MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 173

236
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 173

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

931 . ಓಂ ತ್ರಯೋದಶಭಿಧಾಭಿನ್ನ ವಿಶ್ವೇದೇವಾಧಿ ದೈವತಾಯ ನಮಃ
932 . ಓಂ ಚತುರ್ದಶೇಂದ್ರವರದಾಯ ನಮಃ
933 . ಓಂ ತ್ರಯೋದಶಭಿಧಾಭಿನ್ನ ವಿಶ್ವೇದೇವಾಧಿ ದೈವತಾಯ ನಮಃ
934 . ಓಂ ಚತುರ್ದಶಾದಿ ವಿದ್ಯಾಢ್ಯಾಯ ನಮಃ
935 . ಓಂ ಚತುರ್ದಶ ಜಗತ್ಪ್ರಭವೇ ನಮಃ

931. ಓಂ ತ್ರಯೋದಶಭಿಧಾಭಿನ್ನ ವಿಶ್ವೇದೇವಾಧಿದೈವತಮ್-
ಭಾ: ಪುರೂರವಪ್ರಭೃತಿಭಿಃ ಪೂಜ್ಯಸ್ತ್ವಂ ವಿಶ್ವದೈವತೈಃ|
ತ್ರಯೋದಶಾಭಿಧಾಭಿನ್ನ ವಿಶ್ವೇದೇವಾಧಿ ದೈವತಮ್‌||
ಮಹಾಭಾರತವನ್ನು ಅನುಸರಿಸಿ 1 ದಕ್ಷ, 2. ಕ್ರತು, 3. ಸತ್ಯ, 4. ವಸು, 5. ಕಾಲ, 6. ಕಾಮಕ, 7. ಪುರೂರವ, 8. ಮಾದ್ರವ 9. ಧನು 10. ರುಚಿ 11. ಧುರಿ 12. ವಿಲೋಚನ 13. ರುದ್ರ ಎಂಬುವರು ಹದಿಮೂರು ಮಂದಿ ವಿಶ್ವೇದೇವತೆಯರು. ಭಿನ್ನ ಭಿನ್ನವಾದ ಹೆಸರುಗಳಿರುವ ವಿಶ್ವೇದೇವರುಗಳೆಲ್ಲರ ಸ್ವರೂಪನು ಗಣೇಶನೇ ಆಗಿದ್ದಾನೆ. ಮತ್ತು ಅವನು ವಿಶ್ವೇದೇವತೆಗಳಿಗೆ ಪ್ರಭುವು ಕೂಡಾ ಆಗಿದ್ದಾನೆ.
ಇಂದ್ರಸ್ಯ ದುಹಿತಾ ಜ್ಯೇಷ್ಠಾ ವಿಶ್ವಾ ನಾಮ ಪ್ರಕೀರ್ತಿತಾ|
ತಸ್ಯಾಃ ಪುತ್ರಾ ಮಹಾವೀರ್ಯಾ ವಿಶ್ವೇದೇವಾಸ್ತ್ರಯೋದಶ||
ಇಷ್ಟಿ ಶ್ರಾದ್ಧೇ ದಕ್ಷಕ್ರತೂ ಸಂಕೀರ್ತ್ಯೌ ವೈಶ್ವದೇವಕೇ|
ನಾಂದೀಮುಖೇ ಸತ್ಯವಸೂ ಸಾಪಿಂಡ್ಯೇ ಕಾಲಕಾಮಕೇ||
ಪುರೂರವಾ ಮಾದ್ರವಶ್ಚ ಪಾರ್ವಣೇ ಸಮುದಾಹೃತೌ|
ಹೇಮಶ್ರಾದ್ಧೇ ಧನುರುಚೀ ತೀರ್ಥೇ ಧುರಿವಿಲೋಚನೌ||
ಏಕೋದ್ದಿಷ್ಟೇ ರುದ್ರಸಂಜ್ಞೋ ವಿಶ್ವೇದೇವಾಸ್ತ್ರಯೋದಶ – ಶ್ರೀ ಮಹಾಭಾರತ
ಓಂ ತ್ರಯೋದಶಭಿಧಾಭಿನ್ನ ವಿಶ್ವೇದೇವಾಧಿ ದೈವತಾಯ ನಮಃ
ಚತುರ್ದಶೇಂದ್ರ ವರದಶ್ಚತುರ್ದಶಮನುಪ್ರಭುಃ|
ಚತುರ್ದಶಾದಿವಿದ್ಯಾಢ್ಯಶ್ಚತುರ್ದಶ ಜಗತ್ಪ್ರಭುಃ||

