MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 191

251
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 191

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .
ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )
ದೂರ್ವಾಭಿರ್ನಾಮಭಿಃ ಪೂಜಾಂ ತರ್ಪಣಂ ವಿಧಿವಚ್ಚರೇತ್‌೤
ಅಷ್ಟದ್ರವ್ಯೈರ್ವಿಶೇಷೇಣ ಜುಹುಯಾದ್ಭಕ್ತಿಸಂಯುತಃ೤೤
ತಸ್ಯೇಪ್ಸಿತಾನಿ ಸರ್ವಾಣಿ ಸಿದ್ಧ್ಯಂತ್ಯತ್ರ ನ ಸಂಶಯಃ೤
ಇದಂ ಪ್ರಜಪ್ತಂ ಪಠಿತಂ ಪಾಠಿತಂ ಶ್ರಾವಿತಂ ಶ್ರುತಂ೤
ವ್ಯಾಕೃತಂ ಚರ್ಚಿತಂ ಧ್ಯಾತಂ ವಿಮೃಷ್ಟಮಭಿನಂದಿತಮ್‌೤
ಇಹಾಮುತ್ರ ಚ ಸರ್ವೇಷಾಂ ವಿಶ್ವೈಶ್ವರ್ಯಪ್ರದಾಯಕಮ್‌೤೤
ಸ್ವಚ್ಛಂದಚಾರಿಣಾಪ್ಯೇಷ ಯೇನಾಯಂ ಧಾರ್ಯತೇ ಸ್ತವಃ೤
ಸ ರಕ್ಷ್ಯತೇ ಶಿವೋದ್ಭೂತೈರ್ಗಣೈರಧ್ಯುಷ್ಟಕೋಟಿಭಿಃ೤೤
ಪುಸ್ತಕೇ ಲಿಖಿತಂ ಯತ್ರ ಗೃಹೇ ಸ್ತೋತ್ರಂ ಪ್ರಪೂಜಯೇತ್‌೤
ತತ್ರ ಸರ್ವೋತ್ತಮಾ ಲಕ್ಷ್ಮೀಃ ಸನ್ನಿಧತ್ತೇ ನಿರಂತರಮ್‌೤೤
ದಾನೈರಶೇಷೈರಖಿಲೈರ್ವ್ರತೈಶ್ಚ ತೀರ್ಥೈರಶೇಷೈರಖಿಲೈರ್ಮಖೈಶ್ಚ೤
ನ ತತ್ಫಲಂ ವಿಂದತಿ ಯದ್ಗಣೇಶಸಹಸ್ರನಾಮ್ನಾಂ ಸ್ಮರಣೇನ ಸದ್ಯಃ೤೤
ಏತನ್ನಾಮ್ನಾಂ ಸಹಸ್ರಂ ಪಠತಿ ದಿನಮಣೌ ಪ್ರತ್ಯಹಂ ಪ್ರೋಜ್ಜಿಹಾನೇ
ಸಾಯಂ ಮಧ್ಯಂದಿನೇ ವಾ ತ್ರಿಷವಣಮಥವಾ ಸಂತತಂ ವಾ ಜನೋ ಯಃ೤
ಸ ಸ್ಯಾದೈಶ್ವರ್ಯಧುರ್ಯಃ ಪ್ರಭವತಿ ಚ ಸತಾಂ ಕೀರ್ತಿಮುಚ್ಚೈಸ್ತನೋತಿ
ಪ್ರತ್ಯೂಹಂ ಹಂತಿ ವಿಶ್ವಂ ವಶಯತಿ ಸುಚಿರಂ ವರ್ಧತೇ ಪುತ್ರಪೌತ್ರೈಃ೤೤
