ಸಿಸಿಬಿ ಪೊಲೀಸರಿಂದ ಕುಖ್ಯಾತ ಮನೆ ಕಳ್ಳರ ಬಂಧನ

361
Share

ಸಿ.ಸಿ.ಬಿ.ಪೊಲೀಸರಿಂದ ಕುಖ್ಯಾತ ಮನೆ ಕಳ್ಳರ ಬಂಧನ . ರೂ . 3100000 / -ರೂ ಮೌಲ್ಯದ 61 ಗ್ರಾಂ ತೂಕದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ವಶ ಪಡಿಸಿಕೊಳ್ಳಲಾಗಿದೆ ಮೈಸೂರು ನಗರದಲ್ಲಿ ವರದಿಯಾಗಿರುವ ಮನೆ ಕಳ್ಳತನ ಪ್ರಕರಣಗಳ ಪತ್ತೆ ಸಂಬಂಧ ನಗರದ ಪೊಲೀಸ್ ಆಯುಕ್ತರಾದ ಡಾ || ಚಂದ್ರಗುಪ್ತ , ಐ.ಪಿ.ಎಸ್.ರವರು ಮೈಸೂರು ನಗರದ ಸಿ.ಸಿ.ಬಿ.ಘಟಕದ ಪೋಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿದ್ದು , ಈ ವಿಶೇಷ ತಂಡವು ದಿನಾಂಕ : 23-02-2021 ರಂದು ಸಂಜೆ 6.00 ಗಂಟೆಯ ಸಮಯದಲ್ಲಿ ಕುಖ್ಯಾತ ಮನೆಗಳ್ಳರಾದ – 1 , ಫಯಾಜ್ ಅಹ್ಮದ್ ( @ ಟೊತ್ತ ಫಯಾಜ್ , @ ಟೊತ್ತ ( @ ಟೊತ್ತ ಫಯಾಜ್ ಅನ್ ದಸ್ತಗೀರ್ , 54 ವರ್ಷ , ಸ್ವಂತ ವಿಳಾಸ : ಸಂತೆಮಾಳದ ಹತ್ತಿರ , ಉರ್ದುಸ್ತೂಲ್ ಹಿಂದೆ , ಸರಗೂರು , ಹೆಚ್.ಡಿ.ಕೋಟೆ ತಾಲ್ಲೂಕು , ಮೈಸೂರು ಜಿಲ್ಲೆ , ಹಾಲ ವಿಳಾಸ : – # 83 , ಪೋಸ್ಟಲ್ ಕಾಲೋನಿ , ರಿಂಗ್ ರಸ್ತೆ ಹತ್ತಿರ , ರಾಜೀವ್ ನಗರ , 2 ನೇ ಹಂತ , ಮೈಸೂರು ನಗರ 2 .ಇಪ್ತಿಯಾಜ್ ಅಹಮದ್ ಬಿನ್ ಲೇ !! ನಜೀರ್ ಅಹಮದ್ , 43 ವರ್ಷ , ಹಾಲಿ ವಿಳಾಸ : – # 2146 , ಅಬು ಅಜರ್ ಮಸೀದಿ ಹಿಂಭಾಗ , ಗುಪ್ತ ಸ್ಕೋರ್ ಡೌನ್ , ರಾಜೀವ್ ನಗರ , 1 ನೇ ಹಂತ , ಮೈಸೂರು . ಸ್ವಂತ ವಿಳಾಸ : # 278 , ಗಣಪತಿ ದೇವಸ್ತಾನದ ಹಿಂಭಾಗ , ಭಾರತ್ ನಗರ , ಮೈಸೂರು . ಎಂಬುವರುಗಳನ್ನು ಮೈಸೂರು ನಗರದ ರಿಂಗ್ ರಸ್ತೆಯ ನಾಯ್ಡು ನಗರ , ಜಂಕ್ಷನ್‌ನಲ್ಲಿ ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ , ಸದರಿ ಆರೋಪಿಗಳು ಇದ್ದ ಸ್ಯಾಂಟ್ರೋ ಕಾರಿನಲ್ಲಿ ಮನೆಗಳ್ಳತನ ಮಾಡಲು ಉಪಯೋಗಿಸುತ್ತಿದ್ದ ಪರಿಕರಗಳು ಹಾಗೂ ಕಳ್ಳತನ ಮಾಡುವಾಗ ತಪ್ಪಿಸಿಕೊಳ್ಳಲು