MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 123

273
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 123

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

640 . ಓಂ ಸರ್ವಜ್ಞಾಯ ನಮಃ
641 . ಓಂ ಸರ್ವಭೇಷಜಭೇಷಜಾಯ ನಮಃ
642 . ಓಂ ಸೃಷ್ಟಿಸ್ಥಿತಿಲಯಕ್ರೀಡಾಯ ನಮಃ
643 . ಓಂ ಸುರಕುಂಜರಭೇದನಾಯ ನಮಃ
644 . ಓಂ ಸಿಂದೂರಿತಮಹಾಕುಂಭಾಯ ನಮಃ

640. ಓಂ ಸರ್ವಜ್ಞಃ-
ಭಾ: ಸರ್ವಜ್ಞಃ ಸಕಲಜ್ಞಾತಾ ಸುಗತಾತ್ಮಾ ವಿನಾಯಕಃ|
ಎಲ್ಲವನ್ನೂ ತಿಳಿದವನು, ಬುದ್ಧಸ್ವರೂಪನೂ ಆದ್ದರಿಂದ ವಿನಾಯಕನು ಸರ್ವಜ್ಞನು. (ಬುದ್ಧ-ಜ್ಞಾನಿ)
ಓಂ ಸರ್ವಜ್ಞಾಯ ನಮಃ

641. ಓಂ ಸರ್ವಭೇಷಜ ಭೇಷಜಮ್-
ಭಾ: ಸರ್ವೇಷಾಮಪಿ ರೋಗಾಣಾಂ ದಿವ್ಯಂ ಪೀಯೂಷಮೌಷಧಮ್‌|
ತಸ್ಯಾಪಿ ನಾಶಯನ್ ದೋಷಾನ್ ಸರ್ವಭೇಷಜಭೇಷಜಮ್‌||
ಸಮಸ್ತ ರೋಗಗಳಿಗೂ ಅಮೃತವು ದಿವ್ಯೌಷಧವು. ಅಂತಹ ಅಮೃತದ ದೋಷಗಳನ್ನೂ ನಾಶಮಾಡುವವನು (ಓಷಧಿಗಳಿಗೇ ಓಷಧಿಯಾಗಿರುವವನು) ಸರ್ವಭೇಷಜ ಭೇಷಜಮ್. (ಭೇಷಜ ಶಬ್ದವು ನಿತ್ಯನಪುಂಸಕಲಿಂಗವು) (ಅಮೃತವನ್ನು ಕುಡಿದವರು ರೋಗರಹಿತರೂ ಅಮರರೂ ಆಗುತ್ತಾರೆ.)
ಓಂ ಸರ್ವಭೇಷಜಭೇಷಜಾಯ ನಮಃ
ಸೃಷ್ಟಿಸ್ಥಿತಿಲಯಕ್ರೀಡಃ ಸುರಕುಂಜರಭೇದನಃ|
ಸಿಂದೂರಿತಮಹಾಕುಂಭಃ ಸದಸದ್ವ್ಯಕ್ತಿದಾಯಕಃ||

642. ಓಂ ಸೃಷ್ಟಿಸ್ಥಿತಿ ಲಯಕ್ರೀಡಃ-
ಭಾ: ಲೀಲಯಾ ಸರ್ವಜಗತಾಂ ನಿರ್ಮಿತಿಸ್ಥಿತಿಸಂಹೃತೀಃ|
ಸೃಷ್ಟಿಸ್ಥಿತಿಲಯಕ್ರೀಡಃ ಕಥ್ಯಸೇ ರಚಯನ್ ಕ್ಷಣಾತ್‌||
ಹೇ ವಿನಾಯಕ! ನೀನು ಸಕಲ ಲೋಕಗಳ ಸೃಷ್ಟಿಯನ್ನೂ, ರಕ್ಷಣೆಯನ್ನೂ, ಸಂಹಾರವನ್ನೂ ಸ್ವಲೀಲೆಯಿಂದ ಕ್ಷಣಕಾಲದಲ್ಲಿ ಆಟವಾಡಿಕೊಂಡಷ್ಟು ಸುಲಭವಾಗಿ ಮಾಡುತ್ತಿದ್ದೀಯೆ. ಆದ್ದರಿಂದ ನೀನು ಸೃಷ್ಟಿಸ್ಥಿತಿಲಯಕ್ರೀಡನು.
ಓಂ ಸೃಷ್ಟಿಸ್ಥಿತಿಲಯಕ್ರೀಡಾಯ ನಮಃ

643. ಓಂ ಸುರಕುಂಜರಭೇದನಃ-
ಭಾ: ದಾನವೈರರ್ಚಿತಶ್ಚ ತ್ವಂ ಸುರಕುಂಜರಭೇದನಃ|
ಹೇ ಗಜಾನನ! ದಾನವರು ನಿನ್ನನ್ನು ಪೂಜಿಸಿದರು. ನೀನವರನ್ನು ಅನುಗ್ರಹಿಸಬೇಕೆಂದು ಸಂಕಲ್ಪಿಸಿ, ದೇವತೆಗಳ ವಾಹನಗಳಾದ ಆನೆಗಳ ಕುಂಭಗಳನ್ನು ಸೀಳಿಹಾಕಿದೆ. ಆಗಿನಿಂದ ನೀನು ಸುರಕುಂಜರಭೇದನನು. (ಆಹಾ! ಗಣೇಶನ ಕೃಪೆ ಅಪಾರ.)
ಓಂ ಸುರಕುಂಜರಭೇದನಾಯ ನಮಃ

644. ಓಂ ಸಿಂದೂರಿತಮಹಾಕುಂಭಃ-
ಭಾ: ಸಿಂದೂರಿತಮಹಾಕುಂಭಃ ಸಿಂದೂರಾರುಣಮಸ್ತಕಃ|
ಅತಿದೊಡ್ಡ ಗಾತ್ರದ ತನ್ನ ಕುಂಭಸ್ಥಳದಲ್ಲಿ ಸಿಂದೂರವನ್ನು ಪೂರ್ಣವಾಗಿ ಬಳಿದುಕೊಂಡಿರುವುದರಿಂದ ಗಣೇಶನ ಕುಂಭಸ್ಥಳವು ಕೆಂಪುಬಣ್ಣದಲ್ಲಿದೆ. ಆದಕಾರಣ ಅವನು ಸಿಂದೂರಿತಮಹಾಕುಂಭನು.
ಓಂ ಸಿಂದೂರಿತಮಹಾಕುಂಭಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share