MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 194

256
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 193

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಗಣೇಶಸ್ಯೈಕವಿಂಶತಿ ನಾಮಪಾಠಃ
ಗಣಂಜಯೋ ಗಣಪತಿರ್ಹೇರಂಬೋ ಧರಣೀಧರಃ೤
ಮಹಾಗಣಪತಿರ್ಲಕ್ಷಪ್ರದಃ ಕ್ಷಿಪ್ರಪ್ರಸಾದನಃ೤೤
ಅಮೋಘಸಿದ್ಧಿರಮಿತೋ ಮಂತ್ರಶ್ಚಿಂತಾಮಣಿರ್ನಿಧಿಃ೤೤
ಸುಮಂಗಲೋ ಬೀಜಮಾಶಾಪೂರಕೋ ವರದಃ ಶಿವಃ೤೤
ಕಾಶ್ಯಪೋ ನಂದನೋ ವಾಚಾಸಿದ್ಧೋ ಢುಂಢಿವಿನಾಯಕಃ೤
ಮೋದಕೈರೇಭಿರತ್ರೈಕವಿಂಶತ್ಯಾ ನಾಮಭಿಃ ಪುಮಾನ್‌೤೤
ಯಃ ಸ್ತೌತಿ ಮದ್ಗತಮನಾ ಮದಾರಾಧನತತ್ಪರಃ೤
ಸ್ತುತೋ ನಾಮ್ನಾಂ ಸಹಸ್ರೇಣ ತೇನಾಹಂ ನಾತ್ರ ಸಂಶಯಃ೤೤
ಅಥ ಸಹಸ್ರನಾಮಪಠನಾಸಮರ್ಥಸ್ಯೈಕವಿಂಶತಿನಾಮಪಾಠಂ ಪ್ರತಿನಿಧಿತ್ವೇನ ವಿದಧಾತಿ- ಗಣಂಜಯ ಇತ್ಯಾದಿನಾ೤ ಏತೇಷ್ವಷ್ಟಾದಶನಾಮಾನಿ ಪೂರ್ವಂ ವ್ಯಾಖ್ಯಾತಾನ್ಯೇವ, ತತ್ರ ಗಣಪತಿರಿತಿ ಗಣೇಶ್ವರ ಗಣಾಧಿಪಾದಿನಾಮ ಸಮಾನಾರ್ಥಕಂ, ಅಮಿತ ಇತ್ಯತ್ರಾಮೃತ ಇತಿ ವಾ ಪಾಠಃ, ಉಭಯಥಾಪಿ ವ್ಯಾಖ್ಯಾತಮೇವ೤ ಸುಮಂಗಲಸುಮಂಗಲ ಇತಿ ನಾಮ್ನಾ ಸುಮಂಗಲನಾಮಚರಿತಾರ್ಥಮ್, ವರಪ್ರದ ಇತ್ಯನೇನ ವರದನಾಮ, ಚಿಂತಾಮಣಿಃ ಶಿವೋ ಬೀಜಮಿತಿ ನಾಮತ್ರಯಂ ತ್ವಿಹಾಪೂರ್ವಂ ತತ್ರ ಕ್ಷೇತ್ರವಿಶೇಷಾಧಿಷ್ಠಾತೃ ಗಣಪತೇಶ್ಚಿಂತಾಮಣಿರಿತಿ ಸಂಜ್ಞಾ, ಚಿಂತಿತಾರ್ಥಪ್ರದತ್ವಾತ್ಸ್ವರ್ಗಸ್ಥಚಿಂತಾಮಣಿವತ್ ತದ್ದೈವತ್ಯಮಂತ್ರವಿಶೇಷಸ್ಯಾಪ್ಯೇಷಾ ಸಂಜ್ಞಾ, ತದ್ರೂಪತ್ವಾದ್ದೈವೋ7ಪಿ ಚಿಂತಾಮಣಿಃ೤ ಶಿವಪದಸ್ಯ ತು ವಶಕಾಂತೌ ಶಿವಃ ಸ್ಮೃತ್ಯಾ ಇತಿ ಜಗದುತ್ಪಾದನೇಚ್ಛಾಶಕ್ತಿಮತ್ತ್ವಾದಯೋ ಬಹವೋ7ರ್ಥಾಃ ಶಿವಾಷ್ಟೋತ್ತರ ಶತನಾಮಸು