ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 109

150
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 109
ಓಂ ನಮೋ ಹನುಮತೇ ನಮಃ

ಓ ಮೂಲ ಪ್ರಾಣಾಧಿಪತಿ ! ಜಯ ಜಯ ! ಮೂಲ ವಿದ್ಯೆಯನ್ನು ಹೋಗಲಾಡಿಸುವವನೇ, ಜಯ ಜಯ ! ( ಮೂಲವಿದ್ಯೆ ಎಂದರೆ ಗಾಢವಾದ ಅವಿದ್ಯೆ ) . ಬ್ರಹ್ಮ ಜ್ಞಾನಾಧಿಪತಿಯೇ ಜಯ ಜಯ ! ಶುದ್ಧ ಜ್ಞಾನವನ್ನು ಉಂಟು ಮಾಡುವವನೇ ಜಯ ಜಯ !
(ಆಂಜನೇಯ ಪದಕ್ಕೆ ಇರುವ ವ್ಯುತ್ಪತ್ತಿ ಅರ್ಥಗಳನ್ನೇ ಇಲ್ಲಿ ಸಂಬೋಧನೆಯಾಗಿ ಹೇಳುತ್ತಿದ್ದಾರೆ ) ನಿತ್ಯವಾದ ವಿವೇಕ ಉಳ್ಳವನೆ, ವಾನರ ವೀರನೇ , ಸ್ನೇಹ ಗುಣ ಇರುವವನೇ, ರಾಮಮಿತ್ರನೆ ತೇಜೋಮಯನೆ ಆಶ್ಚರ್ಯಕರನೇ, ಅಂದವಾಗಿರುವವನೇ, ತಡೆಯೇ ಇಲ್ಲದವನೇ !
ನಿನ್ನ ಹೆಸರು ಮರುತ್ ಪುತ್ರ ಅಥವಾ ಮಾರುತಿ. ಮರುತಿ ಎಂದರೆ ವಾಯು ದೇವತೆಗಳು ಎಂದು ಅರ್ಥವಿದೆ. ಆದ್ದರಿಂದ ನೀನು ಸರ್ವದೇವತೆಗಳ ಸಾರ ರೂಪನು. ಇತರರ ದುಃಖಗಳನ್ನು ಹೋಗಲಾಡಿಸುವುದು ನಿನ್ನ ಸಹಜ ಸ್ವಭಾವ. ನಿಶ್ಚಯವಾಗಿಯೂ ನೀನು ಓಂಕಾರ ರೂಪನು.
ಇಲ್ಲಿ ಹನುಮಾನ್ ಪದದ ವ್ಯುತ್ಪತ್ತಿ ಅರ್ಥಗಳನ್ನು ಹೇಳುತ್ತಿದ್ದಾರೆ. ನೀನು ಶತ್ರು ಸಂಹಾರಕ. ಆದ್ದರಿಂದ ಹನುಮಾನ್ ! ನೀನು ಹರಿಹರ ರೂಪಿಯಾದ್ದರಿಂದ ಹನುಮಾನ್! ನೀನು ಶುಭಕರನು. ವೇದಗಳ ಶಿರಸ್ಸುಗಳಲ್ಲಿ ಸಂಚರಿಸುತ್ತಿವೆ. ಸಚ್ಚಿದಾನಂದ ಸ್ಥಿತಿಯನ್ನು ಧರಿಸಿ ಇರುವೆ.
ಅವಳು ಆ ಮಂತ್ರವನ್ನು ಜಪಿಸುತ್ತಿದ್ದಂತೆ ಪಂಚವಕ್ತ್ರ ಹನುಮಂತನು ಅವಳ ತೆರಿಗೆ ಸಾಕ್ಷಾತ್ಕರಿಸಿದ.
ಶ್ಲೋಕ ॥
ವಾನರಂ ಮುಖಮೇಕಂ ತು ದ್ವಿತೀಯಂ ಸುಂಹವಕ್ತ್ರಕಂ
ತೃತೀಯಂ ಗಾರುಡಂ ವಕ್ತ್ರಂ ಚತುರ್ಥಂ ಸೌಕರಂ ಮುಖಂ
ಹಯಾನನಂ ಪಂಚಮಂ ಚಾ ಪ್ಯೇಕೈಕಂ ನಯನೈಸ್ತ್ರಿಭಿಃ
ದಶಬಾಹು ಸಮೋಪೇತಂ ದಶಾಯುಧ ಸಮನ್ವಿತಮ್ ॥
ತದಾ ಪ್ರಭೃತಿ ಕಥಿತಃ ಪಂಚಾಸ್ಯೋ ಹನುಮಾನಿತಿ
ರೂಪಂ ತಸ್ಯ ಬಭೌ ಯದ್ವದ್ ರುದ್ರಸ್ಯ ಪುರಘಾತಿನಃ ॥
ಆ ಸ್ವಾಮಿಗೆ ವಾನರ ಮುಖ, ಸಿಂಹ ಮುಖ, ಗರುಡ ಮುಖ, ವರಾಹ ಮುಖ, ಅಶ್ವ ಮುಖಗಳೆಂದು ಒಟ್ಟು ಐದು ಮುಖಗಳಿವೆ. ಒಂದೊಂದು ಮುಖದಲ್ಲೂ ಮೂರು ಮೂರು ಕಣ್ಣುಗಳಿವೆ. ಅವನಿಗೆ 10 ಕೈಗಳಿವೆ. ಅವನ ಸ್ವರೂಪವು ಲೋಕಗಳನ್ನು ದಹಿಸುವಂತಹ ಶಿವನ ರೂಪದಂತೆ ಪ್ರಕಾಶಮಾನವಾಗಿದೆ . ಆ ಮೂರ್ತಿಯನ್ನು ಪಂಚಮುಖ ಹನುಮಂತ ಎನ್ನುತ್ತಾರೆ .

( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share