ಯುಗಾದಿ ನಿರ್ಣಯ -ಯುಗಾದಿ ಹಬ್ಬ ಮಂಗಳವಾರ ಆಚರಿಸಿ

483
Share

 

ಯುಗಾದಿ ನಿರ್ಣಯ

ಈ ಬಾರಿ ಅಮಾವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಇರುವದರಿಂದ ಹಾಗು ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಇರುವದರಿಂದ ಅನೇಕ ಜನರಿಗೆ ಅಮಾವಾಸ್ಯೆ – ಯುಗಾದಿ ಆಚರಣೆಯ ವಿಷಯದಲ್ಲಿ ಗೊಂದಲ ಉಂಟಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅನೇಕರು ಸೋಮವಾರ ಯುಗಾದಿಯ ಆಚರಣೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಶಾಸ್ತ್ರಗಳ ಅನ್ವಯ ಯುಗಾದಿ ನಿರ್ಣಯದ ಚರ್ಚೆ ಮಾಡೋಣ.

ತಿಥಿಗಳ ಕಾಲಮಾನ-.
1. ಅಮಾವಾಸ್ಯ ತಿಥಿಯು 11/04/21 ರವಿವಾರ ಬೆಳಿಗ್ಗೆ 6-05 ರಿಂದ ಪ್ರಾರಂಭವಾಗಿ ಸೋಮವಾರ (12/04/21) ಬೆಳಿಗ್ಗೆ 8.01 ಕ್ಕೆ ಅಂತ್ಯವಾಗುತ್ತದೆ.
2. ಪ್ರತಿಪಾದ ತಿಥಿಯು 12/04/21 ಸೋಮವಾರ ಬೆಳಿಗ್ಗೆ 8.02 ರಿಂದ 13/04/21 ಮಂಗಳವಾರ 10.17ರವರೆಗೆ ಇದೆ . ಮಗಳವಾರ ಸೂರ್ಯೋದಯವು ಬೆಳಿಗ್ಗೆ 6-18 ಕ್ಕೆ ಇದೆ.

ಅಮವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಬಂದಿದೆ. ” ಹೊಕ್ಕ ಹುಣ್ಣಿಮೆ ಮಿಕ್ಕ ಅಮಾವಾಸ್ಯ ” ಎಂಬ ನಿಯಮದಂತೆ ಸೋಮವಾರ ದಿನದಂದು ಅಮಾವಾಸ್ಯ ಆಚರಣೆ ಮಾಡಬೇಕು. ಇನ್ನು ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಬರುವದು. ಇಲ್ಲಿ ಪ್ರತಿಪಾದ ತಿಥಿಯು ಮಂಗಳವಾರ ಸೂರ್ಯೋದಯ ವ್ಯಾಪಿನಿಯಾಗಿರುವದರಿಂದ ಮಂಗಳವಾರವೇ ಆಚರಣೆ ಮಾಡಬೇಕು.
ವೃದ್ಧ ವಶಿಷ್ಠ ಮತ್ತು ವಿಷ್ಣುಧರ್ಮೋತ್ತರ ಪುರಾಣದ ಆದೇಶದಂತೆ ವರ್ಷಾರಂಭವು ಚೈತ್ರ ಶುಕ್ಲ ಪ್ರತಿಪಾದ ಸೂರ್ಯೋದಯವ್ಯಾಪಿನಿಯನ್ನು ಪರಿಗಣಿಸಬೇಕು. ಶಾಸ್ತ್ರಗಳ ಪ್ರಕಾರ ವರ್ಷಾರಂಭವನ್ನು ಸೂರ್ಯೋದಯವ್ಯಾಪಿನಿ ಪ್ರತಿಪಾದ ತಿಥಿಯು ಗ್ರಾಹ್ಯವಾಗಿದೆ.

ಹೀಗಾಗಿ ಅಮಾವಾಸ್ಯೆಯನ್ನು ಸೋಮುವಾರ ಮತ್ತು ಯುಗಾದಿಯನ್ನು ಮಂಗಳವಾರ ಆಚರಿಸುವದು ಶಾಸ್ತ್ರಸಮ್ಮತವಾಗಿದೆ.


Share