ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ‘ರಾಕೆಟ್ ಉಡಾವಣೆ

50
Share

ಕೌಟಿಲ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ‘ರಾಕೆಟ್ ಉಡಾವಣೆ*

ವಿಶ್ವದ ಗಮನವನ್ನು ಸೆಳೆದ ಚಂದ್ರಯಾನ-3ರ ಯಶಸ್ವಿ ಉಡಾವಣೆಯ ನಂತರ, ವಿದ್ಯಾರ್ಥಿಗಳಲ್ಲಿ ಸೃಜನ ಶೀಲತೆ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ‘ವರ್ಲ್ಡ್ ಸ್ಪೇಸ್ ವೀಕ್’ನ ಅಂಗವಾಗಿ ನಗರದ ಕೌಟಿಲ್ಯ ವಿದ್ಯಾಲಯದ ಅಧ್ಯಕ್ಷರಾದ ಶ್ರೀ.ಟಿ.ಬಾಬುರವರು, ಬೆಂಗಳೂರಿನ ಜೆನಕ್ಸ್ ಸ್ಪೇಸ್‌ ಸಹಯೋಗದೊಂದಿಗೆ ಇಂದು ವಿಧ್ಯಾರ್ಥಿಗಳಿಗೆ ಬಾಹ್ಯಾಕಾಶ, ಶಿಕ್ಷಣ ಕಾರ್ಯಾಗಾರವನ್ನು ಶಾಲಾ ಆವರಣದಲ್ಲಿ ಏರ್ಪಡಿಸಲಾಗಿತ್ತು,

ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ರಾಕೆಟ್ ತಯಾರಿಸುವ ಹಾಗೂ ಉಡಾವಣೆ ಮಾಡುವ ಬಗೆಗೆ ಪ್ರಾಯೋಗಿಕವಾಗಿ ಕಲಿತು, ನಂತರ ಶಾಲಾ ಆವರಣದಲ್ಲಿ ರಾಕೆಟ್ ಉಡಾವಣೆ ಮಾಡಿದರು


Share