ಆಡಳಿತ , ವಿರೋಧ ಪಕ್ಷಗಳು ಒಬ್ಬರ ಕಾಲನ್ನೊಬ್ಬರು ಎಳೆಯುವುದಷ್ಟೇ ನಿಮ್ಮ ಕೆಲಸವಲ್ಲ

282
Share

ಮತ್ತೊಂದು ಉಪ ಚುನಾವಣೆಗೆ ಬರುತ್ತಿದೆ . ಮತ್ತದೇ ಚುನಾವಣಾ ಪ್ರಚಾರ ಆರಂಭವಾಗಿದೆ . 1 ಪಕ್ಷ ಇನ್ನೊಂದು ಪಕ್ಷವನ್ನು ಅದರ ಮುಖಂಡರನ್ನು ಹಿಯಾಳಿಸುವುದು ಕಾಲೆಳೆಯುವುದು ಇವಿಷ್ಟೇ ಆಗಿಹೋಗಿದೆ . ಆಡಳಿತ ಪಕ್ಷಕ್ಕೂ ವಿರೋಧ ಪಕ್ಷಕ್ಕೂ ತಾವು ಮಾಡಿರುವ ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲ . ಅಥವಾ ಮುಂದೆ ಅಭಿವೃದ್ಧಿ ಮಾಡುತ್ತೇವೆ ಎನ್ನುವ ನಂಬಿಕೆಯೂ ಇಲ್ಲ . ಆದ್ದರಿಂದ ಇಬ್ಬರೂ ಒಬ್ಬರ ಕಾಲೊಬ್ಬರು ಎಳೆಯುತ್ತ ಅವರವರ ಪಕ್ಷದ ನಿಷ್ಠೆಯ ಜನರಿಂದ ಸ್ವಲ್ಪ ಚಪ್ಪಾಳೆ, ಸೀಟಿ ಗಿಟ್ಟಿಸುವುದು ಬಿಟ್ಟರೆ ಬೇರೇನೂ ಲಾಭವಿಲ್ಲ .
ಇತ್ತೀಚೆಗೆ ಮಧ್ಯಂತರ ಚುನಾವಣೆಗಳು ಹೆಚ್ಚಾಗಿದೆ . ಎಲ್ಲಾ ಪಕ್ಷಗಳಿಗು ಚುನಾವಣಾ ಪ್ರಚಾರ ಮಾಡುವುದು , ನಂತರ ಗೆದ್ದ ಪಕ್ಷವು ಗೆಲುವನ್ನು ಆಚರಿಸುವುದು ಇಷ್ಟೇ ಆಗಿ ಹೋಗಿದೆ . ಇದು ಸಾಲದು ಎಂದು ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರು ವೈಯುಕ್ತಿಕವಾಗಿ ಹೀನಾಯವಾಗಿ ಹಿಯಾಳಿಸುವುದು. ಈ ಸಿನಿಮಾ ಥಿಯೇಟರ್ ಗೆ ಹೋಗಿ ಮುಂದಿನ ಸಾಲಿನಲ್ಲಿ ಕುಳಿತು ಶಿಳ್ಳೆ ಹೊಡೆದು ಚಪ್ಪಾಳೆ ಹೊಡೆದು ಮಜಾ ಮಾಡುವ ತರ ಪ್ರತ್ಯಕ್ಷವಾಗಿ ಜನರು ಮಜಾ ಮಾಡುತ್ತಿದ್ದಾರೆ .
ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎನ್ನುವುದನ್ನು ಜನರೂ ಹೇಳುತ್ತಿಲ್ಲ , ರಾಜಕೀಯ ಪಕ್ಷಗಳಂತೂ ಸಂಪೂರ್ಣವಾಗಿ ಅದನ್ನು ಮರೆತೇ ಬಿಟ್ಟಂತಿದೆ . ಬಹುತೇಕ ಜನರು ಇದರಲ್ಲೇ ತೊಡಗಿರುವಾಗ , ಸ್ವಲ್ಪ ಜನರು ಪರಿಸ್ಥಿತಿ ಅರ್ಥ ಮಾಡಿಕೊಂಡು ಅದನ್ನು ಹೇಳಲು ಪ್ರಯತ್ನಿಸಿದರು ಅದು ಯಾರಿಗೆ ಕೇಳಿಸೀತು. ಆಡಳಿತ ಪಕ್ಷವೇ ಆಗಲಿ ವಿರೋಧ ಪಕ್ಷವೇ ಆಗಲಿ ಇನ್ನೊಬ್ಬರ ಕಾಲೆಳೆಯುವುದನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನವಿಡಿ.
ಇದಕ್ಕೆಲ್ಲ ಒಂದು ಮಾರ್ಗವೆಂದರೆ ಉಪಚುನಾವಣೆ ಸಂಸ್ಕೃತಿ ನಿಲ್ಲಬೇಕು ಇದರಿಂದ ಚುನಾವಣಾ ಆಯೋಗಕ್ಕೆ ಹಾಗೂ ಚುನಾವಣೆ ನಡೆಯುವ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಖರ್ಚನ್ನು ತಪ್ಪಿಸಬಹುದು . ಉಪ ಚುನಾವಣೆ ಸಂದರ್ಭದಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷದ ಅಭ್ಯರ್ಥಿಯ ಗೆಲುವೆ ಹೆಚ್ಚಾಗಿರುತ್ತದೆ ಹೀಗಾಗಿ ಉಪಚುನಾವಣೆಯಲ್ಲಿ ವಿರೋಧಪಕ್ಷಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ಅಥವಾ ಆಡಳಿತ ಪಕ್ಷದೊಂದಿಗೆ ಸಹಕರಿಸಿ ಗೆಲ್ಲಲಿರುವ ಅಭ್ಯರ್ಥಿಗಳನ್ನು ನಿಲ್ಲಿಸಿ ಆಡಳಿತ ಪಕ್ಷದವರನ್ನು ಗೆಲ್ಲಿಸಲು ಸಹಕಾರಿಯಾಗುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಹಿಂದೆ ಚುನಾವಣೆ ಆಯೋಗದ ಅಧ್ಯಕ್ಷರಾಗಿದ್ದ ಟಿ ಎನ್ ಶೇಷನ್ನವರು ಕೆಲವು ಸುಧಾರಣೆಗಳನ್ನು ತರಲು ಮುಂದಾಗಿದ್ದರು, ಅದನ್ನು ಈಗಿನ ಚುನಾವಣಾ ಆಯೋಗ ಜಾರಿಗೆ ತಂದರೆ ರಾಜಕಾರಣಿಗಳಿಗೆ ಪಾಠ ಕಲಿಸಲು ಅನುಕೂಲವಾಗುತ್ತದೆ ಎಂಬುದು ಹಲವರ ಅಭಿಪ್ರಾಯವಾಗಿದೆ.


Share