ಸಂಪಾದಕೀಯ-ಲಿಂಗಾಯಿತ ವೋಟ್ ಬ್ಯಾಂಕ್ ಬಿಜೆಪಿಗೆ ಅನಿವಾರ್ಯ

197
Share

ಇನ್ನೂ ಹತ್ತು ವರ್ಷ ಪಕ್ಷ ಸಂಘಟಿಸುವ ಶಕ್ತಿ ನನ್ನಲ್ಲಿದೆ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ರಾಜ್ಯಾದ್ಯಂತ ಸಂಚರಿಸುತ್ತೇನೆ.ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಮತ್ತೆ ಅಧಿಕಾರ ತರಲು ಪ್ರಯತ್ನಿಸುತ್ತೇನೆ.140 ಹೆಚ್ಚು ಸ್ಥಾನ ಗೆಲ್ಲುವಂತೆ ಮಾಡುತ್ತೇನೆ. ಬಿಜೆಪಿ ಹೊರತುಪಡಿಸಿ ಇನ್ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ವರಿಷ್ಠರು ನನಗೆ ಏನೂ ಕೊರತೆ ಮಾಡಿಲ್ಲ.ಪಕ್ಷದಲ್ಲಿ ಈವರೆಗೆ ನನಗೆ ಎಲ್ಲಾ ರೀತಿಯ ಸ್ಥಾನಮಾನಗಳುನ್ನು ನೀಡಿದ್ದಾರೆ.ನೂತನ ಜವಾಬ್ದಾರಿಯನ್ನು ವಿನಮ್ರತೆಯಿಂದ ಸ್ವೀಕರಿಸಿದ್ದು, ಬದಲಾವಣೆ ಗಾಳಿ ಹೇಗೆ ಬೀಸುತ್ತೇನೆ ಕಾದು ನೋಡಿ ಎಂದು ಇಂದು ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿಗೆ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈಗ ಕೆಲ ಹೊತ್ತಿನ ಮುಂಚೆ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಹಂಚಿಕೊಂಡರು. ರಾಜಾ ಹುಲಿ ಎಂದೇ ಪ್ರಖ್ಯಾತರಾದ ಬಿಎಸ್ ಯಡಿಯೂರಪ್ಪ ಅವರ ಆಯ್ಕೆ ಇದೀಗ ಭಾರತೀಯ ಜನತಾ ಪಕ್ಷಕ್ಕೆ ಅನಿವಾರ್ಯ. ಇತ್ತೀಚೆಗೆ ತಾನೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಎಪ್ಪತ್ತೈದನೇ ವರ್ಷ ಹುಟ್ಟುಹಬ್ಬವನ್ನು ದಾಖಲೆಯ ಲಕ್ಷಾಂತರ ಜನರ ನಡುವೆ ಆಚರಿಸಿ ದೊಡ್ಡ ಅಚ್ಚರಿ ಮೂಡಿಸಿದರು.ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರು ರಾಜ್ಯದ ಅನೇಕ ಲಿಂಗಾಯಿತ ಮಠಾಧೀಶರನ್ನು ಭೇಟಿ ನೀಡಿ ಆಶೀರ್ವಾದ ಪಡೆದರು.ಈ ಯಶಸ್ಸಿನ ಹಿಂದೆಯೇ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಚುನಾವಣಾ ಚಾಣಾಕ್ಯ ಎಂದೇ ಕರೆಯಲ್ಪಡುವ ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಿ ಪಕ್ಷದ ತುರ್ತು ಸಭೆಯನ್ನು ಕೈಗೊಂಡಿದ್ದರು.ಕಾಂಗ್ರೆಸ್ ಪಕ್ಷದ ನಡೆಯನ್ನು ಅವಲೋಕಿಸಿದ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು ದಕ್ಷಿಣ ಭಾರತದಲ್ಲಿ ಏಕೈಕ ಆಡಳಿತ ನಡೆಸುತ್ತಿರುವುದು ಭಾರತೀಯ ಜನತಾ ಪಕ್ಷ, ಸ್ವಲ್ಪ ಎಚ್ಚರ ತಪ್ಪಿದರೂ ಕಾಂಗ್ರೆಸ್ನ ಪಾಲಾಗಬಹುದು ಎಂಬ ಭೀತಿಯಿಂದಲೇ ಇದೀಗ ಲಿಂಗಾಯತರ ಮತವನ್ನು ತಮ್ಮದಾಗಿಸಿಕೊಳ್ಳಲು ಏಕೈಕ ಮಾರ್ಗ ಕಂಡುಕೊಂಡಿರುವುದರಲ್ಲಿ ಅನುಮಾನವೇ ಇಲ್ಲ. ಎಪ್ಪತ್ತೈದು ವರ್ಷ ದಾಟಿದವರನ್ನು ಉನ್ನತ ಸ್ಥಾನದಲ್ಲಿ ಮುಂದುವರಿಸಬಾರದು ಎಂಬುದು ಭಾರತೀಯ ಜನತಾ ಪಕ್ಷದ ತೀರ್ಮಾನ,ಹಾಗಾಗಿ ಯಡಿಯೂರಪ್ಪ ನಂಥವರಿಗೆ ಇನ್ನು ಮುಂದೆ ಯಾವುದೇ ಸ್ಥಾನಮಾನ ಸಿಗುವುದಿಲ್ಲ ಎಂಬ ಖಚಿತತೆಯ ಮೇರೆಗೆ ಬಹುಶಃ ಇತ್ತೀಚೆಗೆ ತಾನೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ರವರದು ಮುಗಿದ ಅಧ್ಯಾಯ ಎಂದು ಹೇಳಿರಬಹುದು ಎಂದು ಇಲ್ಲಿ ಕಂಡುಬರುವುದು.ಒಟ್ಟಿನಲ್ಲಿ ಯಡಿಯೂರಪ್ಪ ಇದೀಗ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ ಅವರಂತೂ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ದವರಲ್ಲ.ಇನ್ನೂ ಕಾಂಗ್ರೆಸ್ ನ ಮುಖಂಡರುಗಳು ಅಧಿಕಾರದ ಸ್ಥಾನಕ್ಕೆ ಪೈಪೋಟಿ ನಡೆಸದೆ ಪಕ್ಷ ಸಂಘಟನೆಗೆ ಹೆಚ್ಚಿನ ಒಲವು ನೀಡಿದರೆ ಮತ್ತೊಮ್ಮೆ ಕರ್ನಾಟಕ ರಾಜ್ಯದಲ್ಲಿ ಬಿಎಸ್ ವೈ v/s ಕಾಂಗ್ರೆಸ್ ಪೈಪೋಟಿ ಕಾಣಬಹುದಾಗಿರುತ್ತದೆ.ಈಗ ಎಲ್ಲರ ಚಿತ್ತ 2024 ಚುನಾವಣೆಯತ್ತ.


Share