ಸಲುವಾಗಿ ಬಳಸುತ್ತಿದ್ದ ಪಿಸ್ತೂಲ್ ಮಾದರಿಯ ಏರ್ ಗನ್ ಹೊಂದಿದ್ದು , ಈ ಸಂಬಂಧ ಆರೋಪಿಗಳನ್ನು ಕೂಲಂಕುಶವಾಗಿ ವಿಚಾರಣೆಗೆ ಒಳಪಡಿಸಿದಾಗ ಸದರಿ ಆರೋಪಿಗಳು ದಿನಾಂಕ : 10-12-2020 ರಂದು ರಾತ್ರಿ ಮೈಸೂರು ನಗರ ಎನ್ ಆರ್ ಪೊಲೀಸ್ ಠಾಣಾ ಸರಹದ್ದಿನ ಸುಭಾಷ್ ನಗರ , 1 ನೇ ಮೇನ್ , ಮನೆ ನಂ : 47 ರಲ್ಲಿ ಬೆಂಕಿ ಅಪಘಾತವಾಗಿದ್ದು , ಈ ಸಂಬಂಧ ಮನೆಯವರು ಬೀಗ ಹಾಕಿಕೊಂಡು ಹೋಗಿದ್ದನ್ನು ಗಮನಿಸಿ , ಸದರಿ ಹಾಗು ಮನೆಯ ಕಿಟಕಿಯನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಸುಮಾರು 800 ಗ್ರಾಂ ತೂಕದ ಚಿನ್ನಾಭರಣಗಳು 60.000 /- ರೂ ನಗದು ಹಣವನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿರುತ್ತಾರೆ . ಸದರಿ ಆರೋಪಿಗಳನ್ನು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಿ , ನಂತರ ಪೊಲೀಸ್ ವಶಕ್ಕೆ ಪಡೆದು , ಆರೋಪಿಗಳು ಕದ್ದು ತಂದ ಚಿನ್ನಾಭರಣಗಳನ್ನು ವಿಲೇವಾರಿ ಮಾಡಿದ್ದ – 3 ) ಮೊಹಮದ್ ಪರ್ವೀಜ್ @ ಪರ್ವೀಜ್ ಜಿನ್ ರಹಮಾನ್ ಷರೀಫ್ , 41 ವರ್ಷ , ಮರಿಯಮ್ ಯಲ‌ನಲ್ಲಿ ಚಿನ್ನದ ವ್ಯಾಪಾರ , # 2759 , ಸುಲ್ತಾನ್ ಪಾರ್ಕ್ ರಸ್ತೆ , ಮಂಡಿ ಮೊಹಲ್ಲಾ ಮೈಸೂರು . ಎಂಬುವನನ್ನು ದಿನಾಂಕ : 26-02-2021 ರಂದು ದಸ್ತಗಿರಿ ಮಾಡಿ , ಮೇಲ್ಕಂಡ ಆರೋಪಿಗಳು ನೀಡಿದ ಈ ಇಚ್ಚಾ ಹೇಳಿಕೆಗಳ ಮೇರೆಗೆ ಉದಯಗಿರಿ ಶಾಖೆಯ ಮುತ್ತೂಟ್ ಫೈನಾನ್ಸ್ ಅಮಿಟೆಡ್‌ನಲ್ಲಿ ಗಿರವಿ ಇಟ್ಟಿದ್ದ ಹಾಗೂ ಇತರೆ ಕಡೆಗಳಲ್ಲಿ ವಿಲೇವಾರಿ ಮಾಡಿದ್ದ ಚಿನ್ನಾಭರಣಗಳು ಸೇರಿದಂತೆ ರೂ , 31,00,000 / ಮೌಲ್ಯದ 611 ಗ್ರಾಂ ತೂಕದ ಚಿನ್ನಾಭರಣಗಳು , ಆರೋಪಿಗಳು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರು , ಮನೆಗಳ್ಳತನ ಮಾಡಲು ಬಳಸುತ್ತಿದ್ದ ಪರಿಕರಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share