ಸಂಪಾದಕೀಯ-ಕನಿಷ್ಠ ಜ್ಞಾನವೂ ಇಲ್ಲದ ಜನಪ್ರತಿನಿಧಿಗಳು

299
Share

ಕಳೆದ 2 ದಿನದಿಂದ ರಾಜ್ಯದ ರಾಜ್ಯಸಭೆಯಲ್ಲಿ ವಿರೋಧ ಪಕ್ಷದವರು ತಮ್ಮ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡುತ್ತಿಲ್ಲ ಎಂದು ಕೋಲಾಹಲ ಎಬ್ಬಿಸುತ್ತಿದ್ದಾರೆ .
ಪ್ರಜಾ ಪ್ರತಿನಿಧಿಗಳು ಮೇಜಿನ ಮೇಲೆ ಕುಳಿತುಕೊಳ್ಳುವುದು ನಿಂತುಕೊಳ್ಳುವುದು ನಿಯಮದ ಪುಸ್ತಕವನ್ನು ಎಸೆಯುವುದು ಎಲ್ಲವನ್ನೂ ಮಾಡುತ್ತಿದ್ದಾರೆ . ಸಾಮಾನ್ಯ ಜನರು ಮೂಕ ಪ್ರೇಕ್ಷಕರಂತೆ ಇದೆಲ್ಲವನ್ನೂ ನೋಡುವಂತಾಗಿದೆ . ಇದೆಲ್ಲವನ್ನು ಸಿನಿಮಾದಂತೆ ಮೋಜಿಗಾಗಿ ನೋಡುತ್ತಿದ್ದಾರೆ ಎಂದುಕೊಳ್ಳುತ್ತಿದ್ದಾರೇನೋ ಜನಪ್ರತಿನಿಧಿಗಳು.
ಬಹುಶಃ ಕರ್ನಾಟಕದ ಜನತೆಗೆ ಇದು ಹೊಸದಲ್ಲವೇನೋ. ಏಕೆಂದರೆ ಕರ್ನಾಟಕದ ಅಸೆಂಬ್ಲಿಯಲ್ಲೂ ಈಗ ಸ್ವಲ್ಪ ದಿನಗಳ ಹಿಂದೆ ಇದೇ ರೀತಿ ವರ್ತನೆ ಮಾಡಿದ್ದು ಎಲ್ಲ ಜನತೆಯೂ ಕಂಡಿದ್ದಾರೆ .
ಈ ರೀತಿಯ ನಡವಳಿಕೆ ವಿರೋಧ ಪಕ್ಷವು ತನ್ನ ಸಂಸ್ಕೃತಿಯಾಗಿ ಮಾಡಿಕೊಳ್ಳುತ್ತಿದೆಯೇನೋ . ಭಾರತದ ಹಿರಿಯ ಪಕ್ಷ ಕಾಂಗ್ರೆಸ್ ಪಕ್ಷವೇ ಹೀಗೆ ನಡೆದುಕೊಂಡರೆ ಹೇಗೆ ?
ಪ್ರಶ್ನೆ ಕೇಳುವುದು, ವಿರೋಧ ವ್ಯಕ್ತಪಡಿಸುವುದು ವಿರೋಧಪಕ್ಷದ ಹಕ್ಕು. ಇದರಲ್ಲಿ ಸಂದೇಹ ಇಲ್ಲ . ಆದರೆ ಇದನ್ನು ವ್ಯಕ್ತಪಡಿಸಲು 1 ರೀತಿ ನೀತಿ ನಿಯಮ ಎಲ್ಲವೂ ಇರುತ್ತದೆ.
ಬ್ರಿಟಿಷರ ದೌರ್ಜನ್ಯವನ್ನು ಎದುರಿಸಲು ಗಾಂಧೀಜಿ ಬಳಸಿದ ಆಯುಧ ಅಹಿಂಸೆ, ಉಪವಾಸ ಸತ್ಯಾಗ್ರಹ . ಈ ಹೋರಾಟದಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂಬುದನ್ನು ಈ ಜನಪ್ರತಿನಿಧಿಗಳು ಮರೆತಂತೆ ಇದೆ .
ಅಪ್ಪ ಅಮ್ಮ ಹೇಗೆ ನಡೆದುಕೊಳ್ಳುತ್ತಾರೋ ಮಕ್ಕಳು ಅದನ್ನೇ ಕಲಿಯುತ್ತಾರೆ . ಅದರಂತೆ ಈ ಜನಪ್ರತಿನಿಧಿಗಳು ನಡೆದುಕೊಳ್ಳುವಂತೆ ಸಾಮಾನ್ಯ ಪ್ರಜೆಗಳು ನಡೆದುಕೊಳ್ಳುತ್ತಾರೆ . ಇಡೀ ದೇಶದ ಜನತೆಯು ತಮ್ಮನ್ನು ಗಮನಿಸುತ್ತಿರುತ್ತಾರೆ ಎನ್ನುವ ಕನಿಷ್ಠ ಜ್ಞಾನವೂ ಇಲ್ಲದ ಇಂತಹ ಜನ ಪ್ರತಿದಿನ ಪ್ರತಿನಿಧಿಗಳನ್ನು ಚುನಾಯಿಸಿದ ಸಾಮಾನ್ಯ ಜನತೆಯೂ ತಮ್ಮನ್ನು ತಾವು ನಿಂದಿಸಿ ಕೊಳ್ಳುವಂತಾಗಿದೆ .
ಮೊದಲ ಬಾರಿ ತಪ್ಪು ನಡೆದರೆ ಅದಕ್ಕೆ ಕ್ಷಮೆ ಇರುತ್ತದೆ . ಎರಡನೇ ಬಾರಿ ಅದೇ ತಪ್ಪು ನಡೆದರೆ ಅದು ಅಪರಾಧವಾಗುತ್ತದೆ .
ಅಹಿಂಸೆ ಉಪವಾಸ ಸತ್ಯಾಗ್ರಹದಂತ ಪ್ರತಿಭಟನೆಯಿಂದ ಸ್ವಾತಂತ್ರ್ಯ ಪಡೆದ ಭಾರತಕ್ಕೆ ಇವೆಲ್ಲವನ್ನು ಎದುರಿಸುವುದು ಕಷ್ಟವಲ್ಲ . ಸರಿಯಾದ ರೀತಿಯಲ್ಲಿ ಪ್ರತಿಭಟಿಸಬೇಕು . ನ್ಯಾಯ ದೊರಕಿಸಿಕೊಳ್ಳಬೇಕು. ಮಾಡಿದ ತಪ್ಪನ್ನು ಸಮರ್ಥಿಸಿಕೊಳ್ಳುವುದು ಬಿಟ್ಟರೆ ವಿರೋಧ ಪಕ್ಷದ ಬಗ್ಗೆ ಜನರ ಮನಸ್ಸಿನಲ್ಲಿ ಸ್ವಲ್ಪವಾದರೂ ಮರ್ಯಾದೆ ಉಳಿದೀತು.
ಎಚ್ಚೆತ್ತುಕೊಳ್ಳಿ ವಿರೋಧ ಪಕ್ಷದ ನಾಯಕರೆ.


Share