11/03/2022 ಶುಕ್ರವಾರ ದ ವೈರಮುಡಿ ಬ್ರಹ್ಮೋತ್ಸವದ ಕಾರ್ಯಕ್ರಮ

277
Share

11/03/2022 ಶುಕ್ರವಾರದ ಮೇಲುಕೋಟೆ ಶ್ರೀ ವೈರಮುಡಿ ಉತ್ಸವದ ಕಾರ್ಯಕ್ರಮಗಳು ಈ ರೀತಿ ಇವೆ.
ಒಂದನೇ ತಿರುನಾಳ್ ಮೃಗಶಿರ ನಕ್ಷತ್ರದಲ್ಲಿ ಧ್ವಜಾರೋಹಣ, ಭೇರಿತಾಡನ , ತಿರುಪ್ಪರೈ, ಹಂಸವಾಹನ, ಯಾಗಶಾಲಾ ಪ್ರವೇಶ, ಶ್ರೀತಿರುಕಚ್ಚಿ ನಂದಿ ತಿರುನಕ್ಷತ್ರ ಕಾರ್ಯಕ್ರಮಗಳು ನಡೆಯಲಿವೆ .
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಂಡವಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಎಸ್ ಮಂಜು ಮತ್ತು ತಂಡದಿಂದ ಕೋಲಾಟ, ಮಂಜೇಗೌಡ ಮತ್ತು ತಂಡದಿಂದ ವೀರಮಕ್ಕಳ ಕುಣಿತ, ಗಾನ ಸುಮಾ ಪುಟ್ಟಸೋಮನ ಹಳ್ಳಿಯಿಂದ ಭಕ್ತಿಗೀತೆ , ಹೆಬ್ಬಾಡಿ ಸಿ ಮಹದೇವು ಮತ್ತು ತಂಡದಿಂದ ತಬಲಾ, ಮಂಡ್ಯ ಸತ್ಯ ಮತ್ತು ತಂಡದಿಂದ ಹಾಸ್ಯ ಕಾರ್ಯಕ್ರಮಗಳು ಪುತಿನ ಕಲಾ ಮಂದಿರದಲ್ಲಿ ನಡೆಯಲಿದೆ .
ಸರ್ವರಿಗೂ ಸ್ವಾಗತ .

Share