ಸ್ವಾತಂತ್ರದ ಅಮೃತ ಮಹೋತ್ಸವ : ಫಿಟ್ ಇಂಡಿಯಾ ಓಟಕ್ಕೆ ಚಾಲನೆ

260
Share

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟಕ್ಕೆ ಚಾಲನೆ

ಮೈಸೂರು,- 75ನೇ ಸ್ವಾತಂತ್ರ್ಯ ಮಹೋತ್ಸವ ಆಚರಣೆಯ ಅಂಗವಾಗಿ ಶುಕ್ರವಾರ ಜೆ.ಪಿ.ನಗರದಲ್ಲಿರುವ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ 2.0 ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನೆಹರು ಯುವಕೇಂದ್ರ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಫೀಲ್ಡ್ ಔಟ್‍ರೀಚ್ ಬ್ಯೂರೋ, ನ್ಯಾಷನಲ್ ಅಡ್ವೆಂಚರ್ ಫೌಂಡೇಶನ್, ಎಜೆ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಪಾಲಿಕೆ ಸದಸ್ಯರಾದ ಶಾರದಮ್ಮ ಎಂ. ಈಶ್ವರ್ ಅವರು ಚಾಲನೆ ನೀಡಿದರು.
ತಂತ್ರಜ್ಞಾನದ ಬೆಳವಣಿಗೆಯು ಜನರನ್ನು ನಿಷ್ಕ್ರಿಯಗೊಳಿಸಿ ಚಟುವಟಿಕೆಯಿಲ್ಲದ ಜೀವನ ಶೈಲಿಯತ್ತ ಕರೆದುತಂದಿದೆ. ಹೀಗಾಗಿ ಇಂದಿನ ಕಾಲದಲ್ಲಿ ವ್ಯಾಯಾಮವು ಅವಶ್ಯಕವಾಗಿದೆ ಎಂದು ಜನ ಕ್ಷೇತ್ರಸಂಪರ್ಕ ವಿಭಾಗದ ಉಪ ನಿರ್ದೇಶಕಿ ಡಾ. ಟಿ.ಸಿ. ಪೂರ್ಣಿಮಾ ಹೇಳಿದರು.
ಫಿಟಿ ಇಂಡಿಯಾ ಆಂದೋಲನದ ಅಂಗವಾಗಿ ಸ್ವಾತಂತ್ರ್ಯ ಓಟ ಆಯೋಜಿಸಲಾಗಿದೆ. ದೇಹ ಸದೃಢವಾಗಿದ್ದರೆ ಮನಸ್ಸು ಸದೃಢವಾಗಿರುತ್ತದೆ. ಅದರಿಂದ ಅಲೋಚನೆಗಳು ಸದೃಢವಾಗಿ ಸದೃಢ ದೇಶದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ನೆಹರು ಯುವ ಕೇಂದ್ರದ ಉಪ ನಿರ್ದೇಶಕ ಎಸ್.ಸಿದ್ದರಾಮಪ್ಪ ಅವರು ಹೇಳಿದರು.
ಜೆಪಿ ನಗರ ರೋಟರಿ ಕ್ಲಬ್ ಅಧ್ಯಕ್ಷರಾದ ಕೆ. ಎಸ್. ಕುಮಾರ್, ಮೈಸೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ. ಸುರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಆರ್.ರಾಜು, ಹಿರಿಯ ಪತ್ರಕರ್ತರಾದ ಪ್ರಗತಿ ಗೋಪಾಲಕೃಷ್ಣ, ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್‍ನ ನಿರ್ದೇಶಕರಾದ ರುಕ್ಮಿಣಿ ಚಂದ್ರನ್, ಎ.ಜೆ ಫೌಂಡೇಶನ್‍ನ ಅಧ್ಯಕ್ಷರಾದ ಸಿ.ಎಸ್. ನಾಗೇಂದ್ರ ಮತ್ತಿತರ ಗಣ್ಯರು ಭಾಗವಹಿಸಿದ್ದರು.


Share