ವೈದ್ಯ ವೃತ್ತಿಯ ಪಾವಿತ್ರತೆ ಉಳಿಸಿ; ಶ್ರೀವತ್ಸ

42
Share

 

ವೈದ್ಯ ವೃತ್ತಿಯ ಪಾವಿತ್ರತೆ ಉಳಿಸಿ, ಬೆಳಸುವ ಜವಾಬ್ದಾರಿ ಯುವ ವೈದ್ಯರ ಮೇಲಿದೆ : ಟಿ ಎಸ್ ಶ್ರೀವತ್ಸ ಆಶಯ

ಮೈಸೂರು : ವೈದ್ಯ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದುರ ಜತೆಗೆ ವೃತ್ತಿ ಪಾವಿತ್ರತೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಇಂದಿನ ವೈದ್ಯರ ಮೇಲಿದೆ ಎಂದು ಶಾಸಕರಾದ ಟಿ ಎಸ್ ಶ್ರೀವತ್ಸ ಅಭಿಮತ ವ್ಯಕ್ತಪಡಿಸಿದರು.

ನಗರದ ಚಾಮುಂಡಿಪುರಂನಲ್ಲಿರುವ ಬಾಲ ಬೂದಿನಿ ಶಾಲೆಯಲ್ಲಿ
ಅಪೂರ್ವ ಸ್ನೇಹ ಬಳಗ ಹಾಗೂ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ
ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು
ಜನತೆ ವೈದ್ಯರನ್ನು ದೇವರಂತೆ ಕಾಣುತ್ತಾರೆ. ಆದರೆ, ವೈದ್ಯ ವೃತ್ತಿಯಲ್ಲಿ ರೋಗಿಗಳೇ ದೇವರು. ವೈದ್ಯರು ಅರ್ಚಕರಿಂದ್ದಂತೆ ಆಸ್ಪತ್ರೆಯೇ ದೇವಾಲಯ. ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಲು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಕೆಲವು ವೈದ್ಯರ ವರ್ತನೆಯಿಂದಾಗಿ ಶ್ರೀಸಾಮಾನ್ಯರಲ್ಲಿ ವ್ಯತಿರೀಕ್ತ ಮನೋಭಾವ ಬೆಳೆದಿರುವುದು ಕಳವಳಕಾರಿ. ಇಡೀ ವೈದ್ಯಕೀಯ ಕ್ಷೇತ್ರದಲ್ಲಿ ಆದರಣೀಯ ಗುಣಗಳನ್ನು ಅಳವಡಿಸಿಕೊಂಡು ಸೇವೆಗೆ ಪ್ರಥಮ ಆದ್ಯತೆ ನೀಡಿದಾಗಲೇ ಸಾರ್ಥಕವಾಗುತ್ತದೆ ಎಂದು ಪ್ರತಿಪಾಧಿಸಿದರು

ಉಡುಪಿಯ ಪೇಜಾವರ ಮಠದ ಶ್ರೀ ಶ್ರೀ
ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ಮಾಡಿ ಮಾತನಾಡಿದ ಶ್ರೀಗಳು ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು,ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು

ನಂತರ ಮಾತನಾಡಿದ
ನಾರಾಯಣ ಹೃದಯಾಲಯ
ವೈದ್ಯಕೀಯ ನಿರ್ದೇಶಕರು
ಡಾ. ಎಂ‌ ಎನ್ ರವಿ
ಮಾತನಾಡಿ, ರೋಗಿಗಳೊಂದಿಗೆ ವೈದ್ಯರು ಹೆಚ್ಚುಹೊತ್ತು ಮಾತನಾಡಿದಷ್ಟು ಆತ್ಮವಿಶ್ವಾಸ ರೋಗಿಗಳಲ್ಲಿ ಬೆಳೆಯುತ್ತದೆ ಜತೆಗೆ ಕಾಯಿಲೆಯ ಬಗ್ಗೆ ವೈದ್ಯರಿಗೂ ಸ್ಪಷ್ಠತೆ ಸಿಗುತ್ತದೆ. ಇದರಿಂದಾಗಿ ಅಗತ್ಯ ಚಿಕಿತ್ಸೆಯನ್ನು ಅಂತ್ಯಂತ ಪರಿಣಾಮಕಾರಿಯಾಗಿ ನೀಡಲು ಸಹಾಯವಾಗುತ್ತದೆ. ಹೀಗಾಗಿ, ವೈದ್ಯರು ಸಾಧ್ಯವಾದಷ್ಟು ವಿವರವಾಗಿ ರೋಗಿಗಳೊಂದಿಗೆ ಸಂವಹನ ನಡೆಸಬೇಕು ಎಂದರು.

ನಾರಾಯಣ ಹೃದಯಾಲಯ
ವೈದ್ಯರು ಇದೇ ಸಂದರ್ಭದಲ್ಲಿ
120 ರೋಗಿಗಳು ಉಚಿತ ಆರೋಗ್ಯ ತಪಾಸಣೆ ಮಾಡಿದರು. ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ , ಇಸಿಜಿ ಮತ್ತು ಇಕೋ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ನಾರಾಯಣ ಆಸ್ಪತ್ರೆಯ ವೈದ್ಯರು ಮಾಡಿದರು.

ಉಡುಪಿಯ ಪೇಜಾವರ ಮಠದ ಶ್ರೀ ಶ್ರೀ
ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ಶಾಸಕರಾದ ಟಿಎಸ್ ಶ್ರೀವತ್ಸ,
ಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾನಿಲಯದ ವಿಶ್ರಾಂತಿ ಕುಲಪತಿಗಳಾದ
ಪ್ರೋ ಪದ್ಮಶೇಖರ್,
ನಾರಾಯಣ ಹೃದಯಾಲಯ ವೈದ್ಯಕೀಯ ನಿರ್ದೇಶಕರು
ಡಾ. ಎಂ‌ ಎನ್ ರವಿ , ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಬಿಜೆಪಿ ಮೈಲಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್, ನಗರಪಾಲಿಕ ಸದಸ್ಯರಾದ ಮಾವಿ ರಾಮಪ್ರಸಾದ್, ಮಾಜಿನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ , ಅಜಯ್ ಶಾಸ್ತ್ರಿ,ಉದ್ಯಮಿ ಜಯರಾಮ್, ದೂರ ರಾಜಣ್ಣ, ಸುಚೇಂದ್ರ, ಚಕ್ರಪಾಣಿ,ಕನಕ ಮೂರ್ತಿ, ಜಗದೀಶ್, ಹಾಗೂ ಇನ್ನಿತರರು ಭಾಗವಹಿಸಿದ್ದರು


Share