ಹೃದಯ ಸ್ಪಂದನ ಆಪ್ತ ಸಮಾಲೋಚನಾ ಕೇಂದ್ರ

162
Share

 

ಮೈಸೂರಿನ ವಯೋವೃದ್ಧರಿಗೆ ಸ್ಪಂದಿಸಲಿರುವ ಹೃದಯ ಸ್ಪಂದನ ಆಪ್ತ ಸಮಾಲೋಚನಾ ಕೇಂದ್ರ

ಮೈಸೂರು: ಮೈಸೂರಿನ ಹಾರ್ಟ್ ಸಂಸ್ಥೆಯು ಕುವೆಂಪುನಗರ 2ನೇ ಹಂತದಲ್ಲಿರುವ ವಿಕಲಚೇತನದ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಡಿಯಲ್ಲಿ ನಡೆಸುತ್ತಿರುವ ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಸ್ಥಾಪಿಸಿರುವ “ಹೃದಯ ಸ್ಪಂದನ” ಆಪ್ತ ಸಮಾಲೋಚನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ನ್ಯೂ ಡಯಾಕೇರ್ ಸೆಂಟರ್‍ನ ಮುಖ್ಯಸ್ಥರಾದ ಡಾ. ಎ.ಆರ್. ರೇಣುಕಾಪ್ರಸಾದ್ ಮೈಸೂರಿನ ವಯೋವೃದ್ಧರಿಗೆ ಸ್ಪಂದಿಸಲಿರುವ ಹೃದಯ ಸ್ಪಂದನ ಆಪ್ತ ಸಮಾಲೋಚನಾ ಕೇಂದ್ರದ ಸದುಪಯೋಗವನ್ನು ಎಲ್ಲಾ ಹಿರಿಯ ನಾಗರೀಕರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಆಪ್ತಸಮಾಲೋಚನಾ ಕೆಂದ್ರದ ಹಿನ್ನೆಲೆ ಮತ್ತು ಅದರ ರೂಪುರೇಷೆಗಳ ಬಗ್ಗೆ ಪ್ರಾಸ್ತಾವಿಕ ನುಡಿಯನ್ನು ನುಡಿದದ ಹಾರ್ಟ್ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ಮಾತನಾಡಿ ಪ್ರಸ್ತುತ ವಯೋವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿರುವ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು ಹಾಗೂ ಸಾಮಾಜಿಕ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುತ್ತಿರುವವರಿಗೆ ಸ್ಪಂದಿಸುವ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಆಪ್ತವಾಗಿ ಸಮಾಲೋಚಿಸುವ ಸಲುವಾಗಿ “ಹೃದಯ ಸ್ಪಂದನ” ಆಪ್ತ ಸಮಾಲೋಚನಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆÉ ಜೊತೆಗೆ ಮಾನವೀಯತೆ ಮತ್ತು ಸಾಮರಸ್ಯದ ಬದುಕಿಗೆ ನೀರೆರೆದು ಪೋಷಿಸುವ ಕೆಲಸವನ್ನು ಈ ಸಂಸ್ಥೆಯು ಕಾರ್ಯ ನಿರ್ವಹಿಸಲಿದೆ ಎಂದರು.

ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿಮಾಲಯ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಅನಂತ್‍ರವರು ಮಾತನಾಡಿ ಈ ಕೇಂದ್ರವು ಕುಟುಂಬದ ಕಲಹಗಳು, ಮನಸ್ತಾಪಗಳು, ಹಾಗೂ ಹೊಂದಾಣಿಕೆ ಕೊರತೆಯಿಂದಾಗುವ ಖಿನ್ನತೆಗಳಿಗೆ ಆಪ್ತಸಮಾಲೋಚನೆ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದರು.

ಉದ್ಘಾಟನೆಯ ನಂತರ “ಆರೋಗ್ಯಯುತ ಜೀವನಕ್ಕೆ ಆಯುರ್ವೇದ ಮಹತ್ವ ” ಕುರಿತು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಬೆಂಗಳೂರಿನ ಪ್ರಾಧ್ಯಾಪಕರು ಮತ್ತು ಆಯುರ್ವೇದ ತಜ್ಞರಾದ ಡಾ. ಎಂ. ಮಹೇಶ್ ಶರ್ಮರವರಿಂದ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗ್ರೀನ್ ಸಂಸ್ಥೆಯ ಪ್ರತಿನಿಧಿಯಾಗಿ ಶ್ರೀ ಸಿದ್ದರಾಮಪ್ಪ, ನಾಗರಾಜು ಮತ್ತು ಹಾರ್ಟ್ ಸಂಸ್ಥೆಯ ಕಾರ್ಯಕಾರಿ ಸದಸ್ಯರಾದ ವಿ.ಜೆ. ಮಿಂಚು ಹಾಗೂ ಹಿರಿಯ ನಾಗರೀಕರು ಹಾಜರಿದ್ದರು.


Share