ಶ್ರೀ ಆಂಜನೇಯ ಚರಿತ್ರೆ : ಭಾಗ 1 : ಪುಟ 105

181
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 105
ಓಂ ನಮೋ ಹನುಮತೆ ನಮಃ

ಈ ಮಾತುಗಳನ್ನು ಕೇಳಿ ರಾಮನಿಗೆ ಸ್ವಲ್ಪ ನಿರುದ್ಸಾಹವಾದಂತಾಯಿತು. ಕೂಡಲೇ ತಮ್ಮಂದಿರನ್ನು, ಹನುಮಂತನನ್ನು ಕರೆದು ಹೀಗೆ ಹೇಳಿದ – ಮೂರು ಯೋಜನ ಸಮುದ್ರಕ್ಕೆ ಸೇತುವೆ ಕಟ್ಟುವಷ್ಟರಲ್ಲಿ ಸಾಕು ಸಾಕಾಯ್ತು . 10 ತಲೆಗಳ ರಾವಣನನ್ನು ಸಂಹರಿಸುವುದಕ್ಕೆ ಭೂಮಿ ಆಕಾಶ ಒಂದಾಯಿತು. ಈಗ ಶತಕಂಠ ರಾವಣ ಒಬ್ಬನಿದ್ದಾನೆ ಎಂದು ಆಕಾಶವಾಣಿ ಹೇಳುತ್ತಿದೆ. ಮೇಲಾಗಿ ಈ ಶತಕಂಠ ಲಂಕೆ ಆಕಾಶದಲ್ಲಿ ನಕ್ಷತ್ರ ಮಂಡಲವನ್ನು ದಾಟಿ ಸಪ್ತ ಸಮುದ್ರಗಳ ಮಧ್ಯೆ ಎಲ್ಲೋ ಇದೆಯಂತೆ . ಹೇಗೋ ಮಾಡಿ ನಾವು ಐವರು ಅಲ್ಲಿಗೆ ತಲುಪಿದರು ಅವನ ಬಳಿ ಎಷ್ಟು ಸೈನ್ಯವಿದೆಯೋ ಏನೋ ? ನಾವು ಸೈನ್ಯವಿಲ್ಲದೆ ಹೇಗೆ ಯುದ್ಧ ಮಾಡುವುದು ? ನನಗೇನು ತೋಚುತ್ತಿಲ್ಲ. ಯಾರಾದರೂ ಏನಾದರೂ ಉಪಾಯ ಹೇಳಿ.
ಶತಕಂಠ ನಗರಕ್ಕೆ ಆಗಮನ :
ಆ ಮಾತು ಕೇಳಿ ರಾಮ ಸೋದರರಲ್ಲಿ ಯಾರು ಏನು ಮಾತಾಡದೆ ಸುಮ್ಮನಿದ್ದರು. ಹನುಮಂತನು ತುಂಬಾ ಹೊತ್ತು ಏನು ಮಾತಾಡಲಿಲ್ಲ . ಆಗ ರಾಮ ಸೋದರರು ನಾಲ್ವರು ಕೂಡಿ ನೀನೇ ಮಾತಾಡದೆ ಕುಳಿತರೆ ಹೇಗೆ ? ಎಂದರು ಹಾಗೆ ಹೊಗಳಿದ್ದರಿಂದ ಹನುಮಂತನಿಗೆ ತನ್ನ ಶಕ್ತಿ ಜ್ಞಾಪಕಕ್ಕೆ ಬಂದು ಹೀಗೆ ಹೇಳಿದ – ಶ್ರೀರಾಮಚಂದ್ರ ಪ್ರಭು ನೀನು ಸಾಕ್ಷಾತ್ ವಿಶ್ವಮೂರ್ತಿ. ನಿನಗೆ ಯಾರ ಉಪಾಯ ತಾನೇ ಏಕೆ ಬೇಕು? ಆದರೂ ಕೇಳಿದೆಯಾದ್ದರಿಂದ ನನಗೆ ತೋಚಿದ್ದನ್ನು ಹೇಳುತ್ತೇನೆ ನೀನು ಒಪ್ಪುವುದಾದರೆ ಸೀತಮ್ಮನೊಡನೆ ಸೇರಿ ನೀನು ನನ್ನ ಬಲ ಭುಜದ ಮೇಲೆ ಕುಳಿತುಕೋ ಎಡಬಜದ ಮೇಲೆ ನಿನ್ನ ಮೂವರು ತಮ್ಮಂದಿರನ್ನು ಕೂರಿಸಿಕೊಳ್ಳುತ್ತೇನೆ. ನಾನು ಹಾರಿದಾಗ ಸೀತಾದೇವಿಗೆ ಭಯವಾಗುತ್ತದೆ ಅಂದುಕೊಳ್ಳುತ್ತೀಯ ? ಅವಳು ಜಗನ್ಮಾತೆ ಅವಳಿಗೆಂತ ಭಯ ? ಆದರೂ ನಾನು ಹಾರುವುದಿಲ್ಲ ಇಲ್ಲೇ ಇದ್ದು ನನ್ನ ಶರೀರವನ್ನು ಶತಕಂಠನ ಲಂಕೆಯವರೆಗೂ ಬೆಳೆಸುತ್ತೇನೆ. ನನ್ನ ರೋಮಗಳು ನಿನ್ನ ಚತುರಂಗಬಲಕ್ಕೂ, ವಾನರಸೇನೆಗೂ ಏಣಿಯ ಮೆಟ್ಟಲಿನಂತೆ ಸಹಾಯಮಾಡುತ್ತದೆ.
ಅವರು ಹಾಯಾಗಿ ಮೆಟ್ಟಿಲು ಹತ್ತುವಂತೆ ಹತ್ತಿ ನಕ್ಷತ್ರ ಮಂಡಲವನ್ನು ದಾಟಿ ಶತಕಂಠನ ಲಂಕೆಯನ್ನು ತಲುಪಬಹುದು . ದಯವಿಟ್ಟು ಉಪಾಯವನ್ನು ಒಪ್ಪಿಕೋ.
( ಮುಂದುವರೆಯುವುದು )
* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
* ಸಂಗ್ರಹ :
ಭಾಲರ
ಬೆಂಗಳೂರು


Share