಣ್ಮರೆಯಾಗಿದೆಯಲ್ಲ ||1||
ಅವಳು ಬರುವ ಹೆಜ್ಜೆಯ ನಾದದಿ
ತವರೂರಿನ ಸವಿ ನೆನಪುಗಳು ರಿಂಗನಣಿಸುವುವು ಸದಾ
ಏಕಾಂಗಿ ಬದುಕಿಗೆ ಆಸರೆಯಾದವಳು ಒಮ್ಮಲೇ ಮಾಯವಾಗಿ ಬಿಟ್ಟರೆ ಪಿಸು ಮಾತಿನ ಸದ್ದಿಲ್ಲ
ನಗೆಯ ಕಾರಂಜಿ ಇಲ್ಲವೇ ಇಲ್ಲ
ಮನೆಯಂಗಳದ ತರು ಲತೆಗಳು
ಅಮ್ಮನಾರೈಕೆಯಿಲ್ಲದೆ ಸೊರಗಿಹೋಗಿವೆ
ಅಮ್ಮನಿಲ್ಲದ ಮನೆ ಬಣಗುಟ್ಟಿ ತ್ತಿದೆಯಲ್ಲ ||2||
ಅಮ್ಮನ ಇರುವಿಕೆಯಿಲ್ಲದೇ ಗಿಡ ಬಳ್ಳಿಗಳು ಅತಿಥಿಗಳ ಸ್ವಾಗತಿಸುವುದನ್ನು ಮರೆತಿವೆಯಲ್ಲ
ಮನೆಯ ಮುಂದಣ ರಂಗವಲ್ಲಿಯು
ಮಾತೆಯಿಲ್ಲದೆ ಮುಖವಾಗಿ ರೋಧಿಸುತ್ತಿದೆಯಲ್ಲ
ತುಳಸಿ ಮಾತೆಯ ಮುಂದೆ ಪ್ರಜ್ವಲಿಸುವ ಜ್ಯೋತಿಯಲ್ಲಿ ಕಾಂತಿಯೇ ಇಲ್ಲಾ
ಅಮ್ಮನಿಲ್ಲದ ಮನೆ, ಮನಗಳೆಲ್ಲವೂ ಬಣ ಗುಟ್ಟುಟ್ಟಿದೆಯಲ್ಲ ||3||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share