MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 72

229
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 72

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

369 . ಓಂ ಅಘೋರಾಯ ನಮಃ
370 . ಓಂ ಅಪ್ರಮಿತಾನನಾಯ ನಮಃ
371 . ಓಂ ಅಪ್ರಮಿತಾನನಾಯ ನಮಃ
372 . ಓಂ ಅಬ್ಧಿಭೂಮ್ಯಗ್ನಿಬಲಘ್ನಾಯ ನಾಮಃ
373 . ಓಂ ಅವ್ಯಕ್ತಲಕ್ಷಣಾಯ ನಮಃ

369. ಓಂ ಅಘೋರಃ-
ಭಾ: ಅಘೋರಮೂರ್ತಿಃ ಶಿವ ಇತ್ಯಘೋರೋ
ನಮಜ್ಜನಾನಾಮಭಯಂಕರೋ ವಾ ।
ಅಘೋರಮೂರ್ತಿಯಾದ ಶಿವನೇ ಗಣೇಶನು. ಆದ್ದರಿಂದ ಅವನು ಅಘೋರನು. ಅಥವಾ ನಮಸ್ಕರಿಸುವ ಜನರಿಗೆ ಅಭಯವನ್ನು ಕೊಟ್ಟು ಭಯಗಳನ್ನು ತೆಗೆದುಹಾಕುವುದರಿಂದಲೂ ಅವನು ಅಘೋರನು.
ಓಂ ಅಘೋರಾಯ ನಮಃ

370. ಓಂ ಅಪ್ರಮಿತಾನನಃ-
ಭಾ: ಅಸಂಖ್ಯವಕ್ತ್ರೋ7ಸ್ಯಮಿತಾನಿ ಯಸ್ಮಾತ್ ಸಂಜೀವನಾನ್ಯಪ್ರಮಿತಾನನಸ್ತ್ವಂ ।
ಹೇ ಗಜಮುಖಾ! ನೀನು ಲೆಕ್ಕವಿಲ್ಲದಷ್ಟು ಮುಖಗಳನ್ನು ಹೊಂದಿದ್ದೀಯೆ. ಆ ಮುಖಗಳು ಲೋಕಗಳಿಗೆ (ಸಂಜೀವಿನಿ ಔಷಧಿಯಂತೆ) ಪ್ರಾಣವನ್ನು ಕೊಡುತ್ತಿವೆ. ಆದ್ದರಿಂದ ನೀನು ಅಪ್ರಮಿತಾನನನು.
ಓಂ ಅಪ್ರಮಿತಾನನಾಯ ನಮಃ
ಅನಾಕಾರೋ7ಬ್ಧಿ ಭೂಮ್ಯಗ್ನಿ ಬಲಘ್ನೋ7ವ್ಯಕ್ತಲಕ್ಷಣಃ।
ಆಧಾರಪೀಠ ಆಧಾರ ಆಧಾರಾಧೇಯ ವರ್ಜಿತಃ॥

371. ಓಂ ಅನಾಕಾರಃ-
ಭಾ: ಭಕ್ತತೋಷಾರ್ಥಮಾಕಾರಾಃ ಸಗುಣಾಃ ಸಂತಿ ಯದ್ಯಪಿ ।
ತಥಾಪಿ ತ್ವಮನಾಕಾರಃ ಪರಮಾರ್ಥದೃಶಾ ವಿಭೋ ॥
ಓ ಪ್ರಭೂ! ಭಕ್ತರನ್ನು ಸಂತೋಷಪಡಿಸುವುದಕ್ಕಾಗಿ ಸಗುಣವಾದ ಆಕಾರಗಳನ್ನು ನೀನು ಧರಿಸಿರುವವನಾದರೂ ತತ್ತ್ವದೃಷ್ಟಿಯಿಂದ ನೋಡಿದಲ್ಲಿ ನೀನು ಅನಾಕಾರನೇ (ನಿರಾಕಾರಾನೇ) ಆಗಿದ್ದೀಯೆ.
ಓಂ ಅನಾಕಾರಾಯ ನಮಃ

