MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 192

252
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 192

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಅಕಿಂಚನೋ7ಪಿ ಮತ್ಪ್ರಾಪ್ತಿಚಿತ್ತಕೋ ನಿಯತಾಶನಃ೤
ಜಪೇತ್ತು ಚತುರೋ ಮಾಸಾನ್ ಗಣೇಶಾರ್ಚನತತ್ಪರಃ೤೤
ದರಿದ್ರತಾಂ ಸಮುನ್ಮೂಲ್ಯ ಸಪ್ತಜನ್ಮಾನುಗಾಮಪಿ೤
ಲಭತೇ ಮಹತೀಂ ಲಕ್ಷ್ಮೀಮಿತ್ಯಾಜ್ಞಾ ಪಾರಮೇಶ್ವರೀ೤೤
ಆಯುಷ್ಯಂ ವೀತರೋಗಂ ಕುಲಮತಿವಿಮಲಂ ಸಂಪದಶ್ಚಾರ್ತದಾನಾಃ
ಕೀರ್ತಿರ್ನಿತ್ಯಾವದಾತಾ ಭಣಿತಿರಭಿನವಾ ಕಾಂತಿರವ್ಯಾಧಿಭವ್ಯಾ೤
ಪುತ್ರಾಃ ಸಂತಃ ಕಲತ್ರಂ ಗುಣವದಭಿಮತಂ ಯದ್ಯದೇತಚ್ಚ ಸತ್ಯಂ
ನಿತ್ಯಂ ಯಃ ಸ್ತೋತ್ರಮೇತತ್ಪಠತಿ ಗಣಪತೇಸ್ತಸ್ಯ ಹಸ್ತೇ ಸಮಸ್ತಮ್‌೤೤
ಭಾ: ಅಕಿಂಚನೋ ದರಿದ್ರಃ, ಸಪ್ತಜನ್ಮಾನುಗಾಂ ಭಾವಿಸಪ್ತಜನ್ಮಪರ್ಯಂತಮನುವರ್ತಿಷ್ಯಮಾಣಾಮಪಿ೤ ಆಯುಷ್ಯಾದೀನಾಂ ನವಾನಾಂ ತದುತ್ತರಾಣಿ ನವಪದಾನಿ ವಿಶೇಷಣಾನಿ, ಆರ್ತೇಭ್ಯೋ ದಾನಂ ಯಾಸಾಂ ತಾ ಆರ್ತದಾನಾಃ, ನಿತ್ಯಾವದಾತಾ ಚಿರಸ್ಥಾಯಿತ್ವೇ ಸತಿ ಶುದ್ಧಾ ಅಭಿನವಾಃ ಪರೈರಕಲ್ಪಿತಾ ಅಭಿಮತಂ ಮನಸಾ ಚಿಂತಿತಂ ಯದ್ಯತ್ತದೇತತ್ಸರ್ವಂ ಸತ್ಯಂ, ಸತ್ಯಸಂಕಲ್ಪತೇತಿ ಯಾವತ್‌೤
ನನ್ನನ್ನು ಹೊಂದಬೇಕೆಂಬ ಮನಸ್ಸಿನಿಂದ ಆಹಾರನಿಯಮವನ್ನು ಪಾಲಿಸುತ್ತಾ ನನ್ನ ಅರ್ಚನೆಯಲ್ಲಿ ತತ್ಪರನಾಗಿ ನಾಲ್ಕುಮಾಸಗಳು ಈ ಸ್ತೋತ್ರವನ್ನು ಜಪಿಸಿದವನು ಕಟುಕ ದರಿದ್ರನಾಗಿದ್ದರೂ, ಮುಂದಿನ ಏಳು ಜನ್ಮಗಳಲ್ಲಿಯೂ ತನ್ನನ್ನೇ ಅನುಸರಿಸಿ ಬರುವಂತಹ ಲಕ್ಷ್ಮೀ ಕಟಾಕ್ಷವನ್ನು ಪಡೆಯುತ್ತಾನೆ. (ಈ ಜನ್ಮದಲ್ಲಿ ಶ್ರೀಮಂತನಾಗುತ್ತಾನೆ) ಇದು ಪರಮೇಶ್ವರನಾದ ನನ್ನ ಅನುಗ್ರಹ. ರೋಗರಹಿತವಾದ ದೀರ್ಘಾಯುಷ್ಯ, ಅತಿನಿರ್ಮಲವಾದ ಕುಲ, ಆರ್ತರಿಗೆ ದಾನಮಾಡಬೇಕೆಂಬ ಬುದ್ಧಿಯಿಂದ ಕೂಡಿದ ಸಂಪತ್ತು, ಚಿರವಾದ ಶುದ್ಧವಾದ ಕೀರ್ತಿ, ಸ್ವತಂತ್ರವಾದ ವಾಕ್ಶಕ್ತಿ, ವ್ಯಾಧಿಗಳಿಲ್ಲದ ಕಾಂತಿ, ಸತ್ಪುತ್ರಪ್ರಾಪ್ತಿ, ಗುಣವಂತಳಾದ ಹೆಂಡತಿ, ಇದಿಷ್ಟೇ ಅಲ್ಲದೇ ಮನಸ್ಸಿನಿಂದ ಬೇಡಿದ ಎಲ್ಲವೂ ಯಾರು ನಿತ್ಯವೂ ಈ ಗಣಪತಿ ಸ್ತೋತ್ರವನ್ನು ಪಠಿಸುತ್ತಾರೆಯೋ ಅವರಿಗೆ ಕರಗತವಾಗುತ್ತದೆ. (ಪಾರಾಯಣ ಮಾಡುವವರ ಸಂಕಲ್ಪಗಳೆಲ್ಲವೂ ಸತ್ಯಸಂಕಲ್ಪಗಳಾಗುತ್ತವೆ.)

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share