ಸಾಮಾನ್ಯ ಜನರೇ ಎಚ್ಚೆತ್ತುಕೊಳ್ಳಿ ! ಕಿವಿಗೆ ಹೂ ಮುಡಿಸಿ ಕೊಳ್ಳಬೇಡಿ

250
Share

ಪ್ರತಿಯೊಬ್ಬರೂ ಒಂದು ದಿನಚರಿಯನ್ನು ಇಟ್ಟುಕೊಂಡಿರುತ್ತಾರೆ . ಹಾಗೆ ಸರ್ಕಾರವು ಒಂದು ಕಾರ್ಯರೀತಿಯನ್ನು ಇಟ್ಟುಕೊಂಡಿರುತ್ತದೆ . ಪ್ರತಿ ಇಲಾಖೆಗಳೂ ಅದೇ ರೀತಿ ಕಾರ್ಯನಿರ್ವಹಿಸುತ್ತದೆ .
ಆದರೆ ಇತ್ತೀಚೆಗೆ ಹೊಸದೊಂದು ರೊಟೀನ್ ಆರಂಭವಾಗಿದೆ . ಅದೇನೆಂದರೆ ಚುನಾವಣೆ ಸಮಯದಲ್ಲೇ ವಿರೋಧ ಪಕ್ಷದವರ ಮೇಲೆ ಇಡಿ ರೈಡ್, ಇಡಿ ದಾಳಿ , ತನಿಖೆ ನಡೆಸುವುದು ಬಂಧಿಸುವುದು ಸರ್ವೇಸಾಮಾನ್ಯವಾಗಿದೆ . ಅದರಂತೆ ಬಂಧನವಾದ ವ್ಯಕ್ತಿಯೂ ಆರೋಗ್ಯ ಸಮಸ್ಯೆಯಿಂದ ಬಳಲುವುದು ಸರ್ವೇ ಸಾಧಾರಣವಾಗಿ ಹೋಗಿದೆ.
ಅದಷ್ಟು ನಾಟಕವನ್ನು ಜನಸಾಮಾನ್ಯರು ವೀಕ್ಷಿಸಿ ಆ ಕ್ಷಣಕ್ಕೆ ಅವರವರ ವಿರೋಧಿ ಬಣಗಳ ಸಂಕಷ್ಟಗಳನ್ನು ನೋಡಿ ಆನಂದಿಸುವುದು ಇದರ ಭಾಗವಾಗಿದೆ .
ಇದಷ್ಟಕ್ಕೆ ಇದೆಲ್ಲಾ ಕೊನೆಗೊಳ್ಳುತ್ತಿದೆ ಯಾರಿಗೂ ಶಿಕ್ಷೆಯೂ ಆಗುವುದಿಲ್ಲ ಅಥವಾ ತಮ್ಮ ಮೇಲೆ ಬಂದಿರುವ ಆರೋಪದಿಂದ ಭಕ್ತರು ಆಗುವುದಿಲ್ಲ .
ವಿವಿಧ ವಾಹಿನಿಗಳಿಗೆ ಒಂದಿಷ್ಟು ಬ್ರೇಕಿಂಗ್ ನ್ಯೂಸ್ ಸಿಗುವದು ಬಿಟ್ಟರೆ ಸಾಮಾನ್ಯ ಜನರ ಸಮಯ ಹಾಳು ಒಂದೆ ಇದರಿಂದ ಆಗುತ್ತಿರುವುದು .
ಎಚ್ಚೆತ್ತುಕೊಳ್ಳಿ ಸಾಮಾನ್ಯ ಜನರೇ . ಬೇರೆಯವರು ನಿಮ್ಮ ಕಿವಿಯ ಮೇಲೆ ಹೂ ಮುಡಿಸಲು ಅವಕಾಶ ಕೊಡಬೇಡಿ . ಸಾಮಾನ್ಯ ಜನರಷ್ಟೇ ರಾಜಕಾರಣಿಗಳಿಗೆ ಬುದ್ಧಿ ಕಲಿಸಲು ಸಾಧ್ಯ . ಜನಸಾಮಾನ್ಯರ ಮತ ಅಮೂಲ್ಯವಾದದ್ದು . ಅದನ್ನು ಭಾವನಾತ್ಮಕವಾಗಿಯಾಗಲಿ, ಆರ್ಥಿಕ ಲಾಲಸೆಯಿಂದ ಆಗಲಿ ವ್ಯರ್ಥ ಮಾಡಿಕೊಳ್ಳುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ರಾಜಕಾರಣಿಗಳಿಗೆ
ಹಂಸ ಕ್ಷೀರ ನ್ಯಾಯ ಒದಗಿಸುವ ತಾಕತ್ತಿರುವುದು ಮತದಾರನಿಗೆ ಮಾತ್ರ ಸಾದ್ಯ ಎಂಬುದನ್ನು ಮರೆಯಬೇಡಿ.


Share