ಭಾ: ನಾಮಭಿಃ ಪೂಜಾಯಾಂ ಚತುರ್ಥೀನಮೋನ್ತೈಃ, ತರ್ಪಣೇ ದ್ವಿತೀಯಾ, ತರ್ಪಯಾಮ್ಯಂತೈಃ ಹೋಮೇ ಚತುರ್ಥೀಸ್ವಾಹಾಂತೈರಿತ್ಯರ್ಥಃ೤ ಪ್ರಜಪ್ತಂ ಉಪಾಂಶೂಚ್ಚರಿತಂ, ಪಠಿತಂ ಉಚ್ಚೈರ್ವ್ಯಕ್ತಮುಚ್ಚರಿತಮ್‌೤ ವ್ಯಾಕೃತಂ ವ್ಯಾಖ್ಯಾತಂ, ಚರ್ಚಿತಂ ಉಹಾಪೋಹವಿಷಯೀಕೃತಂ, ಧ್ಯಾತಂ ಮನಸಾ ವಿಚಾರಿತಂ, ವಿಮೃಷ್ಟಂ ಶೋಧಿತಂ ಲೇಖಕದೋಷನಿರಾಸೇನೇತಿ ಯಾವತ್, ಅಭಿನಂದಿತಮನುಮತಮ್‌೤
ಶಿವೋದ್ಭೂತೈಃ ಶಿವೇನ ಶಿವಯಾ ಚ ಜನಿತೈಃ ಅಧ್ಯುಷ್ಟಕೋಟಿಭಿಃ ಪ್ರತ್ಯೇಕಂ ಸಾರ್ಧಕೋಟಿತ್ರಯಸಂಖ್ಯಾಕೈಃ೤
ಪ್ರೋಜ್ಜಿಹಾನೇ ಉದಯಮಾನೇ ‘ಓಹಾಙ್ ಗತೌ’ ಇತ್ಯಸ್ಯ ರೂಪಮ್, ತ್ರಿಷವಣಂ ತ್ರಿಸಂಧ್ಯಂ ಸಂತತಂ ವೇತಿ ಪ್ರಯಾಸಾಧಿಕ್ಯಾತ್ಫಲಾಧಿಕ್ಯಂ ನ್ಯಾಯಸಿದ್ಧಂ ಪ್ರಭವತಿ, ದೇಶಪ್ರಭುತ್ವಂ ಚ ಲಭತೇ, ಪ್ರತ್ಯೂಹಂ ವಿಘ್ನಮ್‌೤೤
ಯಾರು ನನ್ನ ಜನ್ಮತಿಥಿಯಾದ ಭಾದ್ರಪದಶುಕ್ಲ ಚತುರ್ಥಿಯಲ್ಲಿ ಈ ನಾಮಗಳನ್ನು ಹೇಳಿಕೊಂಡು ದುರ್ವಾಪೂಜೆ ಮಾಡುತ್ತಾರೆಯೋ, ಯಾರು ತರ್ಪಣಗಳನ್ನು ಮಾಡುತ್ತಾರೆಯೋ ಮತ್ತು ಭಕ್ತಿಯಿಂದ ಕೂಡಿದ ಮನಸ್ಸುಳ್ಳವರಾಗಿ ಎಂಟು ವಿಧವಾದ ದ್ರವ್ಯಗಳಿಂದ ಹೋಮಮಾಡುತ್ತಾರೆಯೋ ಅಂತಹವರು ಬೇಡಿದ್ದೆಲ್ಲಾ ನೆರವೇರುತ್ತದೆ. ಅವರ ಎಲ್ಲಾ ಕಾರ್ಯಗಳೂ ಸಿದ್ಧಿಸುತ್ತವೆ ಎಂಬುದುರಲ್ಲಿ ಯಾವ ಸಂದೇಹವೂ ಇಲ್ಲ. ಪೂಜೆಯನ್ನು ಚತುರ್ಥ್ಯಂತ ನಮೋಂತವಾದ ನಾಮಗಳಿಂದ ಮಾಡಬೇಕು. (ಉದಾ:- ಗಣೇಶ್ವರಾಯ ನಮಃ) ತರ್ಪಣ ಕ್ರಿಯೆಯಲ್ಲಿ ದ್ವಿತೀಯಾಂತ ತರ್ಪಯಾಮ್ಯಂತವಾದ ನಾಮಗಳನ್ನು ಬಳಸಬೇಕು. (ಉದಾ:- ಓಂ ಗಣೇಶ್ವರಂ ತರ್ಪಯಾಮಿ) ಹೋಮದಲ್ಲಿ ಚತುರ್ಥ್ಯಂತ ಸ್ವಾಹಾಂತ ನಾಮಗಳು (ಉದಾ:- ಓಂ ಗಣೇಶ್ವರಾಯ ಸ್ವಾಹಾ) ಈ ಗಣೇಶ್ವರ ಸಹಸ್ರನಾಮವನ್ನು ಜಪಿಸಿದರೂ ಉಪಾಂಶುವಾಗಿ ಹೊರಗೆ ಕೇಳಿಸದೆ ಒಳಗೊಳಗೆ ಹೇಳಿಕೊಂಡರೂ, ಎಲ್ಲರಿಗೂ ಕೇಳಿಸುವಂತೆ ಉಚ್ಚೈಸ್ವರದಲ್ಲಿ ಪಠಿಸಿದರೂ, ಶಿಷ್ಯರಿಗೆ, ಭಕ್ತರಿಗೆ ಪಾಠಮಾಡಿದರೂ, ಕೇಳಿಸಿದರೂ, ಕೇಳಿದರೂ, ವ್ಯಾಖ್ಯಾನಮಾಡಿದರೂ, ಇದನ್ನು ಕುರಿತು ತರ್ಕಿಸಿ ಚರ್ಚೆಮಾಡಿದರೂ, ಮನಸ್ಸಿನಲ್ಲಿ ವಿಚಾರಮಾಡಿದರೂ, ಲೇಖಕರ ದೋಷಗಳಿಲ್ಲದಂತೆ ಸಂಶೋಧನೆ ಮಾಡಿದರೂ, ಬರಹದಲ್ಲಿರಬಹುದಾದ ತಪ್ಪುಗಳನ್ನು ಸರಿಪಡಿಸಿದರೂ, ಇದನ್ನು ಒಪ್ಪಿಕೊಂಡರೂ, ಇಹಪರಗಳಲ್ಲಿ ಎಲ್ಲರಿಗೂ ಎಲ್ಲಾ ವಿಧವಾದ ಐಶ್ವರ್ಯವನ್ನೂ ಅನುಗ್ರಹಿಸುತ್ತದೆ. ಸ್ವೇಚ್ಛಾಸಂಚಾರಿಗಳು ಇದನ್ನು ಧಾರಣೆ ಮಾಡಿದರೆ ಅವರನ್ನು ಶಿವ ಪಾರ್ವತಿಯರಿಂದ ಜನಿತವಾದ ಏಳುಕೋಟಿ ಗ್ರಹಗಳು ಕಾಪಾಡುತ್ತಿರುತ್ತವೆ. ಯಾರು ಈ ಸ್ತೋತ್ರದ ಪುಸ್ತಕವನ್ನು ಮನೆಯಲ್ಲಿಟ್ಟು ಪೂಜಿಸುವರೋ ಅವರ ಮನೆಯಲ್ಲಿ ಸರ್ವೋತ್ತಮ ಲಕ್ಷ್ಮೀದೇವಿಯು ನಿರಂತರವಾಗಿ ನೆಲೆಸಿರುತ್ತಾಳೆ. ಗಣೇಶ ಸಹಸ್ರನಾಮದ ಸ್ಮರಣೆಯಿಂದ ಸಿಕ್ಕುವಂತಹ ಫಲವು ದಾನ, ವ್ರತ, ತೀರ್ಥಸ್ನಾನ, ತೀರ್ಥಯಾತ್ರೆ, ಯಾಗಗಳು ಇವಾವುದರಿಂದಲೂ ಸಿಕ್ಕುವುದಿಲ್ಲ. ಯಾರಾದರೆ ಈ ನಾಮಸಹಸ್ರವನ್ನು ಪ್ರತಿದಿನ ಸೂರ್ಯೋದಯ ವೇಳೆಯಲ್ಲಿ ಅಥವಾ ಸಾಯಂಕಾಲ ಇಲ್ಲವೇ ಮಧ್ಯಾಹ್ನಕಾಲಗಳಲ್ಲಿ ಪಠಿಸುವರೋ, ತ್ರಿಸಂಧ್ಯಾ ಕಾಲಗಳಲ್ಲಿ ಸತತವಾಗಿ ಪಠಿಸುವರೋ, ಅಂತಹವರು ಐಶ್ವರ್ಯದಲ್ಲಿ ಅಗ್ರಗಣ್ಯರಾಗುತ್ತಾರೆ. ಅವರ ಕೀರ್ತಿಯು ವಿಶ್ವದಲ್ಲೆಲ್ಲಾ ವ್ಯಾಪಿಸುವುದು. ಅವರ ವಿಘ್ನಗಳು ನಾಶವಾಗುತ್ತವೆ. ವಿಶ್ವವೇ ಅವರಿಗೆ ವಶವಾಗುತ್ತದೆ. ಪುತ್ರ ಪೌತ್ರಾದಿಗಳಿಂದ ದಿನದಿನಾಭಿವೃದ್ಧಿಯನ್ನು ಪಡೆಯುತ್ತಾರೆ.
ಹೆಚ್ಚಿನ ಪಾರಾಯಣ ಮಾಡುವುದರಿಂದ ಹೆಚ್ಚಿನ ಫಲವನ್ನು ಪಡೆಯಬಹುದು ಎಂದು ಹೇಳುವುದಕ್ಕಾಗಿಯೇ ಕಾಲಭೇದವನ್ನು ತೋರಿಸಿದ್ದಾರೆ.

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share