ಸಂಪಾದಕೀಯ : ಸಂಭ್ರಮದಿಂದ ಪೂಜಿಸಿದವರು ಶ್ರೀರಾಮನಿಗೆ ಏನು ಸಮರ್ಪಣೆ ಮಾಡಬೇಕು

190
Share

ರಾಮ ರಾಮ ರಾಮ
ದೇಶಾದ್ಯಂತ ಎಲ್ಲೆಲ್ಲೂ ರಾಮಮಯ. ಬಹುತೇಕ ಜನರಲ್ಲಿ ರಾಮನ ಜಪ, ಯಾವುದೇ ವಾಹಿನಿಗಳಲ್ಲಿ ನೋಡಿದರು ರಾಮನ ಬಗ್ಗೆಯೇ ಪ್ರಸಾರವಾಗುತ್ತಿತ್ತು ಕಳೆದ ಒಂದು ವಾರದಿಂದ.
ಇನ್ನು ಕಾಲ್ನಡಿಗೆಯಿಂದ ಅಯೋಧ್ಯೆ ತಲುಪಿರುವುದು, ಉಪವಾಸ, ವಿಶಿಷ್ಟ ರೀತಿಯಲ್ಲಿ ಉಪಾಸನೆಗಳು, ವಿಶೇಷ ಗಂಧದ ಕಡ್ಡಿ, ದೊಡ್ಡ ಗಾತ್ರದ ಲಾಡು, ವಿಶೇಷ ಹೂವಿನ ಅಲಂಕಾರ ಹೀಗೆ ಹೇಳುತ್ತಿದ್ದರೆ ಮುಗಿಯದಷ್ಟು ವಿಶಿಷ್ಟತೆಯ ಸರಮಾಲೆಯಾಗಿದೆ ರಾಮ ಮಂದಿರ ಪ್ರತಿಷ್ಠಾಪನೆ. ಪ್ರತಿಯೊಬ್ಬರ ಹುಮ್ಮಸ್ಸು ಶ್ಲಾಘನೀಯ . ಒಂದಕ್ಕಿಂತ ಒಂದು ವಿಷಯಗಳು ವಿಶಿಷ್ಟವಾಗಿತ್ತು.
ಆದರೆ ನಿನ್ನೆ ಪ್ರಧಾನಿಯವರು ಹೇಳಿದಂತೆ ಮುಂದೇನು ಎನ್ನುವ ಪ್ರಶ್ನೆ ಇದೆ. ಸಾಕಷ್ಟು ದೇವರನ್ನು ಪೂಜಿಸುವವರಿಗೂ ಇಷ್ಟೆಲ್ಲಾ ಬೇಕಿತ್ತಾ ಎಂದು ಅನಿಸಿರುವುದು ಅಷ್ಟೇಸತ್ಯ.
ಇದಕ್ಕೆಲ್ಲ ಹೇಗೆ , ಯಾರು ಸಮಾಧಾನ ಪಡಿಸಲು ಸಾದ್ಯ. ನಿಷ್ಠೆಯಿಂದ ಮಾಡಿದ ಪೂಜೆಯ ಫಲ ತೋರಿಸಲೇ ಬೇಕೆಂದರೆ, ಶ್ರೀ ರಾಮನು ಆದರ್ಶ ಪುರುಷನು . ದೈವಾಂಶಸಂಭೂತ ಎನ್ನುವುದಕ್ಕಿಂತ ಶ್ರೀ ರಾಮಣು ಪುರುಷೋತ್ತಮ ಎಂದೇ ಪ್ರಖ್ಯಾತಿ ಪಡೆದಿರುವವನು. ತನ್ನ ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಆದರ್ಶವನ್ನು ಎತ್ತಿ ಹಿಡಿದಿರುವವನು. ಶ್ರೀ ರಾಮನು ಸಾಮಾನ್ಯ ಮನುಷ್ಯನಾಗೇ ಆದರ್ಶಗಳನ್ನು ಎತ್ತಿ ಹಿಡಿದವನು.
ಈಗ ರಾಮಮಂದಿರ ನಿರ್ಮಾಣದಲ್ಲಿ ಸಂತೋಷದಿಂದ ಪಾಲ್ಗೊಂಡವರೆಲ್ಲರೂ ತಮ್ಮ ತಮ್ಮ ಜೀವನದಲ್ಲಿ ಕಡೆಯ ಪಕ್ಷ ಒಂದೊಂದು ವಿಷಯದಲ್ಲಾದರೂ ಜೀವನಪರ್ಯಂತ ಯಾವುದಾದರೂ ಒಂದೇ ಒಂದು ಆದರ್ಶವನ್ನು ಪಾಲಿಸಿದರೇ ಎಷ್ಟೋ ಬದಲಾವಣೆಯನ್ನು ಸಮಾಜದಲ್ಲಿ ಕಾಣಬಹುದು. ಶ್ರೀ ರಾಮನಿಗೆ ಇದಕ್ಕಿಂತ ಉತ್ತಮವಾದ ಸಮರ್ಪಣೆ ಮತ್ತೊಂದಿರುವುದಿಲ್ಲ. ರಾಮ ಮಂದಿರ ಬೇಡವೆಂದವರಿಗೂ ಈ ಬದಲಾವಣೆ ಆಶ್ಚರ್ಯ ಹಾಗೂ ಸಂತೋಷ ತರುವುದಲ್ಲದೇ ಅವರೂ ರಾಮನನ್ನು ಪೂಜಿಸುವಂತಾಗುತ್ತದೆ ಎಂದೇ ಹೇಳಬಹುದು.
ಸಂಭ್ರಮದಿಂದ ಪೂಜಿಸಿದವರು ಮನಸ್ಸಿನಿಂದ ಶ್ರೀ ರಾಮನ ಯಾವುದಾದರೂ ಒಂದು ಆದರ್ಶವನ್ನಾದರೂ ಪಾಲಿಸಿ ತಮ್ಮನ್ನು ಒಂದು ಉದಾಹರಣೆಯಾಗಿಸಿ ತಮ್ಮ ತಮ್ಮ ಬದುಕಿನಲ್ಲಿ ಇರುವಿಕೆಯಲ್ಲಿ ಬದಲಾವಣೆ ಬಂದರೆ ರಾಮ ಮಂದಿರ ಸಾರ್ಥಕ ಆಗುತ್ತದೆಯೇ ?

Share