ಪ್ರಥಮನಾಮವ್ಯಾಖ್ಯಾನೇ ಶಿವಾ ಸ್ವಾಧೀನವಲ್ಲಭೇತಿ ಲಲಿತಾಸಹಸ್ರನಾಮವ್ಯಾಖ್ಯಾನೇ7ತಿ ವಿಸ್ತರೇಣಾಸ್ಮಾಭಿರ್ವರ್ಣಿತಾಃ೤ ಬೀಜಂ ಸರ್ವಜಗತ್ಕಾರಣಂ೤ ಕಾಶ್ಯಪಃ ಕಾಶ್ಯಪಪುತ್ರಃ, ಶಿವಾದ್ಯಾ ಗಣಾಃ, ಇಯಂ ಚ ಕಥಾ ಗಣೇಶಪುರಾಣೇ ಉತ್ತರಖಂಡೇ ಪ್ರಸಿದ್ಧಾ, ಧರಣೀಧರ ಆಶಾಪೂರಕ ಇತ್ಯಾದಿನಾಮಮೂಲಭೂತಾಃ ಕಥಾ ಅಪಿ ತತ್ರೈವಾನುಸಂಧೇಯಾಃ, ವಿಸ್ತರಭಯಾನ್ನೇಹ ಪ್ರದರ್ಶ್ಯನ್ತೇ೤ ಗ್ರಂಥಾನ್ತೇ ಮಙ್ಗಲಮಾಚರತಿ -ನಮೋ ನಮ ಇತಿ೤ ವಿಪುಲಪದಂ ಪರಂಧಾಮ ತಸ್ಯ ಮುಖ್ಯಾಯಾ ಸಿದ್ಧಿರ್ಯಸ್ಮಾತ್ಸಃ, ಸ್ಪಷ್ಟಮನ್ಯದಿತಿ ಸರ್ವ ಶಿವಮ್‌೤೤
ಇನ್ನು ಸಹಸ್ರನಾಮಪಾಠದಲ್ಲಿ ಅಶಕ್ತರು, ಅಸಮರ್ಥರು ಆದವರ ಅನುಕೂಲಕ್ಕಾಗಿ ಗಣಂಜಯ ಇತ್ಯಾದಿ ಇಪ್ಪತ್ತೊಂದು ನಾಮಗಳನ್ನು (ಸಹಸ್ರನಾಮ ಸಮಾನವಾದವುಗಳನ್ನು) ತಿಳಿಸುತ್ತಿದ್ದಾರೆ. ಈ ಇಪ್ಪತ್ತೊಂದು ನಾಮಗಳಲ್ಲಿ ಹದಿನೆಂಟು ನಾಮಗಳ ಅರ್ಥವನ್ನು ನಾವು ಈಗಾಗಲೇ ವ್ಯಾಖ್ಯಾನಿಸಿದ್ದೇವೆ. ಗಣಪತಿ ಎಂಬ ನಾಮವು ಗಣೇಶ್ವರ, ಗಣಾಧಿಪ ಎಂಬ ನಾಮಗಳೊಂದಿಗೆ ಸಮಾರ್ಥಕವಾಗಿದೆ. (ಆ ನಾಮಗಳಿಗೆ ಏನರ್ಥವೋ ಇದಕ್ಕೂ ಅದೇ ಅರ್ಥ.) ಅಮಿತಮಿತವಿಲ್ಲದಿರುವ. ಶಕ್ತಿಉಳ್ಳವನು. ಅಮೃತ ಎಂಬ ಪಾಠವೂ ಇದೆ. ಎರಡರ್ಥಗಳಲ್ಲಿಯೂ ನಾವು ವ್ಯಾಖ್ಯಾನಿಸಿದ್ದೇವೆ. ಸುಮಂಗಲ ಸುಮಂಗಲಃ ಎಂಬ ನಾಮದಿಂದ ಸುಮಂಗಲಃ ಎಂಬ ನಾಮವನ್ನು ಹೇಳಿದ ಹಾಗೆ ಆಯಿತು. ವರಪ್ರದ ಎಂಬ ನಾಮವು ಸಹಸ್ರನಾಮದಲ್ಲಿ ಪಠಿತವಾಗಿದೆ. ವರದ, ವರಪ್ರದ ಈ ಎರಡೂ ಸಮಾನಾರ್ಥಕಗಳು. (ಆದಕಾರಣ ವಿಶೇಷವಾಗಿ ವ್ಯಾಖ್ಯಾನಿಸಬೇಕಿಲ್ಲ) ಚಿಂತಾಮಣಿಃ, ಶಿವಃ, ಬೀಜಂ ಎಂಬೀ ಮೂರು ನಾಮಗಳು ಸಹಸ್ರನಾಮದಲ್ಲಿ ತಿಳಿಸಿದ ಹೊಸನಾಮಗಳಾಗಿವೆ. ಚಿಂತಾಮಣಿ ಎಂಬ ಕ್ಷೇತ್ರದಲ್ಲಿರುವ ಗಣಪತಿಯ ನಾಮಧೇಯ ಚಿಂತಾಮಣಿ ಎಂದಾಗಿದೆ. ಸ್ವರ್ಗದ ಚಿಂತಾಮಣಿರತ್ನದಂತೆ ಕೇಳಿದ್ದನ್ನೆಲ್ಲಾ ಕೊಡುವುದರಿಂದಲೂ ಚಿಂತಾಮಣಿ ಗಣಪತಿ ಎಂಬ ಮಂತ್ರದ ಅಧಿಷ್ಠಾನದೇವನಾದ್ದರಿಂದಲೂ ಗಣಪತಿಗೆ ಚಿಂತಾಮಣಿ ಎಂಬ ಹೆಸರು ಉಂಟಾಗಿದೆ. ‘ಶಿವ’ ಎಂಬ ಪದವು ಕಾಂತ್ಯರ್ಥಕವಾದ ‘ವಶ’ ಧಾತುವಿನಿಂದ ಉತ್ಪನ್ನವಾಗಿದೆ. ತನ್ನ ಇಚ್ಛಾಶಕ್ತಿಯಿಂದ ಜಗತ್ತನ್ನು ಸೃಷ್ಟಿಸುವವನು ಶಿವನು ಇತ್ಯಾದಿ ಶಿವನಾಮದ ಬೇಕಾದಷ್ಟು ಅರ್ಥಗಳನ್ನು ನಾವು ಶಿವಾಷ್ಟೋತ್ತರ ವ್ಯಾಖ್ಯಾನದ ಮೊದಲನೆಯ ನಾಮದಲ್ಲಿಯೂ ಲಲಿತಾಸಹಸ್ರನಾಮದ ‘ಶಿವಾ ಸ್ವಾಧೀನವಲ್ಲಭಾ’ ಎಂಬ ನಾಮ ವ್ಯಾಖ್ಯಾನದಲ್ಲಿಯೂ ಅತಿವಿಸ್ತಾರವಾಗಿ ವರ್ಣನೆಮಾಡಿ ತಿಳಿಸಿದ್ದೇವೆ. ಸರ್ವಜಗತ್ತಿಗೂ ಕಾರಣಭೂತನಾದ್ದರಿಂದ ಗಣೇಶನನ್ನು ಬೀಜಂ ಎನ್ನುತ್ತಾರೆ. ಕಶ್ಯಪಪುತ್ರನಾದ್ದರಿಂದ ಕಾಶ್ಯಪನು. ಶಿವಾದಿ ಗಣಗಳು ಕಶ್ಯಪನ ಮಕ್ಕಳಾದರೆಂದು ಗಣೇಶ ಪುರಾಣದ ಉತ್ತರಖಂಡದ ಪ್ರಸಿದ್ಧಕಥೆ ತಿಳಿಸುತ್ತಿದೆ. ‘ಧರಣೀಧರ, ಆಶಾಪೂರಕ’ ಇತ್ಯಾದಿ ನಾಮಗಳಿಗೆ ಮೂಲಭೂತವಾದ ಕಥೆಗಳು ಕೂಡಾ ಗಣೇಶಪುರಾಣದಲ್ಲಿಯೇ ತಿಳಿಸಲ್ಪಟ್ಟಿವೆ. ಪಾಠಕರು ಆ ಕಥೆಗಳೊಂದಿಗೆ ಈ ನಾಮಗಳನ್ನು ಅನುಸಂಧಾನಮಾಡಿಕೊಳ್ಳಬೇಕು. ಗ್ರಂಥವು ಬಹುವಿಸ್ತಾರವಾದೀತೆಂಬ ಭಯದಿಂದ ನಾವಿಲ್ಲಿ ಅದರ ಪ್ರಸ್ತಾಪಮಾಡುತ್ತಿಲ್ಲ. ‘ನಮೋ ನಮಃ’ ಎಂಬ ಶ್ಲೋಕದಿಂದ ಗ್ರಂಥಾಂತದಲ್ಲಿ ಮಂಗಳಾಚರಣೆಯನ್ನು ಮಾಡಲಾಗುತ್ತಿದೆ. ಯಾರಾದರೆ ಸಹಸ್ರನಾಮವನ್ನು ಪಠಿಸಲಾರದೆ ನನ್ನಲ್ಲಿಯೇ ಮನಸ್ಸಿಟ್ಟು ನನ್ನನ್ನು ಪೂಜಿಸುವುದರಲ್ಲಿ ತತ್ಪರರಾಗಿ ಈ ಇಪ್ಪತ್ತೊಂದು ನಾಮಗಳನ್ನು ಪಠಿಸುತ್ತಾರೆಯೋ ಅವರಿಗೆ ನಾನು ಸಹಸ್ರನಾಮದ ಫಲವನ್ನು ಅನುಗ್ರಹಿಸುತ್ತೇನೆ. ಇದರಲ್ಲಿ ಸಂದೇಹವೇ ಇಲ್ಲ.
