ಸಂಪಾದಕೀಯ : 5 ವರ್ಷ ರಾಜ್ಯವನ್ನು ಆಳಿದ ಮುಖ್ಯಮಂತ್ರಿಗೆ ಚುನಾವಣೆಗೆ ನಿಲ್ಲಲು ಒಂದು ಕ್ಷೇತ್ರ ಆರಿಸಲು ವಿಶ್ವಾಸದ ಕೊರತೆ

190
Share

ಒಂದು ರಾಷ್ಟ್ರೀಯ ಪಕ್ಷದಲ್ಲಿದ್ದು, ಒಂದು ರಾಜ್ಯವನ್ನು ಸಂಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುನ್ನಡೆಸಿದವರು ಸಿದ್ದರಾಮಯ್ಯನವರು. ಇವರಿಗೆ ಈಗ ಚುನಾವಣೆಯಲ್ಲಿ ನಿಲ್ಲಲು ಒಂದು ಕ್ಷೇತ್ರವು ಸರಿಯಾಗಿ ಆಯ್ಕೆ ಮಾಡಲಾಗುತ್ತಿಲ್ಲ ಎನ್ನುವುದು ಬಹಳಷ್ಟು ಸಾರ್ವಜನಿಕರ ಅಭಿಪ್ರಾಯವಾಗಿದೆ. ಅಲ್ಲದೆ ಇವರ ನಾಯಕತ್ವದ ಬಗ್ಗೆ ಏನು ಹೇಳಬೇಕು ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಸಾಮಾನ್ಯವಾಗಿ ಶಾಸಕರು ಅವರವರ ಕ್ಷೇತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದರೆ ಅವರಿಗೆ ಚುನಾವಣೆಯಲ್ಲಿ ನಿಲ್ಲಲು ಒಂದು ಅರ್ಹತೆ ಇರುತ್ತದೆ. ಆದರೆ ಮುಖ್ಯಮಂತ್ರಿಯಾದವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಆಗಿರುತ್ತಾರೆ. 224 ಕ್ಷೇತ್ರಗಳನ್ನು ಅವರು ಪ್ರತಿನಿಧಿಸಿರುತ್ತಾರೆ. ಅಂತಹವರಿಗೆ ಒಂದು ಕ್ಷೇತ್ರದಲ್ಲಿ ನಿಂತು ಗೆದ್ದು ಬರುತ್ತೇನೆ ಎನ್ನುವ ವಿಶ್ವಾಸವೇ ಇಲ್ಲ. ಈಗ ಅವರು ಹೈಕಮಾಂಡ್ ಅನ್ನು ಬಳಸಿಕೊಂಡು ಅವರು ಹೇಳಿದ ಕಡೆ ನಿಲ್ಲುತ್ತೇನೆ ಎಂದು ಹೇಳಬಹುದು ಅಥವಾ ಎಲ್ಲಿ ಕಾಂಗ್ರೆಸ್ ವೀಕ್ ಇದೆಯೋ ಅಂತ ಕಡೆ ತಾವು ನಿಂತು ಗೆಲ್ಲುವುದಕ್ಕಾಗಿ ಈ ನಿರ್ಧಾರ ಮಾಡಿರುವುದಾಗಿಯೂ ಹೇಳಬಹುದು. ಆದರೆ ಇದು ನಿಜವಾಗಿಯೂ ಜನರ ಕಣ್ಣೊರೆಸುವ ಮಾತು ಎಂದು ಸಲೀಸಾಗಿ ಗೊತ್ತಾಗುತ್ತದೆ. ಇಲ್ಲದಿದ್ದರೆ ಡಿಕೆ ಶಿವಕುಮಾರ್ ರವರು ಕನಕಪುರದಲ್ಲಿ ನಿಲ್ಲಲು ಎರಡನೇ ಮಾತಿಲ್ದೆ ನಿರ್ಧರಿಸಿರುವದಕ್ಕೆ ಕಾರಣವೇನು? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡಿಕೆಶಿಯವರಿಗೂ ಆ ರೀತಿ ತಮ್ಮ ಪಕ್ಷಕ್ಕೆ ಮತ್ತೊಂದು ಸೀಟು ಗೆಲ್ಲಿಸಿ ಕೊಡಲೇಬೇಕು ಎನ್ನುವ ಉದ್ದೇಶವಿದ್ದರೆ ಡಿಕೆ ಶಿವಕುಮಾರ್ ಕನಕಪುರದಲ್ಲಿ ಬೇರೆಯವರನ್ನು ನಿಲ್ಲಿಸಿ, ತಾವು ಬೇರೆ ಕಡೆ ಕಾಂಗ್ರೆಸ್ ಹೆಚ್ಚು ಪ್ರಬಲವಿಲ್ಲದ ಕಡೆ ನಿಂತು ಎರಡು ಸ್ಥಾನದಲ್ಲೂ ಕಾಂಗ್ರೆಸ್ಸನ್ನು ಗೆಲ್ಲಿಸುವ ಧೈರ್ಯ, ಛಾತಿಯು ಅವರಿಗಿದೆ.ಅವರಿಗೇಕೆ ಈ ರೀತಿಯ ಆಯ್ಕೆಯ ಬಗ್ಗೆ ಜೊಂಜಾಟವಿಲ್ಲ.
ಒಂದು ಕ್ಷೇತ್ರವನ್ನು ಆರಿಸಲಾಗದ ಅಭ್ಯರ್ಥಿಯು ರಾಜ್ಯವನ್ನೇ ಮುನ್ನಡೆಸುವುದಾಗಿ ಹೇಳಲು ಯಾವ ರೀತಿ ಅರ್ಹರು ?
ಮಾಸ್ ಲೀಡರ್ ಎಂದೇ ಪ್ರಖ್ಯಾತರಾಗಿದ್ದ ಸಿದ್ದರಾಮಯ್ಯನವರಿಗೆ ಈ ಸ್ಥಿತಿ ಬರಲು ಅವರ ನಡವಳಿಕೆಯೆ ಕಾರಣ ಎನ್ನುವುದೂ ಸಾರ್ವಜನಿಕರ ಅಭಿಪ್ರಾಯವಾಗಿದೆ. ನಾಯಕರಾದವರು ಸಮಾಜದಲ್ಲಿರುವ ಎಲ್ಲಾ ವರ್ಗದ ಜನರಿಗೂ, ಅವರ ಭಾವನೆಗೂ ಗೌರವ ನೀಡಬೇಕು, ಪರಿಗಣಿಸಬೇಕು. ಎಲ್ಲರನ್ನೂ ಎದುರು ಹಾಕಿಕೊಂಡು ತಮ್ಮದೇ ರೀತಿಯಲ್ಲಿ ಉದ್ಧಟತನವಾಗಿ ಎಲ್ಲರೊಂದಿಗೆ ನಡೆದುಕೊಳ್ಳುವುದು, ಕೆಲವರಿಗೆ ನೋವಾಗುವಂತೆ, ಒಂದು ವರ್ಗದ ಜನರಿಗೆ ನೋವಾಗುವಂತೆ ಮಾತನಾಡುವುದು ಇದೆಲ್ಲವನ್ನು ಲೆಕ್ಕಿಸದೆ ಮಾಡಿದ್ದರಿಂದ ಸಿದ್ದರಾಮಯ್ಯನವರು ಇಂದು ಈ ಸ್ಥಿತಿಗೆ ಬಂದು ತಲುಪಿದ್ದಾರೆ ಎನ್ನುವುದು ನೊಂದವರ ಮಾತಾಗುದೆ. ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತಾಗಿದೆ ಸಿದ್ದರಾಮಯ್ಯನವರ ಸ್ಥಿತಿ. ತಮಗೆ ಚುನಾವಣೆಗೆ ನಿಂತು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸವಾಗಿ ಹೇಳಲು ಒಂದು ಕ್ಷೇತ್ರವಿಲ್ಲ ಆದರಿಂದ ಎಲ್ಲಾ ಹೊಣೆಯನ್ನು ಹೈಕಮಾಂಡ್ ಗೆ ಮೇಲೆ ಹೇಳಿ ಇದರಿಂದ ತಮಗಾಗುವ ಅವಮಾನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.


Share