ರಜನಿಕಾಂತ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

347
Share

2021ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯು ಬಹುಭಾಷಾ ಚಿತ್ರ ನಟ ರಜನಿಕಾಂತ್ ರವರಿಗೆ ಲಭಿಸಿದೆ . ಪ್ರಧಾನಿಯವರು ರಜನಿಕಾಂತ್ ರವರಿಗೆ ಈ ಸಂದರ್ಭದಲ್ಲಿ ಶುಭ ಕೋರಿದ್ದಾರೆ . ರಜನೀಕಾಂತ್ ಅಭಿಮಾನಿಗಳಿಗೆಲ್ಲ ಅತೀವ ಸಂತೋಷದ ಸಮಯ ಇದಾಗಿದೆ. ಸುಮಾರು ನಲವತ್ತೈದು ವರ್ಷಗಳಿಂದ ಚಿತ್ರಪ್ರೇಮಿಗಳನ್ನು ರಂಜಿಸುತ್ತಿದ್ದಾರೆ ನಟ ರಜನಿಕಾಂತ್ ರವರು .

ರಜನೀಕಾಂತ್ ಕನ್ನಡಿಗ(ಜನನ: ಡಿಸೆಂಬರ್ ೧೨ ೧೯೪೯) – ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯರಲ್ಲೊಬ್ಬರು. ಕನ್ನಡ ಚಿತ್ರರಂಗವಲ್ಲದೆತೆಲುಗುತಮಿಳುಹಿಂದಿ ಚಿತ್ರರಂಗದಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿಯನ್ನು ಪಡೆದಿದ್ದಾರೆ. ಇವರು ಬೆಂಗಳೂರು ಮಹಾನಗರ ಸಾರಿಗೆಯಲ್ಲಿ ನಿರ್ವಾಹಕರಾಗಿದ್ದುಕೊಂಡು ನಾಟಕಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ೧೯೭೩ರಲ್ಲಿ ಇವರು ಅಭಿನಯದಲ್ಲಿ ಡಿಪ್ಲೊಮಾ ಪಡೆಯಲು ಮದ್ರಾಸ್ ಚಲನಚಿತ್ರ ಸಂಸ್ಥೆ ಸೇರಿಕೊಂಡರು. ಇವರ ಚೊಚ್ಚಲ ಚಿತ್ರ “ಅಪೂರ್ವ ರಾಗಂಗಳ್”ನ ನಂತರ ಕೆಲ ಸಮಯ ತಮಿಳು ಚಿತ್ರಗಳಲ್ಲಿ ಇವರ ವೃತ್ತಿ ವಿರೋಧಿ ಪಾತ್ರಗಳಿಂದ ಶುರುವಾಯಿತು. ಕೆಲ ಯಶಸ್ವಿ ವಾಣಿಜ್ಯ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಗುರುತಿಸಿಕೊಂಡ ನಂತರ, ಇವರಿಗೆ “ಸೂಪರ್ ಸ್ಟಾರ್” ಎಂದು ಕರೆಯಲಾಯಿತು, ಮತ್ತು ಅಂದಿನಿಂದ ಈ ಬಿರುದನ್ನು ಉಳಿಸಿಕೊಂಡಿದ್ದಾರೆ. ಇವರ ಲಕ್ಷಣತೆ ಮತ್ತು ವಿಭಿನ್ನ ಶೈಲಿಯ ನಟನೆ ಮತ್ತು ಸಂಭಾಶಣೆಗಳು ಇವರ ಅಪೂರ್ವ ಜನಪ್ರೀಯತೆಗೆ ಕಾರಣವಾಗಿದೆ. ಶಿವಾಜಿ ಚಿತ್ರದ ಪಾತ್ರಕ್ಕೆ ೨೬ ಕೋಟಿ ರುಪಾಯಿಗಳನ್ನು ಪಡೆದ ನಂತರ, ಇವರು ಎಶಿಯಾದ ಎರಡನೆ ಅತಿ ಹೆಚ್ಚು ಸಂಭಾವನೆ ಪಡೆದ ಹೆಗ್ಗಳಿಕಗೆ ಪಾತ್ರರಾದರು, ಮೊದಲ ಸ್ಥಾನದಲ್ಲಿ ಜಾಕೀ ಚಾನ್ ಇದ್ದರು. ಭಾರತದ ಇತರೆ ಪ್ರಾದೇಶಿಕ ಭಾಶೆಗಳ ಚಿತ್ರಗಳಲ್ಲಿ ನಟಿಸುತ್ತ, ಇವರು ಕೆಲ ಅಮೇರಿಕಾದ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ೨೦೧೪ರ ವರೆಗೆ, ಇವರು ತಮಿಳುನಾಡಿನ ೬ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ- ೪ ಉತ್ತಮ ನಟ ಪ್ರಶಸ್ತಿಗಳು ಮತ್ತು ೨ ವಿಶೇಷ ಪ್ರಶಸ್ತಿಗಳು ಉತ್ತಮ ನಟಕ್ಕೆ, ಮತ್ತು ಒಂದು ಉತ್ತಮ ನಟ ಪಾತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ. ನಟನೆಯ ಜೊತೆಗೆ, ಇವರು ನಿರ್ಮಾಪಕರಾಗಿಯೂ ಚಿತ್ರಕಥೆಗಾರರಾಗಿಯು ಕಾಣಿಸಿಕೊಂಡಿದ್ದಾರೆ. ವೃತ್ತಿಯನ್ನು ಹೊರತುಪಡಿಸಿ, ಇವರು ಲೋಕೋಪಕಾರಿಯಾಗಿ, ಅಧ್ಯಾತ್ಮಕರಾಗಿ, ಮತ್ತು ದ್ರಾವಿಡ ರಾಜಕೀಯದಲ್ಲಿ ಪ್ರಭಾವ ಬೀರಿದ್ದಾರೆ. ಲೇಖನ ಕೃಪೆೆ ವಿಕಿಪೀಡಿಯಾ


Share