ನಮೋ ನಮಃ ಸುರವರ ಪೂಜಿತಾಂಘ್ರಯೇ
ನಮೋ ನಮೋ ನಿರುಪಮಮಂಗಲಾತ್ಮನೇ೤
ನಮೋ ನಮೋ ವಿಪುಲಪದೈಕಸಿದ್ಧಯೇ
ನಮೋ ನಮಃ ಕರಿಕಲಭಾನನಾಯ ತೇ೤೤
ಸುರಶ್ರೇಷ್ಠನಾದ ಇಂದ್ರನಿಂದ ಪೂಜಿಸಲ್ಪಟ್ಟ ಪಾದಗಳು ಉಳ್ಳವನಿಗೆ, ಸರಿಸಮವಿಲ್ಲದ ಮಂಗಳಮಯನಾದಸ್ವಾಮಿಗೆ, ಪರಂಧಾಮವನ್ನು ಅನುಗ್ರಹಿಸುವವನಿಗೆ, ಗಜಮುಖನಿಗೆ, ಗಣಪತಿಸ್ವಾಮಿಗೆ ನಮಸ್ಕಾರ.
ಇತಿ ಶ್ರೀ ಗಣೇಶೋಪಪುರಾಣೇ ಉಪಾಸನಾಖಂಡೇ ಮಹಾಗಣಪತಿಪ್ರೋಕ್ತಂ ಸಹಸ್ರನಾಮಸ್ತೋತ್ರಂ ನಾಮ ಷಟ್ಚಚತ್ವಾರಿಂಶೋ7ಧ್ಯಾಯಃ೤೤
ಇದು ಗಣೇಶೋಪ ಪುರಾಣದ ಉಪಾಸನಾಖಂಡದಲ್ಲಿ ಮಹಾಗಣಪತಿಪ್ರೋಕ್ತವಾದ ಸಹಸ್ರನಾಮಸ್ತೋತ್ರವೆಂಬ ನಲವತ್ತಾರನೆಯ ಅಧ್ಯಾಯವು.
ಇತಿ ಶ್ರೀಗಣೇಶಸಹಸ್ರನಾಮ ಸಂಪೂರ್ಣಮ್‌೤
ಶ್ರೀಗಣೇಶ ಸಹಸ್ರನಾಮವು ಸಂಪೂರ್ಣವು.
ಇತಿ ಶ್ರೀಮತ್ಪದವಾಕ್ಯಪ್ರಮಾಣ ಪಾರಾವಾರಪಾರೀಣ ಭಾರತ್ಯುಪನಾಮಕ ಗಂಭೀರರಾಯದೀಕ್ಷಿತ ಸೂರಿಸೂನುಭಾಸ್ಕರರಾಯ ದೀಕ್ಷಿತಾಗ್ನಿಚಿತಾ ರಚಿತೋ ಗಣಪತಿ ಸಹಸ್ರನಾಮಾರ್ಥ ಪ್ರಕಾಶಕಃ ಖದ್ಯೋತಃ ಸಂಪೂರ್ಣಃ೤೤
ಶ್ರೀಗಣೇಶಾರ್ಪಣಮಸ್ತು೤೤
ಶ್ರೀರಸ್ತು೤೤
ಗಂಭೀರರಾಯದೀಕ್ಷಿತರ ಮಗನಾದ ಭಾರತೀ ಎಂಬ ಉಪಾಖ್ಯವಿರುವ ಭಾಸ್ಕರಾಗ್ನಿಹೋತ್ರಿಗಳ ರಚನೆಯಾದ ಗಣಪತಿ ಸಹಸ್ರನಾಮದ ಅರ್ಥಗಳನ್ನು ಪ್ರಕಾಶಗೊಳಿಸುವ ಖದ್ಯೋತವೆಂಬ ಭಾಷ್ಯವು ಸಂಪೂರ್ಣವಾಯಿತು೤೤
೤೤ ಎಲ್ಲವೂ ಗಣೇಶಾರ್ಪಣೆಯಾಗಲಿ೤೤
೤೤ ಎಲ್ಲರಿಗೂ ಮಂಗಳವಾಗಲಿ೤೤
೤೤ಜಯಗುರುದತ್ತ೤೤

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share