ಸಂಪಾದಕೀಯ – ಜ॥ ಬಿಪಿನ್ ರಾಹುತ್ ದುರ್ಮರಣ ಭಾರತಕ್ಕೆ ತುಂಬಲಾರದ ನಷ್ಟ

262
Share

ಇಂದು ಅಪರಾಹ್ನ ತಮಿಳುನಾಡಿನ ಕೊಯಮತ್ತೂರು ಬಳಿಯ ಸೂಳೂರು – ವೆಲ್ಲಿಂಗ್ಟನ್ ಕನಡುವೆಯ ಪರ್ವತ ಪ್ರದೇಶದಲ್ಲಿ ನಡೆದ ಮಿಲಿಟರಿ ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಪಡೆಯ ಮುಖ್ಯಸ್ಥ ಜ॥ಬಿಪಿನ್ ರಾವತ್ ರವರ ದುರ್ಮರಣ ಭಾರತ ರಕ್ಷಣಾ ವ್ಯವಸ್ಥೆಗೆ ತುಂಬಲಾರದ ನಷ್ಟವಾಗಿದೆ.
ಸ್ವತಂತ್ರ ಭಾರತದ ನಂತರ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದ ಹರಿಕಾರ ಎಂದು ಪ್ರತಿಯೊಬ್ಬ ಭಾರತೀಯನೂ ಒಪ್ಪುವನು.
ನೆರೆಯ ದೇಶಗಳಾದ ಪಾಕಿಸ್ತಾನ ಚೀನಾ ಅಂತೂ ಬಿಪಿನ್ ರಾವತ್ ರವರನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿತ್ತು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಬಲಗೈಯಂತೆ ಇದ್ದ ರಾವುತ್ ಅವರು ಭಾರತದ ರಕ್ಷಣಾ ವಿಷಯದಲ್ಲಿ ಹಿಂದೆಂದೂ ಕಾಣದಂತಹ ಅತ್ಯಾಧುನಿಕತೆ, ಸ್ನೇಹಪರತೆ ಛಾಪು ಮೂಡಿಸಿದ ಪ್ರಥಮ ವ್ಯಕ್ತಿ ಎಂದೇ ಹೇಳಬಹುದು.
ರಾವುತ್ ಅವರ ಕಾರ್ಯವೈಖರಿಯನ್ನು ಕೇವಲ ಭಾರತ ಅಷ್ಟೇ ಅಲ್ಲ ಇಡೀ ವಿಶ್ವವೇ ಬಹಳ ಗಂಭೀರತೆಯಿಂದ ಕಾಣುತ್ತಿತ್ತು.
ಇಂತಹ ಸೇನಾ ನಾಯಕರನ್ನು ಕಳೆದುಕೊಂಡು ಭಾರತ ಮುಂದೆ ಇವರ ಸ್ಥಾನವನ್ನು ತುಂಬುವಂಥ ಪ್ರಬಲ ಇನ್ನೋರ್ವ ಬಿಪಿನ್ ಬರುವರೇ ಎಂದು ಎಣಿಸುವಂತಾಗಿದೆ.
ತಾವು ಓದಿದಂಥ ಮದ್ರಾಸಿನ ವೆಲ್ಲಿಂಗ್ಟನ್ ಸೇನಾ ಶಾಲೆಯಲ್ಲಿ ಉಪನ್ಯಾಸ ನೀಡಲೆಂದು ತಮ್ಮ ಪತ್ನಿಯೊಂದಿಗೆ ಅತ್ಯಾಧುನಿಕ ಹೆಲಿಕಾಪ್ಟರ್ ನಲ್ಲಿ ನುರಿತ ಪರಿಣಿತ ಪೈಲೆಟ್ ಹಾಗೂ ಸೇನೆಯ ಪ್ರಮುಖ ಅಧಿಕಾರಿಗಳೊಂದಿಗೆ ತೆರಳುತ್ತಿದ್ದಾಗಲೇ ಘೋರ ಅಪಘಾತಕ್ಕೀಡಾಗಿ ಅದರಲ್ಲಿ ಇದ್ದ 14 ಜನರ ಪೈಕಿ 13ಜನರು ಧಾರುಣವಾಗಿ ಸಾವನ್ನಪ್ಪಿದ್ದು ಕ್ಯಾಪ್ಟನ್ ವರುಣ್ ರವರು ಮಾತ್ರ ಜೀವನ್ಮರಣದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತ ಸರ್ಕಾರ ಈ ಅಪಘಾತವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಇದರಲ್ಲಿ ಯಾವುದಾದರೂ ಪಿತೂರಿ ಇದೆಯೇ ಎಂದು ತಕ್ಷಣವೇ ಅತ್ಯುನ್ನತ ಮಟ್ಟದ ತನಿಖೆ ನಡೆಸಬೇಕಾಗಿದೆ.


Share