MP ಕವನ ಸಂಗ್ರಹ : ಮತ ಬಾಂಧವರೆ – ಕವಿಯಿತ್ರಿ ಆಶಾಲತ

65
Share

ಮತದಾನದ ಜಾಗೃತಿ ಕುರಿತು

ಮತ ಬಾಂಧವರೇ

ಓ ನನ್ನ ಪ್ರೀತಿಯ ಮತಬಾಂಧವರೆ
ನಮ್ಮನಾಳ್ವ ನಾಡ ಪ್ರಭುಗಳ ಆಯ್ಕೆ ಮಾಡುವ ನಾಗರೀಕ ಬಂಧುಗಳೇ
ಬರುತ್ತಿದೆ, ಬರುತ್ತಿದೆ ಚುನಾವಣೆ
ನೀಡುತ್ತಿದೆ, ನೀಡುತ್ತಿದೆ ಸಾವಿರಾರು
ಆಶ್ವಾಸನೆ
ಸಾಗರೋಪಡದಿಯಲ್ಲಿ ಹರಿದು ಬರುತ್ತಿದೆ ಧನ – ಕನಕ, ವಸ್ತುಗಳ
ಆಮಿಷವು
ಜಾಗೃತರಾಗಿ, ಜಾಗೃತಿಯಿಂದ
ಸಮರ್ಥ ನಾಯಕರ ಆಯ್ಕೆ ಮಾಡಿರಿ ||1||

ಓ,ನನ್ನ ಪ್ರೀತಿಯ ಮತg ಬಾಂಧವರೇ
ಸುಳ್ಳು, ಆಶ್ವಾಸನೆಗಳಿಗೆ, ಪೊಳ್ಳು ಭರವಸೆಗಳಿಗೆ, ಕ್ಷಣಿಕ ಆಮಿಷ ಗಳಿಗೆ ಬಲಿಯಾಗದಿರಿ
ದೇಶಕೊಳ್ಳೆ ಹೊಡೆಯುವ ಲೂಟಿಕೋರರ,ಭ್ರಷ್ಟಾಚಾರವನ್ನೇ
ಉಂಡುಟ್ಟು ಹಾಸಿ ಹೊದೆಯುವ
ಭ್ರಷ್ಟಾಚಾರಿಗಳ,ತಾಯ್ನಾಡನ್ನೆ ಮಾರಾಟ ಮಾಡುವ ಕಳ್ಳ ಕೊರಮರ ಬಗ್ಗು ಬಡಿಯಿರಿ
ರಾಷ್ಟ್ರದ ಏಳಿಗೆಗಾಗಿ ಸಮರ್ಥ ನಾಯಕರನ್ನು ಆಯ್ಕೆ ಮಾಡಿರಿ ||2||

ಓ ನನ್ನ ಪ್ರೀತಿಯ ಮತಬಾಂಧವರೆ
ಯಾರು ಹಿತವರು ಈ ಮೂವರೊಳಗೆ ಕರವೋ, ಕಮಲವೋ ತೆನೆ ಹೊತ್ತ ಮಹಿಳೆಯೋ? ಪಕ್ಷವನ್ನು ನೋಡಿ ಮತವನ್ನು ನೀಡದಿರಿ, ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲಲಿ ನಿಮ್ಮ ಆಯ್ಕೆಯಲ್ಲಿ
ಜಾತಿ, ಮತ, ಧರ್ಮಗಳನ್ನು ಮೀರಿದ, ನೀತಿ, ಆದರ್ಶಗಳನ್ನು
ಎತ್ತಿ ಹಿಡಿಯುವ ಸಜ್ಜನ ನಾಯಕನ ಆಯ್ಕೆ ಮಾಡಿರಿ ||3||

ಓ ನನ್ನ ಪ್ರೀತಿಯ ಮತ ಬಾಂಧವರೇ
ಏಳಿ, ಎದ್ದೇಳಿ ಜಾಗೃತ ಮನಸ್ಕರಾಗಿ
“ಮತದಾನ “ನಮ್ಮೆಲ್ಲರ ಮೂಲಭೂತ ಹಕ್ಕು
ನಮ್ಮ ದೇಶ ಸೇವಕರಿಗೆ ನಾವೂ ನೀಡುವ ಒಂದು ಅಮೂಲ್ಯವಾದ ದಾನ
ಮತದಾನ ನಮ್ಮೆಲ್ಲರ ಜವಬ್ದಾರಿಯುತವಾದ ಹೊಣೆ ಗಾರಿಕೆ
ನಮ್ಮ ದೇಶದ ಭವಿಷ್ಯಕ್ಕಾಗಿ
ನಮ್ಮೆಲ್ಲರ ಸಾಮರಸ್ಯಕ್ಕಾಗಿ
ನಮ್ಮೆಲ್ಲರ ಒಳಿತಿಗಾಗಿ
ಜವಾಬ್ದಾರಿಯುತವಾಗಿ ಮತ
ಚಲಾಯಿಸ ಬೇಕು
ಸಮರ್ಥ ನಾಯಕನ ಆಯ್ಕೆ ನಮ್ಮೆಲ್ಲರ ಮಹತ್ತರ ಜವಾಬ್ದಾರಿ ||4||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share