ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 107

134
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 107
ಓಂ ನಮೋ ಹನುಮತೇ ನಮಃ

ಶತ ಕಂಠ ಲಂಕೆಯಲ್ಲಿ ಯುದ್ಧ
ಅತ್ತ ಶತಕಂಠನು ತನ್ನ ಅಗ್ನಿ ಪ್ರಾಕಾರವು ಆರಿ ಹೋಗಿದ್ದನ್ನು ನೋಡಿ ಸೋಮಾರಿತನವನ್ನು ಬಿಟ್ಟು ಇದೇನಿದು ಎಂದು ಪರಿಶೀಲಿಸಿದ. ಅಷ್ಟು ಹೊತ್ತಿಗೆ ಶ್ರೀರಾಮನು ಸೇನಾ ಸಮೇತನಾಗಿ ಹತ್ತಿರ ಬರುತ್ತಿದ್ದ. ಶತಕಂಠನಿಗೆ ಕೋಪ ಭುಗಿಲೆದ್ದಿತು. ಹಲ್ಲು ಕಟ ಕಟನೆ ಕಡೆಯುತ್ತ ತನ್ನ ಸೈನ್ಯವನ್ನು ಸಿದ್ಧಪಡಿಸಿಕೊಂಡು ದಾಳಿಗೆ ಇಳಿದ. ಶ್ರೀರಾಮ ಸೋದರರು ಶತಕಂಠ ಲಂಕೆಯ ಸರಹದ್ದಿಗೆ ಕಾಲಿಡುತ್ತಿದ್ದಂತೆ ಆಕಾಶ ಕಳಚಿ ಬಿದ್ದಂತೆ ಎದುರು ದಾಳಿ ಶುರುವಾಯಿತು. ಶ್ರೀರಾಮ ಈ ದಾಳಿಗೆ ಸಿದ್ಧನಾಗೇ ಇದ್ದ. ಅಳುಕದ ಪರಾಕ್ರಮದಿಂದ ಅವನು ಎದುರಿಸಿದ. ಈ ನಡುವೆ ಸುಗ್ರೀವ ಅಂಗದ ವಿಭೀಷಣ ಒಂದು ಕಡೆ, ಭರತ ಶತ್ರುಘ್ನರು ಒಂದು ಕಡೆ ವ್ಯೂಹಗಳ್ಳನ್ನು ರಚಿಸಿ ಯುದ್ಧ ಮಾಡುತ್ತಿದ್ದರು. ಹನುಮಂತನು ಮಾತ್ರ ಬಾಲವನ್ನು ಎತ್ತಿ ಹಿಡಿದುಕೊಂಡು ರಾಮನಾಮ ಹಾಡುತ್ತ ನಿಶ್ಚಿಂತನಾಗಿ ಕುಳಿತಿದ್ದ. ಅತ್ತ ಶ್ರೀ ರಾಮನು ಶತಕಂಠನೊಡನೆ ನೇರವಾಗಿ ಯುದ್ಧಕ್ಕಿಳಿದ. ಯುದ್ಧ ಘೋರವಾಗಿ ನಡೆಯುತ್ತಿದೆ.

( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share