MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 194

363
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 194

ಸಂಸ್ಕೃತದಿಂದ ಕನ್ನಡಾನುವಾದ :ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,ಅವಧೂತ ದತ್ತ ಪೀಠಂ,ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಿತು. ಗಣೇಶನ ಸಹಸ್ರನಾಮದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂಬ ಆಶಯದೊಂದಿಗೆ ಪ್ರಕಟಿಸಲಾಯ್ತು.ಮೈಸೂರು ಪತ್ರಿಕೆಯು ಆಧ್ಯಾತ್ಮಿಕ ಅಂಗಳದಲ್ಲಿ ಅವಧೂತ ದತ್ತ ಪೀಠದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿರುವ ಶ್ರೀ ಗಣೇಶ ಸಹಸ್ರನಾಮ ಭಾಷ್ಯವನ್ನು ಓದಿ ಕೃತಾರ್ಥರಾದ ಎಲ್ಲಾ ಮೈಸೂರು ಪತ್ರಿಕೆ ವಾಚಕರಿಗೂ ವಂದನೆಗಳು . ಒಮ್ಮೆ ಆಧ್ಯಾತ್ಮಿಕದತ್ತ ಹೆಜ್ಜೆಯಿಡಲು ಪ್ರಾರಂಭಿಸಿದರೆ ಅದಕ್ಕೆ ಮುಕ್ತಾಯವೆನ್ನುವುದೇ ಇರುವುದಿಲ್ಲ . ಅದರಂತೆ ಮೈಸೂರು ಪತ್ರಿಕೆಯಲ್ಲಿ ದತ್ತಾತ್ರೇಯನ ಅವತಾರವಾದ ಶ್ರೀಪಾದ ವಲ್ಲಭರು ಚರಿತ್ರೆಯನ್ನು ಪಠಿಸಿದಿರಿ. ಈಗ ಶ್ರೀ ಗಣೇಶ ಸಹಸ್ರನಾಮ ಭಾಷ್ಯ ವನ್ನು ವಂಚನೆ ಮಾಡಿದ್ದೀರಿ . ಇದು ಮುಕ್ತಾಯವಲ್ಲ , ಆಗಾಗ್ಗೆ ಮುಂದುವರೆಯುವುದು ಎನ್ನುವುದನ್ನು ಓದುತ್ತಿರುವಿರಿ. ಎಷ್ಟೋ ಜನರು ಇದನ್ನು ಓದಿ ಸಂತೋಷ ಪಟ್ಟಿರುವುದಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅವರೆಲ್ಲರಿಗೂ ಮತ್ತೊಮ್ಮೆ ವಂದನೆಗಳು .ಹೀಗೆ ಇದರಂತೆ ಮುಂದೆ ಆಂಜನೇಯ ಚರಿತ್ರೆಯನ್ನು ಆರಂಭಿಸುವುದಾಗಿ ಮೈಸೂರು ಪತ್ರಿಕೆ ತಂಡವು ಹೆಮ್ಮೆಯಿಂದ ಹೇಳುತ್ತದೆ. ಮೈಸೂರು ಪತ್ರಿಕೆ ವಾಚಕರಿಗೆ ದಿನಾ ಬೆಳಿಗ್ಗೆ ಮೈಸೂರು ಪತ್ರಿಕೆಯ ಆಧ್ಯಾತ್ಮಿಕ ಅಂಗಳವನ್ನು ಓದಿಯೇ ದಿನ ಆರಂಭಿಸುವುದು ಅಭ್ಯಾಸವಾಗಿ ಹೋಗಿದೆ . ಮೈಸೂರು ಪತ್ರಿಕೆಗೂ ಪ್ರತಿನಿತ್ಯ ಆಧ್ಯಾತ್ಮಿಕ ಅಂಗಳದಿಂದಲೇ ಆರಂಭಿಸುವುದು ಪ್ರತೀತಿಯಾಗಿಬಟ್ಟಿದೆ. ಒಮ್ಮೆ ನಮ್ಮ ನಿಮ್ಮ ದಿನನಿತ್ಯದ ಲೌಕಿಕ ಜಂಜಾಟದಲ್ಲಿ ಬಿದ್ದಮೇಲೆ ಅದರಲ್ಲೇ ಮುಳುಗುವುದು ಇದ್ದೇ ಇರುತ್ತದೆ. ಅದರಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲೇ ಬೇಕು ವಿಧಿ ಇಲ್ಲ. ಆದರೆ ದಿನದ ಆರಂಭವನ್ನು ಸಕಾರಾತ್ಮಕ ಮನಸ್ಸಿನಿಂದ ಒಳ್ಳೆಯ ಭಾವನೆಯಿಂದ ಒಳ್ಳೆಯ ವಿಚಾರಗಳಿಂದ ಮಾಡಿದರೆ ದಿನವಿಡೀ ಸಂತೋಷವಾಗಿ, ನೆಮ್ಮದಿಯಾಗಿ , ಸತ್ಯವಾಗಿ ನಡೆಯಲು ದಾರಿ ತೋರುತ್ತದೆ ಎಂಬುದು ನಮ್ಮ ನಂಬಿಕೆ . ತಮ್ಮೆಲ್ಲರ ಸಹಕಾರದಿಂದ ತಮ್ಮೆಲ್ಲರಿಗೂ ಒಳಿತನ್ನು ಬಯಸುವ ದೃಷ್ಟಿಯಿಂದ ಶ್ರೀ ಗಣೇಶ ಸಹಸ್ರನಾಮ ಭಾಷ್ಯದ ನಂತರ ಆಂಜನೇಯ ಚರಿತ್ರೆಯನ್ನು ಆರಂಭಿಸುತ್ತಿದ್ದೇವೆ .

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ

ಬೆಂಗಳೂರು

 


Share