ಸಂವಿಧಾನ ಜಾಗೃತಿ ಜಾಥಾ;ಮೈಸೂರಿಗೆ ಪ್ರಧಮ ಸ್ಥಾನ

110
Share

*ಸಂವಿಧಾನ ಜಾಗೃತಿ ಜಾಥಾ: ಉತ್ತಮ ಕಾರ್ಯಕ್ರಮ ಆಯೋಜನೆ ವಿಭಾಗದಲ್ಲಿ ಮೈಸೂರಿಗೆ ಪ್ರಧಮ ಸ್ಥಾನ*

ಮೈಸೂರು ಫೆ.24  ಸಂವಿಧಾನದ ಜಾಗೃತಿ ಜಾಥಾದಲ್ಲಿ ಮೈಸೂರು ವಿಭಾಗದಲ್ಲಿ *ಮೈಸೂರು ಜಿಲ್ಲೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ ಉತ್ತಮ ಕಾರ್ಯಕ್ರಮ ಆಯೋಜನೆ (ಆಕ್ಟಿವಿಟಿ) ವಿಭಾಗದಲ್ಲಿ ಪ್ರಥಮ ಸ್ಥಾನ ಲಭಿಸಿದೆ*

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಂವಿಧಾನ ಜಾಗೃತಿ ಐಕ್ಯತಾ ಸಮಾವೇಶ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾಗೂ‌ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಡಾ.ಹೆಚ್.ಸಿ.ಮಹಾದೇವಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಅವರು ಸ್ವೀಕರಿಸಿದರು.


Share