372. ಓಂ ಅಬ್ಧಿಭೂಮ್ಯಗ್ನಿಬಲಘ್ನಃ-
ಭಾ: ಭೂವಾರಿತೇಜೋಮರುತಾಂ ಬಲಾನಿ ಸಂಸ್ತಂಭನಕ್ಲೇದನದಾಹಶೋಷಾಃ।
ತ್ವಯಿ ಕ್ಷಮಾಸ್ತೇ ನ ಭವಂತಿ ತೇನ ತ್ವಮಬ್ಧಿಭೂಮ್ಯಗ್ನಿಬಲಘ್ನ ಉಕ್ತಃ॥
ಹೇ ದೇವಾ! ಭೂಮಿಯ ಸ್ತಂಭನ (ತಡೆಗಟ್ಟುವ) ಶಕ್ತಿಯೂ, ನೀರಿನ ಕ್ಲೇದನ (ತೇವ ಮಾಡುವ)ಶಕ್ತಿಯೂ, ಅಗ್ನಿಯ ದಾಹ (ಸುಡುವ) ಶಕ್ತಿಯೂ, ಗಾಳಿಯ ಶೋಷಣ (ಒಣಗಿಸುವ) ಶಕ್ತಿಯೂ ನಿನ್ನ ವಿಷಯದಲ್ಲಿ ಅಪ್ರಯೋಜನ ಗಳಾಗಿವೆ. ಆದ್ದರಿಂದ ನೀನು ಅಬ್ಧಿಭೂಮ್ಯಗ್ನಿಬಲಘ್ನನು.
ಓಂ ಅಬ್ಧಿಭೂಮ್ಯಗ್ನಿಬಲಘ್ನಾಯ ನಮಃ

373. ಓಂ ಅವ್ಯಕ್ತಲಕ್ಷಣಃ-
ಭಾ: ಸಚ್ಚಿತ್ಸುಖೈಕಮಯತಾ ತು ತವ ಸ್ವರೂಪ-
ಲಕ್ಷ್ಮ ಪ್ರಪಂಚಕಲನಾ ತು ತಟಸ್ಥಲಕ್ಷ್ಮ ।
ನ ವ್ಯಜ್ಯತೇ ತದುಭಯಂ ಹಿ ಬಹಿರ್ಮುಖಾನಾಂ
ಅವ್ಯಕ್ತಲಕ್ಷಣ ಇತಿ ಪ್ರಥಿತೋ7ಸಿ ತೇನ॥
ಹೇ ಗಣೇಶಾ! ಸಚ್ಚಿದಾನಂದ ರೂಪವು ಪರಬ್ರಹ್ಮನಾದ ನಿನ್ನ ಸ್ವರೂಪಲಕ್ಷಣವು. ಪ್ರಪಂಚದ ಸೃಷ್ಟಿ, ಸ್ಥಿತಿ, ಲಯ ಕಾರತ್ವವು ನಿನ್ನ ತಟಸ್ಥ ಲಕ್ಷಣ. ಬಹಿರ್ಮುಖರಾದ (ವಿಷಯಾಸಕ್ತರಾದ, ತತ್ತ್ವದೃಷ್ಟಿ ಇಲ್ಲದವರಾದ) ಜನರಿಗೆ ನಿನ್ನ ಈ ಎರಡು ಲಕ್ಷಣಗಳಿಗೆ ತಿಳಿದುಬರವು. ಆದ್ದರಿಂದ ನೀನು ಅವ್ಯಕ್ತಲಕ್ಷಣನು ಎಂದು ಹೇಳಲ್ಪಡುತ್ತೀಯೆ.
ಓಂ ಅವ್ಯಕ್ತಲಕ್ಷಣಾಯ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share