ಸಂಪಾದಕೀಯ : ವಿದ್ಯಾರ್ಥಿಗಳೇ ALL THE BEST

254
Share

ಮಕ್ಕಳೇ ಎಚ್ಚರಿಕೆಯ ನಡೆ ನಿಮ್ಮದಾಗಲಿ.
ರಾಡಿಯಾದ ನೀರು ಇದೀಗ ತಿಳಿಗೊಳ್ಳುತ್ತಿದೆ.ಈ ನೀರನ್ನು ಕದಡಬೇಡಿ.
ಶಾಲೆಯ ವಿದ್ಯಾರ್ಥಿಗಳು ಮತ್ತು ಅಶಾಂತಿ ಉಂಟು ಮಾಡುವ ಪಟ್ಟಭದ್ರ ಹಿತಾಸಕ್ತ ವ್ಯಕ್ತಿ ಗಳಿಗೆ ಕಳಕಳಿಯ ಮನವಿ ಮಾಡುವ ಕಾಲ ಒದಗಿದೆ.
ಉಗರಲ್ಲಿ ಮಾಡುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡಂತೆ ಶಾಲೆಯ ಒಳಗೆ ಬಗೆಹರಿಸಬಹುದಾದ ವಿಷಯವನ್ನು ದೇಶವಿದೇಶಗಳ ವ್ಯಾಪ್ತಿಗೆ ತೆಗದುಕೊಂಡು ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ತಪ್ಪಿತಸ್ಥರೆಂದು ಮಾಡಲಾಗಿದೆ.
ವಿದ್ಯಾರ್ಥಿಗಳೆ ಸಮವಸ್ತ್ರ ಎಂಬುದು ನಿಮ್ಮಲ್ಲಿ ಯಾವುದೇ ಭೇದಭಾವ ಉಂಟಾಗದಿರಲೆಂದಷ್ಟೆ ಮಾಡಿರುವ ನಿಯಮಾವಳಿ.ನಿಮ್ಮಲ್ಲಿ ವಿಷಬೀಜ ತುಂಬುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಕಿವಿಗೊಡಬೇಡಿ ಆಮೂಲಾಗ್ರ ಸಮಯವನ್ನು ಹಾಳುಮಾಡಿಕೊಳ್ಳಬೇಡಿ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಮವಸ್ತ್ರದ ವಿಷಯವಾಗಿ ರಜೆ ಘೋಷಿಸಲಾಗಿತ್ತು .ಇಂದಿನಿಂದ ಶಾಲೆಗಳು, ನಂತರ ಕೆಲ ದಿನಗಳಲ್ಲಿ ಕಾಲೇಜುಗಳು ಪ್ರಾರಂಭವಾಗುತ್ತಿವೆ.
ಈಗಾಗಲೇ ಕರೋನಾದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಕುಸಿದಿದ್ದು, ಇದನ್ನು ಮತ್ತಷ್ಟು ಹಾಳಾಗಲು ನೀವೇ ಆಸ್ಪದ ಕೊಡಬೇಡಿ.
ನಿಮ್ಮ ವಿದ್ಯಾರ್ಥಿಜೀವನ ಕೆಲವು ವರ್ಷಗಳಿಗಷ್ಟೇ ಸೀಮಿತ ನಿಮ್ಮ ಬುದ್ಧಿಶಕ್ತಿಯನ್ನು ವಿಕಸಿಸಗೊಂಡು ಹೊರಬರುವ ಪರ್ವಕಾಲ.
ಧರ್ಮ, ಸಂಪ್ರದಾಯ ,ಆಚಾರ ವಿಚಾರಗಳನ್ನು ಜ್ಞಾನಾರ್ಜನೆ ಮಾಡಿಕೊಂಡು ಹೊರಬಂದ ನಂತರವಷ್ಟೇ ತುಲನೆ ಮಾಡಿ ನಡೆಯಿರಿ.
ರಾಜಕೀಯ ಪ್ರೇರಿತವಾಗಿ ಅಶಾಂತಿ ಉಂಟುಮಾಡುವವರ ಎಡೆಗೆ ನಿಮ್ಮ ಗಮನಹರಿಸದಿರಿ.
ನಿಮ್ಮ ನಡೆ ನುಡಿಯ ಬಗ್ಗೆ ಎಚ್ಚರಿಕೆಯ ಹೆಜ್ಜೆಯನ್ನಿಡಿ.
ಶಾಲಾ ಕಾಲೇಜುಗಳ ನಿಯಮಗಳಿಗೆ ಬದ್ಧರಾಗಿರಿ.
ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎಂಬುದನ್ನು ಮರೆಯದಿರಿ.
ವಿದ್ಯಾರ್ಥಿಗಳೇ ನಿಮಗೆ ಶುಭವಾಗಲಿ, All THE BEST !!
ಪೋಷಕರೇ ನಿಮ್ಮ
ನಡೆಯುಾ ಎಚ್ಚರಿಕೆಯಿಂದಿದ್ದು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಗಮನ ನೀಡಿ.
ಪಟ್ಟಭದ್ರರೇ ನಿಮ್ಮ ವೈಯಕ್ತಿಕ ಹಿತಾ ಸಕ್ತಿಗಳಿಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಡಿ ಇದೊಂದು ಕಳಕಳಿಯ ಮನವಿ.


Share