932. ಓಂ ಚತುರ್ದಶೇಂದ್ರವರದಃ
933. ಓಂ ಚತುರ್ದಶಮನುಪ್ರಭುಃ
ಭಾ: ಚತುರ್ದಶಾನಾಮಿಂದ್ರಾಣಾಂ ಮನೂನಾಂ ವರದೋsಧಿಪಃ|
ಚತುರ್ದಶೇಂದ್ರ ವರದಶ್ಚತುರ್ದಶಮನುಪ್ರಭುಃ||
ಒಂದೊಂದು ಮನ್ವಂತರಕ್ಕೂ ಒಬ್ಬ ಇಂದ್ರನಂತೆ ಹದಿನಾಲ್ಕು ಮನ್ವಂತರಗಳಿಗೆ ಹದಿನಾಲ್ಕು ಮಂದಿ ಇಂದ್ರರಿರುತ್ತಾರೆ. ಅವರ ಹೆಸರುಗಳು ಹೀಗಿವೆ-
1. ಯಜ್ಞ, 2. ರೋಚನ, 3. ಸತ್ಯಜಿತ್, 4. ತ್ರಿಶಿಖ, 5. ವಿಭು, 6. ಮಂತ್ರದ್ರುಮ, 7. ಪುರಂದರ, 8. ವೈರೋಚನ (ಬಲಿ) 9. ಶ್ರುತ 10. ಶಂಭು 11. ವೈಧೃತ 12. ಋತಧಾಮ 13. ದಿವಸ್ಪತಿ 14. ಶುಚಿ ಈ ಹದಿನಾಲ್ಕು ಮಂದಿ ಇಂದ್ರರಿಗೂ ವರಗಳನ್ನು ಕೊಡುವವನು ಚತುರ್ದಶೇಂದ್ರವರದನು.
ಓಂ ಚತುರ್ದಶೇಂದ್ರವರದಾಯ ನಮಃ
1. ಸ್ವಾಯಂಭುವ, 2. ಸ್ವಾರೋಚಿಷ, 3. ಉತ್ತಮ, 4. ತಾಮಸ, 5. ರೈವತ, 6. ಚಾಕ್ಷುಷ, 7. ವೈವಸ್ವತ (ಶ್ರಾದ್ಧದೇವ) 8. ಸಾವರ್ಣಿ 9. ದಕ್ಷಸಾವರ್ಣಿ 10. ಬ್ರಹ್ಮ ಸಾವರ್ಣಿ 11. ಧರ್ಮಸಾವರ್ಣಿ 12. ರುದ್ರಸಾವರ್ಣಿ 13.ದೇವಸಾವರ್ಣಿ 14. ಇಂದ್ರಸಾವರ್ಣಿ – ಈ ಹದಿನಾಲ್ಕು ಮನುಗಳಿಗೂ ಪ್ರಭುವಾದ್ದರಿಂದ ಚತುರ್ದಶಮನುಪ್ರಭುವು.
(ಈಗ ನಡೆಯುತ್ತಿರುವ ಮನ್ವಂತರ ವೈವಸ್ವತ ಮನ್ವಂತರ)
ಓಂ ಚತುರ್ದಶಮನುಪ್ರಭವೇ ನಮಃ
934. ಓಂ ಚತುರ್ದಶಾದಿವಿದ್ಯಾಢ್ಯಃ-
ಭಾ: ಚತುರ್ದಶಾದಿ ವಿದ್ಯಾಢ್ಯೋ ವೇದಾದ್ಯಾಃ ಸೋಪವೇದಕಾಃ|
ಚತುರ್ದಶಾಷ್ಟ ದಶ ಚ ಪ್ರಸಿದ್ಧಾಸ್ತಾಸು ಪಂಡಿತಃ||
ನಾಲ್ಕು ವೇದಗಳು, ಆರು ವೇದಾಂಗಗಳು, ಧರ್ಮಶಾಸ್ತ್ರ, ಪುರಾಣ, ಮೀಮಾಂಸೆ, ನ್ಯಾಯ(ತರ್ಕ) ಇವು ಚತುರ್ದಶವಿದ್ಯೆಗಳು. ಈ ವಿದ್ಯೆಗಳಲ್ಲಿ ಮಾತ್ರವಲ್ಲದೆ ಇನ್ನಿತರ ಎಲ್ಲಾ ವಿದ್ಯೆಗಳಲ್ಲಿಯೂ ಬಹುದೊಡ್ಡ ಪಂಡಿತನಾದ್ದರಿಂದ ಚತುರ್ದಶಾದಿವಿದ್ಯಾಢ್ಯನು.
(ಅಂಗಾನಿ ವೇದಾಶ್ಚತ್ವಾರೋ ಮೀಮಾಂಸಾ ನ್ಯಾಯವಿಸ್ತರಃ ಪುರಾಣಂ ಧರ್ಮಶಾಸ್ತ್ರಂ ಚ ವಿದ್ಯಾ ಹ್ಯೇತಾಶ್ಚತುರ್ದಶ)
ಓಂ ಚತುರ್ದಶಾದಿ ವಿದ್ಯಾಢ್ಯಾಯ ನಮಃ

935. ಓಂ ಚತುರ್ದಶ ಜಗತ್ಪ್ರಭುಃ-
ಭಾ: ಆಪಾತಾಲಾದಾ ಚ ಸತ್ಯಾತ್ ಚತುರ್ದಶ ಜಗತ್ಪ್ರಭುಃ|
ಪಾತಾಳದಿಂದ ಸತ್ಯಲೋಕದವರೆಗಿರುವ ಹದಿನಾಲ್ಕು ಲೋಕಗಳಿಗೆ ಪ್ರಭುವಾದ್ದರಿಂದ ಚತುರ್ದಶಜಗತ್ಪ್ರಭುವು.
ಓಂ ಚತುರ್ದಶ ಜಗತ್ಪ್ರಭವೇ ನಮಃ
ಸಾಮಪಂಚದಶಃ ಪಂಚದಶೀಶೀತಾಂಶು ನಿರ್ಮಲಃ|
ಷೋಡಶಾಧಾರನಿಲಯಃ ಷೋಡಶಸ್ವರಮಾತೃಕಃ||

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share