ಶ್ರೀ ಆಂಜನೇಯ ಚರಿತ್ರೆ : ಭಾಗ 1 – ಪುಟ – 21

279
Share

ಶ್ರೀ ಆಂಜನೇಯ ಚರಿತ್ರೆ : ಭಾಗ 1 – ಪುಟ – 21
ಓಂ ನಮೋ ಹನುಮತೇ ನಮಃ

ನಿನಗೆ ನಿನ್ನ ಶಕ್ತಿ ಮರೆತುಹೋಗಲಿ
186) ಕೊನೆಗೆ ತಪೋವನದಲ್ಲಿದ್ದ ಮುನಿಗಳೆಲ್ಲಾ ಸೇರಿ ಯೋಚಿಸಿ, ಒಂದು ನಿರ್ಣಯಕ್ಕೆ ಬಂದರು.
1. ಇವನು ಬಹಳ ಬುದ್ಧಿವಂತ. ಯೋಗ್ಯನೂ ಹೌದು.
2. ಆದರೆ ಇವನ ಚೇಷ್ಟೆ ಮಿತಿಮೀರಿ, ನಮಗೆಲ್ಲಾ ಕಷ್ಟವಾಗಿದೆ.
3. ಇವನಿಗೆ ಅನೇಕ ವರಗಳ ಬಲ ಇರುವುದರಿಂದ ನಾವು ಶಾಪಕೊಟ್ಟರೂ ಅದು ಕೆಲಸ ಮಾಡುವುದಿಲ್ಲ.
4. ಶಾಪ ಕೊಡುವ ಬದಲು, ಇವನ ಶಕ್ತಿಯನ್ನು ಹತೋಟಿಯಲ್ಲಿ ಇಡುವ ಉಪಾಯವನ್ನು ಕಂಡುಹಿಡಿಯಬೇಕು.
187) ಹೀಗೆ ಯೋಚಿಸಿ, ಒಂದು ದಿನ ಆ ಮುನಿಗಳು ಆಂಜನೇಯನನ್ನು ಕರೆಸಿದರು. ಹತ್ತಿರ ಕೂರಿಸಿಕೊಂಡು ಹೀಗೆ ಹೇಳಿದರು.
1. ಮಗೂ! ನೀನು ಬಹಳ ಒಳ್ಳೆಯವನೇ. ಆದರೆ ನಿನ್ನ ಬಳಿ ಬಲವೂ ಶಕ್ತಿಯೂ ವಿಪರೀತವಾಗಿದೆ.
2. ಅದರಿಂದಾಗಿ ನಮಗೆ ಅಪಕಾರ ಆಗುತ್ತಿದೆ ಎಂಬುದನ್ನೂ ನೀನು ಗಮನಿಸುತ್ತಿಲ್ಲ.
3. ಕ್ಷಣ ಕ್ಷಣಕ್ಕೂ ನಿನಗೆ, ನಿನಗಿರುವ ಶಕ್ತಿ ಜ್ಞಾಪಕಕ್ಕೆ ಬರುತ್ತಿದೆ. ಆದ್ದರಿಂದಲೇ ಹೀಗೆ ಆಗುತ್ತಿರುವುದು.
4. ಆದ್ದರಿಂದ ಈ ಕ್ಷಣದಿಂದ ನಿನ್ನ ಶಕ್ತಿಗಳನ್ನು ನೀನು ಮರೆತುಹೋಗುವಂತೆ ಆಗಲಿ.
5. ಯಾರಾದರೂ ಕಾರ್ಯನಿಮಿತ್ತ ಬಹಳಕಾಲ ಸ್ತೋತ್ರಮಾಡಿದಾಗ ಮಾತ್ರ ನಿನ್ನ ವಿಶೇಷ ಶಕ್ತಿಗಳು ನಿನಗೆ ಜ್ಞಾಪಕಕ್ಕೆ ಬರಲಿ!
6. ಅಲ್ಲಿಯವರೆಗೆ ನೀನು ನಿನ್ನ ಸ್ನೇಹಿತ ಬಾಲಕರಜೊತೆ ಸಮಾನವಾಗಿ ಇರು.
7. ಹೀಗೆ ನಿನ್ನ ವಿಶೇಷ ಶಕ್ತಿಗಳು ದುರ್ವಿನಿಯೋಗ ಆಗದಂತೆ ಇರಲಿ!
8. ಇದೇ ನಿನಗೆ ನಾವು ಕೊಡುತ್ತಿರುವ ವರ.
188) ಹೀಗೆ ಮುನಿಗಳು ವಿಚಿತ್ರವಾದ ವರವನ್ನು ಕೊಡುತ್ತಿದ್ದಂತೆಯೇ ಆಂಜನೇಯನು ಸಾಯಂಕಾಲದ ಸೂರ್ಯನಂತೆ ತಂಪಾಗಿಹೋದನು.
189) ಅಂದಿನಿಂದ ಬಾಲಾಂಜನೇಯನು ಉಳಿದ ಬಾಲಕರಂತೆಯೇ ವೇದಗಳನ್ನೂ ಶಾಸ್ತ್ರಗಳನ್ನೂ ಬಾಯಿಪಾಠ ಮಾಡಿಕೊಂಡು ಗುರುಕುಲದಲ್ಲಿ ಬುದ್ಧಿವಂತನಾಗಿ ಇದ್ದ.
190) ವಾಲಿ-ಸುಗ್ರೀವರು ಹನುಮಂತನಿಗೆ ಒಳ್ಳೆಯ ಸ್ನೇಹಿತರಾಗಿದ್ದರು.
191) ಆದರೆ, ಸುಗ್ರೀವ-ಹನುಮಂತರು ಹೆಚ್ಚಾಗಿ ಆತ್ಮೀಯರಾಗಿದ್ದರು.
192) ಅವರಿಬ್ಬರ ನಡುವೆ ಯಾವ ರಹಸ್ಯವೂ ಇರಲಿಲ್ಲ.
( ಮುಂದುವರೆಯುವುದು )

* ಸಂಗ್ರಹ
ಭಾಲರಾ
ಬೆಂಗಳೂರು


Share